ಹಸಿರು ಜೆರ್ಸಿ ಧರಿಸಿ ಆಡಿದ ಆರ್‌ಸಿಬಿ

Update: 2019-04-07 18:54 GMT

 ಬೆಂಗಳೂರು, ಎ.7: ಪರಿಸರ ಸಂರಕ್ಷ ಣೆಯ ಕುರಿತು ಸಂದೇಶ ಪಸರಿಸುವ ಉದ್ದೇಶದಿಂದ ರವಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹಸಿರು ಬಣ್ಣದ ಜೆರ್ಸಿ ಧರಿಸಿ ಆಡಿದೆ.

ಟಾಸ್ ಚಿಮ್ಮುವ ವೇಳೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹಸಿರು ಬಣ್ಣದ ಜೆರ್ಸಿ ಧರಿಸಿಕೊಂಡು ಬಂದರು. ಸಸಿಯನ್ನು ಕೈಯಲ್ಲಿ ಹಿಡಿದುಕೊಂಡು ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಅಯ್ಯರ್‌ರೊಂದಿಗೆ ಫೋಟೊಕ್ಕೆ ಪೋಸ್ ನೀಡಿದರು. ಸಂಪ್ರದಾಯದ ಪ್ರಕಾರ ಆರ್‌ಸಿಬಿ ನಾಯಕ ಕೊಹ್ಲಿ ಎದುರಾಳಿ ತಂಡದ ನಾಯಕ ಅಯ್ಯರ್‌ಗೆ ಸಸಿಯನ್ನು ನೀಡಿದರು.

ಈ ವರ್ಷ ಫ್ರಾಂಚೈಸಿಯು ಪುನರ್ ಬಳಕೆಯ ಬಗ್ಗೆ ಜನ ಜಾಗೃತಿ ಮೂಡಿಸುವತ್ತ ಚಿತ್ತವಿರಿಸಿದೆ. ಆರ್‌ಸಿಬಿ 2011ರಿಂದ ಜಾಗತಿಕ ತಾಪಮಾನದ ಕುರಿತು ಜಾಗೃತಿ ಮೂಡಿಸಲು ಈ ಅಭ್ಯಾಸವನ್ನು ಪಾಲಿಸಿಕೊಂಡು ಬಂದಿದೆ. ಮರಗಿಡಗಳನ್ನು ನೆಡುವ ಬಗ್ಗೆ ಆರ್‌ಸಿಬಿ ಮುಂದಡಿ ಇಟ್ಟಿದೆ. ಇಂಧನ ಉಳಿಸುವ ಸಲುವಾಗಿ ಬಸ್‌ನಲ್ಲೇ ಪ್ರಯಾಣಿಸಿ ಎಂದು ಈ ಹಿಂದೆ ತನ್ನ ಅಭಿಮಾನಿಗಳಿಗೆ ಆರ್‌ಸಿಬಿ ಕರೆ ನೀಡಿತ್ತು. 2016ರಲ್ಲಿ ಬೆಂಗಳೂರು ಫ್ರಾಂಚೈಸಿ ಆಟಗಾರರು ಸೈಕಲ್‌ನಲ್ಲಿ ಸ್ಟೇಡಿಯಂ ತಲುಪಿದ್ದರು. ಅಭಿಮಾನಿಗಳಿಗೆ ಸ್ಟೇಡಿಯಂಗೆ ಬರಲು ಸಿಎನ್‌ಜಿ ರಿಕ್ಷಾಗಳನ್ನು ವ್ಯವಸ್ಥೆ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News