ಕ್ರೈಸ್ಟ್‌ಚರ್ಚ್ ಹಂತಕನ ಮಾನಸಿಕ ಪರೀಕ್ಷೆಗೆ ನ್ಯಾಯಾಲಯ ಆದೇಶ

Update: 2019-04-05 17:23 GMT

ಕ್ರೈಸ್ಟ್‌ಚರ್ಚ್ (ನ್ಯೂಝಿಲ್ಯಾಂಡ್), ಎ. 5: ನ್ಯೂಝಿಲ್ಯಾಂಡ್‌ನ ಕ್ರೈಸ್ಟ್‌ಚರ್ಚ್ ನಗರದ ಎರಡು ಮಸೀದಿಗಳಲ್ಲಿ ಹತ್ಯಾಕಾಂಡ ನಡೆಸಿದ ಆರೋಪಿಯು ಕೊಲೆ ವಿಚಾರಣೆ ಎದುರಿಸಲು ಮಾನಸಿಕವಾಗಿ ಸಮರ್ಥನಾಗಿದ್ದಾನೆಯೇ ಎಂಬುದನ್ನು ತಿಳಿಯಲು ಪರೀಕ್ಷೆಗಳಿಗೆ ಒಳಗಾಗುವಂತೆ ನ್ಯಾಯಾಧೀಶರೊಬ್ಬರು ಅವನಿಗೆ ಶುಕ್ರವಾರ ಆದೇಶ ನೀಡಿದ್ದಾರೆ.

ಮಾರ್ಚ್ 15ರಂದು ನಡೆದ ಹತ್ಯಾಕಾಂಡದಲ್ಲಿ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ 50 ಮಂದಿ ಮೃತಪಟ್ಟಿದ್ದಾರೆ.

ಆಕ್ಲಂಡ್‌ನಲ್ಲಿರುವ ಗರಿಷ್ಠ ಭದ್ರತೆಯ ಜೈಲಿನಿಂದ ಆರೋಪಿ ಬಂದೂಕುಧಾರಿ ಬ್ರೆಂಟನ್ ಟಾರಂಟ್‌ನನ್ನು ಶುಕ್ರವಾರ ವೀಡಿಯೊ ಮತ್ತು ಆಡಿಯೊ ಲಿಂಕ್ ಮೂಲಕ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ಈ ಸಂದರ್ಭದಲ್ಲಿ ಅವನನ್ನು ನೋಡಲು ದಾಳಿಯಲ್ಲಿ ಬದುಕುಳಿದವರು ಮತ್ತು ಮೃತರ ಸಂಬಂಧಿಕರು ಭಾರೀ ಸಂಖ್ಯೆಯಲ್ಲಿ ನ್ಯಾಯಾಲಯದಲಿ ಜಮಾಯಿಸಿದ್ದರು.

28 ವರ್ಷದ ಆರೋಪಿಯು 50 ಕೊಲೆ ಮತ್ತು 39 ಕೊಲೆಯತ್ನ ಆರೋಪಗಳನ್ನು ಎದುರಿಸುತ್ತಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News