×
Ad

ಯುರೋಪಿಯನ್ ಕಂಪೆನಿಯಿಂದ ಜೆಟ್ ಏರ್‌ವೇಸ್‌ನ ವಿಮಾನ ವಶ

Update: 2019-04-10 23:28 IST

ಹೊಸದಿಲ್ಲಿ, ಎ. 10: ಬಾಕಿ ಪಾವತಿ ಮಾಡದಿರುವ ಹಿನ್ನೆಲೆಯಲ್ಲಿ ಜೆಟ್ ಏರ್‌ವೇಸ್‌ನ ಒಂದು ವಿಮಾನವನ್ನು ಕಾರ್ಗೊ ಸೇವೆ ನೀಡುತ್ತಿರುವ ಯುರೋಪ್‌ನ ಸಂಸ್ಥೆ ಆ್ಯಮ್‌ಸ್ಟರ್‌ಡ್ಯಾಮ್‌ನ ವಶಕ್ಕೆ ಪಡೆದುಕೊಂಡಿದೆ. ವಿಮಾನ ಆ್ಯಮ್‌ಸ್ಟರ್‌ಡ್ಯಾಮ್‌ನಿಂದ ಮುಂಬೈಗೆ ಸಂಚರಿಸುತ್ತಿತ್ತು.

‘‘ಬಾಕಿ ಪಾವತಿ ಮಾಡದಿರುವುದಕ್ಕೆ ಜೆಟ್ ಏರ್‌ವೇಸ್‌ನ ಬೋಯಿಂಗ್ 777-300 ಇಆರ್ (ವಿಟಿ-ಜೆಇಡಬ್ಲು) ವಿಮಾನವನ್ನು ಆ್ಯಮ್‌ಸ್ಟರ್‌ಡ್ಯಾಮ್ ವಿಮಾನ ನಿಲ್ದಾಮದಲ್ಲಿ ಕಾರ್ಗೋ ಏಜೆಂಟ್ ವಶಪಡಿಸಿಕೊಂಡಿದೆ.’’ ಎಂದು ಜೆಟ್ ಏರ್‌ವೇಸ್‌ನ ಮೂಲಗಳು ತಿಳಿಸಿವೆ.

ತೈಲ ಪೂರೈಕೆ ಸ್ಥಗಿತಗೊಳಿಸಿದ ಇಂಡಿಯನ್ ಆಯಿಲ್

ಬಾಕಿ ಪಾವತಿ ಮಾಡದಿರುವ ಹಿನ್ನೆಲೆಯಲ್ಲಿ ಸಾಲದ ಹೊರೆಯಿಂದ ಬಳಲುತ್ತಿರುವ ಜೆಟ್ ಏರ್‌ವೇಸ್‌ಗೆ ತೈಲ ಪೂರೈಕೆಯನ್ನು ಇಂಡಿಯನ್ ಆಯಿಲ್ ಬುಧವಾರ ಸ್ಥಗಿತಗೊಳಿಸಿದೆ ಎಂದು ಪರಿಸ್ಥಿತಿ ಬಗ್ಗೆ ಅರಿವಿರುವ ಮೂಲಗಳು ತಿಳಿಸಿವೆ. ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಜೆಟ್ ಏರ್‌ವೇಸ್‌ಗೆ ಇಂಡಿಯನ್ ಆಯಿಲ್ ತೈಲ ಪೂರೈಕೆ ಸ್ಥಗಿತಗೊಳಿಸುತ್ತಿರುವುದು ಇದು ಎರಡನೇ ಬಾರಿ. ಈ ಬಗ್ಗೆ ಇಡಿಯನ್ ಆಯಿಲ್ ಅಥವಾ ಜೆಟ್ ಏರ್‌ವೇಸ್ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News