ಫ್ರೆಂಚ್ ಆಸ್ಪತ್ರೆಯಿಂದ ಬಿಡುಗಡೆಯಾಗಿ ಬ್ರೆಝಿಲ್‌ಗೆ ವಾಪಸಾದ ಪೀಲೆ

Update: 2019-04-09 06:19 GMT

ಸಾವೊಪೌಲೊ, ಎ.9: ಮೂತ್ರಸೋಂಕಿನ ಸಮಸ್ಯೆಯಿಂದ ಬಳಲುತ್ತಿದ್ದ ಬ್ರೆಝಿಲ್ ಫುಟ್ಬಾಲ್ ದಂತಕತೆ ಪೀಲೆ ಸೋಮವಾರ ಫ್ರಾನ್ಸ್ ಆಸ್ಪತ್ರೆಯಿಂದ ಬಿಡುಗಡೆಯಾಗಿ ತಾಯ್ನೆಡಿಗೆ ವಾಪಸಾಗಿದ್ದಾರೆ.

78ರ ಹರೆಯದ ಪೀಲೆ ಕಳೆದ ಕೆಲವು ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದಾಗಿ ಪದೇ ಪದೇ ಆಸ್ಪತ್ರೆಗೆ ದಾಖಲಿಸಲ್ಪಡುತ್ತಿದ್ದಾರೆ. ಕಳೆದ ಬುಧವಾರದಿಂದ ಫ್ರಾನ್ಸ್‌ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

 ‘‘ನಾನು ಮತ್ತೆ ಕೆಲಸ ಮಾಡಲು ಸಜ್ಜಾಗಿದ್ದೇನೆ. ನನಗೆ ಮೂತ್ರ ಸೋಂಕಿನ ಸಮಸ್ಯೆಯಿತ್ತು. ತುರ್ತು ವೈದ್ಯಕೀಯ ಉಪಚಾರದ ಅಗತ್ಯವಿತ್ತು. ನನ್ನ ಕುರಿತು ಧನ್ಮಾತಕವಾಗಿ ಯೋಚಿಸಿರುವ ಹಾಗೂ ಶುಭ ಕೋರಿದವರಿಗೆ ಧನ್ಯವಾದ ಸಮರ್ಪಿಸುತ್ತೇನೆ’’ ಎಂದು ಫುಟ್ಬಾಲ್ ದಿಗ್ಗಜ ಪೀಲೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News