ಭಾರತ ‘ತೆರಿಗೆ ರಾಜ’: ಟ್ರಂಪ್ ಆರೋಪ

Update: 2019-04-04 18:08 GMT

ವಾಶಿಂಗ್ಟನ್, ಎ. 4: ‘ಅತ್ಯಂತ ಹೆಚ್ಚು ತೆರಿಗೆ ವಿಧಿಸುವ ದೇಶಗಳಲ್ಲಿ’ ಭಾರತವೂ ಒಂದಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.

ಹ್ಯಾರ್ಲೆ-ಡೇವಿಡ್ಸನ್ ಬೈಕ್‌ಗಳು ಸೇರಿದಂತೆ ‘‘ಅಮೆರಿಕದ ಉತ್ಪನ್ನಗಳಿಗೆ 100 ಶೇ. ತೆರಿಗೆ ವಿಧಿಸುತ್ತಿರುವುದಕ್ಕಾಗಿ’’ ಅವರು ಭಾರತವನ್ನು ಟೀಕಿಸಿದರು.

ಮಂಗಳವಾರ ನ್ಯಾಶನಲ್ ರಿಪಬ್ಲಿಕನ್ ಕಾಂಗ್ರೆಶ್ಶನಲ್ ಸಮಿತಿಯ ವಾರ್ಷಿಕ ಔತಣಕೂಟದಲ್ಲಿ ಮಾತನಾಡಿದ ಅವರು, ಇಷ್ಟು ಅಧಿಕ ಪ್ರಮಾಣದ ತೆರಿಗೆ ಸರಿಯಲ್ಲ ಎಂದರು.

ಭಾರತವು ‘ತೆರಿಗೆ ರಾಜ’ ಹಾಗೂ ಅಮೆರಿಕದ ಉತ್ಪನ್ನಗಳಿಗೆ ಅತ್ಯಧಿಕ ತೆರಿಗೆಗಳನ್ನು ವಿಧಿಸುತ್ತಿದೆ ಎಂಬುದಾಗಿ ಟ್ರಂಪ್ ಪದೇ ಪದೇ ಹೇಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News