ಪಾಕ್‌ಗೆ ಐಎಂಎಫ್ ಸಾಲ ವಿರೋಧಿಸಿ ಟ್ರಂಪ್ ಸರಕಾರಕ್ಕೆ ಅಮೆರಿಕ ಸಂಸದರ ಪತ್ರ

Update: 2019-04-09 17:09 GMT

ವಾಶಿಂಗ್ಟನ್, ಎ. 9: ತನ್ನ ವಿದೇಶಿ ವಿನಿಮಯ ಬಿಕ್ಕಟ್ಟಿನಿಂದ ಪಾರಾಗಲು ನೆರವು ನೀಡುವಂತೆ ಪಾಕಿಸ್ತಾನ ಅಂತರ್‌ರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಗೆ ಸಲ್ಲಿಸಿರುವ ಕೋರಿಕೆಯನ್ನು ವಿರೋಧಿಸುವಂತೆ ಅಮೆರಿಕದ ಮೂವರು ಸಂಸದರು ಟ್ರಂಪ್ ಆಡಳಿತವನ್ನು ಒತ್ತಾಯಿಸಿದ್ದಾರೆ.

ಪಾಕಿಸ್ತಾನವು ಈ ಹಣವನ್ನು ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಅಡಿಯಲ್ಲಿ ಬರುವ ಯೋಜನೆಗಳಿಗಾಗಿ ಚೀನಾದಿಂದ ಪಡೆದುಕೊಂಡಿರುವ ಸಾಲವನ್ನು ಮರುಪಾವತಿಸಲು ಬಳಸುತ್ತದೆ ಎಂದು ಅವರು ಹೇಳಿದ್ದಾರೆ.

‘‘ಚೀನಾ ನಿರ್ಮಿತ ಮೂಲಸೌಕರ್ಯ ಯೋಜನೆಗಳಿಗಾಗಿ ಪಡೆದುಕೊಂಡಿರುವ ಸಾಲವನ್ನು ಆ ದೇಶಕ್ಕೆ ಮರಳಿಸಲು ಪಾಕಿಸ್ತಾನವು ಸಾಲ ನೀಡುವಂತೆ ಐಎಂಎಫ್‌ಗೆ ಕೋರಿಕೆ ಸಲ್ಲಿಸಿದೆ. ಈ ಬಗ್ಗೆ ಗಂಭೀರ ಕಳವಳವನ್ನು ವ್ಯಕ್ತಪಡಿಸಿದ ನಾವು ಈ ಪತ್ರ ಬರೆದಿದ್ದೇವೆ’’ ಎಂಬುದಾಗಿ ರಿಪಬ್ಲಿಕನ್ ಪಕ್ಷದ ಸಂಸದರಾದ ಟೆಡ್ ಯೊಹೊ ಮತ್ತು ಜಾರ್ಜ್ ಹೋಲ್ಡಿಂಗ್ ಹಾಗೂ ಡೆಮಾಕ್ರಟಿಕ್ ಪಕ್ಷದ ಸಂಸದೆ ಆ್ಯಮಿ ಬೇರಾ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಮತ್ತು ಖಜಾನೆ ಕಾರ್ಯದರ್ಶಿ ಸ್ಟೀವನ್ ಮನುಚಿನ್‌ಗೆ ಬರೆದ ಜಂಟಿ ಪತ್ರದಲ್ಲಿ ಹೇಳಿದ್ದಾರೆ.

ಈ ಮೂಲಸೌಕರ್ಯ ಯೋಜನೆಗಳಿಗಾಗಿ ಪಾಕಿಸ್ತಾನವು ಚೀನಾಕ್ಕೆ ಸಾವಿರಾರು ಕೋಟಿ ಡಾಲರ್ ಸಾಲ ಮರುಪಾವತಿಯನ್ನು ಮಾಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News