ಶಿಕಾಗೊಗೆ ಮೊದಲ ಕರಿಯ ಮಹಿಳಾ ಮೇಯರ್

Update: 2019-04-03 17:02 GMT

ಶಿಕಾಗೊ, ಎ. 3: ಅಮೆರಿಕದ ಶಿಕಾಗೊ ನಗರವು ಮಂಗಳವಾರ ಕರಿಯ ಮಹಿಳೆಯೊಬ್ಬರನ್ನು ಮೇಯರ್ ಆಗಿ ಆಯ್ಕೆ ಮಾಡಿದೆ.

ಮಾಜಿ ಫೆಡರಲ್ ಪ್ರಾಸಿಕ್ಯೂಟರ್ ಹಾಗೂ ಈಗ ಸ್ವತಂತ್ರವಾಗಿ ವಕೀಲಿ ವೃತ್ತಿ ನಡೆಸುತ್ತಿರುವ 56 ವರ್ಷದ ಲೋರಿ ಲೈಟ್‌ಫೂಟ್ ಚುನಾವಣಾ ರಾಜಕೀಯಕ್ಕೆ ಹೊಸಬರಾಗಿದ್ದಾರೆ.

ಅವರು ವೃತ್ತಿಪರ ರಾಜಕಾರಣಿಯಾಗಿರುವ ಕರಿಯರೇ ಆದ ಟೋನಿ ಪ್ರೆಕ್‌ವಿಂಕಲ್‌ರನ್ನು 74-26 ಶೇಕಡ ಮತಗಳ ಬೃಹತ್ ಅಂತರದಿಂದ ಸೋಲಿಸಿದರು.

ಆರ್ಥಿಕ ಅಸಮಾನತೆ ಮತ್ತು ಬಂದೂಕು ಹಿಂಸಾಚಾರ ಮುಂತಾದ ವಿಷಯಗಳನ್ನು ಅವರು ನಿಭಾಯಿಸಬೇಕಾಗಿದೆ.

ಅವರು ಶಿಕಾಗೊ ನಗರದ ಮೊದಲ ಆಫ್ರಿಕ-ಅಮೆರಿಕನ್ ಮಹಿಳಾ ಮೇಯರ್ ಆಗಿದ್ದಾರೆ. 1837ರಿಂದ ಶಿಕಾಗೊ ಜನರು ಕೇವಲ ಓರ್ವ ಕರಿಯ ಮೇಯರನ್ನು ಹಾಗೂ ಓರ್ವ ಮಹಿಳಾ ಮೇಯರನ್ನು ಆಯ್ಕೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News