ಫೇಸ್‌ಬುಕ್‌ನಲ್ಲಿ ಕೊಲೆ ಬೆದರಿಕೆ ಹಾಕಿದ್ದ ಕ್ರೈಸ್ಟ್‌ಚರ್ಚ್ ಹಂತಕ

Update: 2019-04-10 18:12 GMT

ಸಿಡ್ನಿ (ಆಸ್ಟ್ರೇಲಿಯ), ಎ. 10: ಕಳೆದ ತಿಂಗಳು ನ್ಯೂಝಿಲ್ಯಾಂಡ್‌ನ ಕ್ರೈಸ್ಟ್‌ಚರ್ಚ್ ನಗರದಲ್ಲಿನ ಎರಡು ಮಸೀದಿಗಳ ಮೇಲೆ ದಾಳಿ ನಡೆಸಿ 50 ಮಂದಿಯನ್ನು ಕೊಂದ ಆಸ್ಟ್ರೇಲಿಯದ ವ್ಯಕ್ತಿಯು, 2016ರಲ್ಲಿ ಫೇಸ್‌ ಬುಕ್‌ ನಲ್ಲಿ ವ್ಯಕ್ತಿಯೊಬ್ಬರಿಗೆ ಕೊಲೆಬೆದರಿಕೆ ಹಾಕಿದ್ದನು ಎಂದು ಮಾಧ್ಯಮಗಳು ಬುಧವಾರ ವರದಿ ಮಾಡಿವೆ.

ಆಗ, ಬೆದರಿಕೆ ಹಾಕಿದವನನ್ನು ‘ಬ್ಲಾಕ್’ ಮಾಡುವಂತೆ ಪೊಲೀಸರು ಬೆದರಿಕೆಗೆ ಒಳಗಾದ ವ್ಯಕ್ತಿಗೆ ಸಲಹೆ ನೀಡಿದ್ದರು.
 ಕ್ರೈಸ್ಟ್‌ಚರ್ಚ್ ಹಂತಕ ಬ್ರೆಂಟನ್ ಟಾರಂಟ್ ಮತ್ತು ಮೆಲ್ಬರ್ನ್ ನಗರದ ವ್ಯಕ್ತಿಯೊಬ್ಬರ ನಡುವೆ 2016 ಆಗಸ್ಟ್‌ನಲ್ಲಿ ಫೇಸ್‌ಬುಕ್‌ನಲ್ಲಿ ನಡೆದ ಸಂಭಾಷಣೆಯ ಸ್ಕ್ರೀನ್‌ಶಾಟನ್ನು ಎಬಿಸಿ ಸುದ್ದಿ ಚಾನೆಲ್ ಪ್ರಸಾರ ಮಾಡಿದೆ. ‘‘ನಿನಗೆ ಒಂದು ದಿನಜ್ಞಾನೋದಯ ಆಗುತ್ತದೆ ಎಂದು ನಾನು ಭಾವಿಸುತ್ತೇನೆ. ಒಂದು ವೇಳೆ ನೀನು ಮಾರ್ಕ್ಸಿಸ್ಟ್ ಆಗಿದ್ದರೆ, ಒಂದು ದಿನ ನೇಣು ಕುಣಿಕೆಯನ್ನು ನೋಡುತ್ತೀಯ ಎಂದು ನಾನು ಆಶಿಸುತ್ತೇನೆ’’ ಎಂಬುದಾಗಿ ಹಂತಕನು ಬರೆದಿದ್ದನು.

ಈ ಮಾತುಗಳನ್ನು ‘ಬಿಳಿಯ ಶ್ರೇಷ್ಠತಾವಾದ’ವನ್ನು ಪ್ರತಿಪಾದಿಸುವ ಕಾದಂಬರಿಯೊಂದರಿಂದ ಆಯ್ದುಕೊಳ್ಳಲಾಗಿದೆ. ಪ್ರೊಫೆಸರ್‌ಗಳು, ವಕೀಲರು ಮತ್ತು ಪತ್ರಕರ್ತರು ಮುಂತಾದ ‘ಜನಾಂಗೀಯ ದ್ರೋಹಿ’ಗಳನ್ನು ಸಾರ್ವಜನಿಕವಾಗಿಗಲ್ಲಿಗೇರಿಸಬೇಕು ಎಂಬುದಾಗಿ ಆ ಕಾದಂಬರಿ ಪ್ರತಿಪಾದಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News