ಕ್ರೈಸ್ತ ಸನ್ಯಾಸಿನಿ ಅತ್ಯಾಚಾರ ಪ್ರಕರಣ: ಬಿಷಪ್ ಫ್ರಾಂಕೊ ವಿರುದ್ಧ ಆರೋಪಪಟ್ಟಿ ದಾಖಲು

Update: 2019-04-09 17:47 GMT

ತಿರುವನಂತಪುರಂ, ಎ.9: ಕೇರಳದ ಕ್ರೈಸ್ತ ಸನ್ಯಾಸಿನಿಯ ಅತ್ಯಾಚಾರ ಪ್ರಕರಣದಲ್ಲಿ ಜಲಂಧರ್ ಬಿಷಪ್ ಫ್ರಾಂಕೊ ಮುಲಕ್ಕಲ್ ವಿರುದ್ಧ ಕೇರಳದ ಪಾಲದಲ್ಲಿರುವ ಜ್ಯುಡಿಷಿಯಲ್ ಪ್ರಥಮ ದರ್ಜೆ ನ್ಯಾಯಾಲಯದಲ್ಲಿ ಮಂಗಳವಾರ ಆರೋಪಪಟ್ಟಿ ದಾಖಲಾಗಿದೆ.

ತನಿಖಾಧಿಕಾರಿಯಾಗಿರುವ ವೈಕಂ ಡೆಪ್ಯುಟಿ ಎಸ್ಪಿ ಕೆ ಸುಭಾಷ್ ನೇತೃತ್ವದ ತಂಡವು ನ್ಯಾಯಾಲಯದಲ್ಲಿ ಆರೋಪಪಟ್ಟಿ ದಾಖಲಿಸಿದೆ. ಮೇಜರ್ ಆರ್ಚ್‌ಬಿಷಪ್ ಕಾರ್ಡಿನಲ್ ಜಾರ್ಜ್ ಅಲೆಂಚರಿ, ಪಾಲ ಧರ್ಮಪ್ರಾಂತ್ಯದ ಬಿಷಪ್ ಜೋಸೆಫ್ ಕಲರಂಗಟ್, ಭಗಲ್‌ಪುರ ಬಿಷಪ್ ಕುರಿಯನ್ ವಲಿಯಕಂಡತಿಲ್, ಉಜ್ಜೈನ್ ಧರ್ಮಪ್ರಾಂತ್ಯದ ಬಿಷಪ್ ಸೆಬಾಸ್ಟಿಯನ್ ವಡಕ್ಕೆಲ್ , 25 ಕ್ರೈಸ್ತ ಸನ್ಯಾಸಿನಿಯರು, 11 ಪಾದ್ರಿಗಳ ಸಹಿತ 83 ಮಂದಿ ಈ ಪ್ರಕರಣದಲ್ಲಿ ಸಾಕ್ಷಿಗಳಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News