ಐಪಿಎಲ್: ಹೈದರಾಬಾದ್‌ಗೆ ಸುಲಭ ಸವಾಲು

Update: 2019-04-06 16:56 GMT

 ಹೈದರಾಬಾದ್, ಎ.6: ಸಿದ್ದಾರ್ಥ್ ಕೌಲ್ ನೇತೃತ್ವದ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್ ಸಹಾಯದಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡ ಮುಂಬೈ ಇಂಡಿಯನ್ಸ್ ತಂಡ ವಿರುದ್ಧದ ಐಪಿಎಲ್‌ನ 19ನೇ ಪಂದ್ಯದಲ್ಲಿ ಗೆಲ್ಲಲು ಸುಲಭ ಸವಾಲು ಪಡೆದಿದೆ.

ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿತು. ಹೈದರಾಬಾದ್ ಗೆಲುವಿಗೆ 138 ರನ್ ಗುರಿ ನೀಡಿದೆ.

ಹೈದರಾಬಾದ್ ತಂಡದ ಬೌಲಿಂಗ್‌ಗೆ ತತ್ತರಿಸಿ ಮುಂಬೈ ಒಂದು ಹಂತದಲ್ಲಿ 97 ರನ್‌ಗೆ 7 ವಿಕೆಟ್‌ಗಳನ್ನು ಕಳೆದುಕೊಂಡಿತು.ಪೊಲಾರ್ಡ್ ಔಟಾಗದೆ 46 ರನ್(26 ಎಸೆತ, 2 ಬೌಂಡರಿ, 4 ಸಿಕ್ಸರ್)ಗಳಿಸಿ ತಂಡದ ಮೊತ್ತವನ್ನು 136ಕ್ಕೆ ತಲುಪಿಸಿ ಮರ್ಯಾದೆ ಕಾಪಾಡಿದರು. 8ನೇ ವಿಕೆಟ್‌ನಲ್ಲಿ ಪೊಲಾರ್ಡ್ ಹಾಗೂ ಜೋಸೆಫ್ ಮುರಿಯದ ಜೊತೆಯಾಟದಲ್ಲಿ 39 ರನ್ ಗಳಿಸಿದರು. ಇದರಲ್ಲಿ ಜೋಸೆಫ್ ಕೊಡುಗೆ ಶೂನ್ಯ. ಜೋಸೆಫ್ 8 ಎಸೆತ ಎದುರಿಸಿದ್ದರೂ ಒಂದೂ ರನ್ ಗಳಿಸಿಲ್ಲ.

ಹೈದರಾಬಾದ್ ಪರ ಕೌಲ್‌ರಲ್ಲದೆ ಮುಹಮ್ಮದ್ ನಬಿ(1-13), ಸಂದೀಪ್ ಶರ್ಮಾ(1-20), ರಶೀದ್ ಖಾನ್(1-27) ಹಾಗೂ ಭುವನೇಶ್ವರ ಕುಮಾರ್(1-34)ತಲಾ ಒಂದು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News