×
Ad

ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರಾಧ್ಯಕ್ಷರಾಗಿ ಸೈಯದ್ ಸಾದತುಲ್ಲಾ ಹುಸೈನಿ

Update: 2019-04-06 23:15 IST

ಹೈದರಾಬಾದ್,ಎ.7: 2019-2023ನೇ ಅವಧಿಗೆ ಜಮಾತೆ ಇಸ್ಲಾಮಿ ಹಿಂದ್‌ನ ರಾಷ್ಟ್ರೀಯ ಅಧ್ಯಕ್ಷರಾಗಿ ಸೈಯದ್ ಸಾದತುಲ್ಲಾ ಹುಸೈನಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘಟನೆಯ ಅಧಿಕೃತ ಜಾಲತಾಣದಲ್ಲಿ ತಿಳಿಸಲಾಗಿದೆ.

ಸಂಘಟನೆಯ ಅತ್ಯಂತ ಪ್ರಭಾವೀ ಅಂಗವಾಗಿರುವ, 157 ಸದಸ್ಯರನ್ನೊಳಗೊಂಡ ಪ್ರತಿನಿಧಿಗಳ ಮಂಡಳಿ ಎರಡು ದಿನಗಳ ದೀರ್ಘ ಚರ್ಚೆಯ ನಂತರ ನಡೆದ ಸಭೆಯಲ್ಲಿ ಹುಸೈನಿಯವರನ್ನು ಸಂಘಟನೆಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ಹುಸೈನಿಯವರು ಮೌಲಾನಾ ಜಲಾಲುದ್ದೀನ್ ಉಮರಿಯವರಿಂದ ಅಧಿಕಾರ ಪಡೆದುಕೊಳ್ಳಲಿದ್ದಾರೆ.

1973ರಲ್ಲಿ ಜನಿಸಿದ ಹುಸೈನಿ, ಇಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕದಲ್ಲಿ ಇಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ. ಇದಕ್ಕೂ ಮೊದಲು ಅವರು ಜಮಾತೆ ಇಸ್ಲಾಮಿ ಹಿಂದ್‌ನ ಉಪಾಧ್ಯಕ್ಷರಾಗಿ ಮತ್ತು ಕೇಂದ್ರ ಸಲಹಾ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇಸ್ಲಾಮಿಕ್ ವಿದ್ಯಾರ್ಥಿಗಳ ಸಂಘಟನೆ (ಎಸ್‌ಐಒ)ಯ ರಾಷ್ಟ್ರೀಯ ಅಧ್ಯಕ್ಷರಾಗಿಯೂ ಅವರು ಎರಡು ಅವಧಿಗೆ ಕಾರ್ಯನಿರ್ವಹಿಸಿದ್ದಾರೆ. ಅವರು 12 ಪುಸ್ತಕಗಳನ್ನು ಬರೆದಿದ್ದು ಉರ್ದು ಮತ್ತು ಇಂಗ್ಲಿಷ್ ಭಾಷೆಯಲ್ಲಿ 200ಕ್ಕೂ ಅಧಿಕ ಲೇಖನಗಳನ್ನು ಬರೆದಿದ್ದಾರೆ.

ಹುಸೈನಿಯವರು ಹೊಸದಿಲ್ಲಿಯ ಹ್ಯೂಮನ್ ವೆಲ್ಫೇರ್ ಪ್ರತಿಷ್ಠಾನದ ಮಂಡಳಿ ಸದಸ್ಯ, ಅಧ್ಯಯನ ಮತ್ತು ಸಂಶೋಧನೆ ಕೇಂದ್ರ, ಹೊಸದಿಲ್ಲಿ ಇದರ ನಿರ್ದೇಶಕರಾಗಿ ಮತ್ತು ಜಮೀಯ್ಯತುಲ್ ಫಲಾಹ್, ಆಝಮ್‌ಗಡ್ ಇದರ ಸಲಹಾ ಮಂಡಳಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು, ಇದರ ಇ ತಹ್ಕೀಕ್ ವ ತಸ್ನೀಫೆ ಇಸ್ಲಾಮಿ, ಆಲಿಘಡ್ ಇದರ ಆಜೀವ ಸದಸ್ಯ, ಹೊಸದಿಲ್ಲಿಯ ಇಸ್ಲಾಮಿಕ್ ಅಕಾಡೆಮಿ ಟ್ರಸ್ಟ್‌ನ ಟ್ರಸ್ಟಿ, ಹೊಸದಿಲ್ಲಿಯ ಇಸ್ಲಾಮಿಕ್ ಪಬ್ಲಿಕೇಶನ್ಸ್‌ನ ಮಂಡಳಿ ಸದಸ್ಯ, ಹೊಸದಿಲ್ಲಿಯ ಎಂಎಂಐ ಪಬ್ಲಿಶರ್ಸ್, ತಸ್ನೀಫ್‌ ಅಕಾಡೆಮಿ ಸಂಪಾದಕೀಯ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News