ಬಂದೂಕು ನಿಯಂತ್ರಣ ಮಸೂದೆ ಅಂಗೀಕಾರ

Update: 2019-04-10 18:14 GMT

ವೆಲ್ಲಿಂಗ್ಟನ್, ಎ. 10: ನ್ಯೂಝಿಲ್ಯಾಂಡ್‌ನ ಬಂದೂಕು ಕಾನೂನುಗಳಿಗೆ ತಿದ್ದುಪಡಿ ತರುವ ಮಸೂದೆಯ ಪರವಾಗಿ ಬುಧವಾರ ಒಬ್ಬರನ್ನು ಹೊರತುಪಡಿಸಿ ದೇಶದ ಸಂಸತ್ತಿನ ಎಲ್ಲ ಸಂಸದರು ಮತ ಚಲಾಯಿಸಿದರು.

ಮಾರ್ಚ್ 15ರಂದು ಕ್ರೈಸ್ಟ್‌ಚರ್ಚ್ ಮಸೀದಿಗಳ ಮೇಲೆ ನಡೆದ ದಾಳಿಗಳಿಗೆ ತಿಂಗಳು ತುಂಬುವ ಮೊದಲೇ ಈ ಮಸೂದೆ ಅಂಗೀಕಾರಗೊಂಡಿದೆ.
ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದಾಗ ಅದನ್ನು 119-1 ಮತಗಳಿಂದ ಅಂಗೀಕರಿಸಲಾಯಿತು. ಇನ್ನು ಅದಕ್ಕೆ ಗವರ್ನರ್ ಜನರಲ್ ಸಹಿ ಹಾಕಿದ ಬಳಿಕ, ಅದು ಕಾನೂನಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News