ಟೆಸ್ಟ್ ಚಾಂಪಿಯನ್‌ಶಿಪ್ ಉಳಿಸಿಕೊಂಡ ಭಾರತ

Update: 2019-04-02 06:13 GMT

ದುಬೈ, ಎ.1: ಈ ವರ್ಷ ಆಸ್ಟ್ರೇಲಿಯದಲ್ಲಿ ಅಜೇಯ ಸರಣಿ ವಿಜಯ ಸಾಧಿಸಿದ ಟೀಂ ಇಂಡಿಯಾ ಸತತ ಮೂರನೇ ವರ್ಷ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಅಧಿಕಾರ ದಂಡವನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಗೌರವವು ಒಂದು ಮಿಲಿಯನ್ ಡಾಲರ್ ನಗದು ಬಹುಮಾನವನ್ನು ಒಳಗೊಂಡಿದೆ.

ಎಪ್ರಿಲ್ 1ನ್ನು ನಿರ್ದಿಷ್ಟ ದಿನಾಂಕವಾಗಿಟ್ಟುಕೊಂಡು ಅದುವರೆಗೆ ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಂಡ ತಂಡವನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗುತ್ತದೆ. ರ್ಯಾಂಕಿಂಗ್‌ನಲ್ಲಿ ನ್ಯೂಝಿಲ್ಯಾಂಡ್ ಎರಡನೇ ಸ್ಥಾನ ಪಡೆದಿದೆ ಎಂದು ವಿಶ್ವ ಕ್ರಿಕೆಟ್ ಮಂಡಳಿಯ ಹೇಳಿಕೆ ತಿಳಿಸಿದೆ.

‘‘ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಅಧಿಕಾರ ದಂಡವನ್ನು ಉಳಿಸಿಕೊಂಡಿರುವುದು ಹೆಮ್ಮೆ ಎನಿಸಿದೆ. ಎಲ್ಲ ವಿಭಾಗಗಳಲ್ಲಿ ನಮ್ಮ ತಂಡ

ಉತ್ತಮ ಪ್ರದರ್ಶನ ನೀಡುತ್ತಿದೆ. ಈ ಗೌರವ ಖುಷಿ ಹೆಚ್ಚಿಸಿದೆ’’ ಎಂ ು ಭಾರತ ತಂಡದ ನಾಯಕ ಕೊಹ್ಲಿ ಹೇಳಿದ್ದಾರೆ.

ಕೇನ್ ವಿಲಿಯಮ್ಸನ್ ನಾಯಕತ್ವದ ಕಿವೀಸ್ ತಂಡ ‘‘2018ರ ಐಸಿಸಿ ಸ್ಪಿರಿಟ್ ಆಫ್ ಕ್ರಿಕೆಟ್’’ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದು, ರ್ಯಾಂಕಿಂಗ್‌ನಲ್ಲಿ 108 ಅಂಕ ಗಳಿಸಿ ಎರಡನೇ ಸ್ಥಾನದೊಂದಿಗೆ 5,00,000 ಅಮೆರಿಕ ಡಾಲರ್ ನಗದು ಬಹುಮಾನ ಪಡೆದಿದೆ.

ಈ ಹಿಂದೆ ಎರಡು ಬಾರಿ ದ್ವಿತೀಯ ಸ್ಥಾನ ಗಳಿಸಿದ್ದ ದ.ಆಫ್ರಿಕ ತಂಡ ಈ ಬಾರಿ 105 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದಿದ್ದು, 2,00,000 ಡಾಲರ್ ನಗದು ಜೇಬಿಗಿಳಿಸಿದೆ. ಇಂಗ್ಲೆಂಡ್ 104 ಹಾಗೂ ಆಸ್ಟ್ರೇಲಿಯ ಸಮಾನ ಅಂಕ ಹೊಂದಿದ್ದರೂ ದಶಮಾನ ಅಂಕದಲ್ಲಿ ಮುಂದಿರುವ ಆಸೀಸ್ 1,00,000 ಡಾಲರ್ ತನ್ನದಾಗಿಸಿದೆ.

2021ರಲ್ಲಿ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ತಲುಪಲು ಟೆಸ್ಟ್ ಆಡುವ 9 ರಾಷ್ಟ್ರಗಳು 27 ಸರಣಿಗಳಲ್ಲಿ 71 ಟೆಸ್ಟ್ ಪಂದ್ಯಗಳನ್ನು ಆಡಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News