×
Ad

ಭಾವಿಸಿರುವುದಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಕರಗುತ್ತಿರುವ ಹಿಮನದಿಗಳು

Update: 2019-04-10 23:49 IST

ಬರ್ಲಿನ್, ಎ. 10: ಭೂಮಿಯ ಹಿಮನದಿಗಳು ವಿಜ್ಞಾನಿಗಳು ಭಾವಿಸಿರುವುದಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಕರಗುತ್ತಿವೆ ಎಂಬುದಾಗಿ ನೂತನ ಅಧ್ಯಯನವೊಂದು ಹೇಳಿದೆ.

ಈ ಹಿಮನದಿಗಳು ಪ್ರತಿ ವರ್ಷ 36,900 ಕೋಟಿ ಟನ್ ಹಿಮವನ್ನು ಕಳೆದುಕೊಳ್ಳುತ್ತಿವೆ ಹಾಗೂ ಇದರ ಅರ್ಧಕ್ಕೂ ಹೆಚ್ಚಿನ ಭಾಗ ಉತ್ತರ ಅಮೆರಿಕದಲ್ಲಿ ಸಂಭವಿಸುತ್ತಿದೆ ಎಂದು ಝೂರಿಕ್ ವಿಶ್ವವಿದ್ಯಾನಿಲಯದ ವಿಶ್ವ ಹಿಮನದಿ ನಿಗಾ ಕೇಂದ್ರದನಿರ್ದೇಶಕ ಹಾಗೂ ಸಂಶೋಧನೆಯ ಪ್ರಧಾನ ಲೇಖಕ ಮೈಕಲ್ ಝೆಂಪ್ ಹೇಳಿದ್ದಾರೆ.

ಭೂಮಿಯ ಮೇಲಿನ ಸಾವಿರಾರು ಹಿಮನದಿಗಳ ಹಿಮವು, ವಿಜ್ಞಾನಿಗಳ ಅಂತರ್‌ರಾಷ್ಟ್ರೀಯ ಸಮಿತಿಯೊಂದು 2013ರಲ್ಲಿ ಲೆಕ್ಕ ಹಾಕಿರುವುದಕ್ಕಿಂತ 18 ಶೇಕಡ ಹೆಚ್ಚಿನ ವೇಗದಲ್ಲಿ ಕರಗುತ್ತಿದೆ ಎನ್ನುವುದು ಅತ್ಯಂತ ಸಮಗ್ರ ಅಳತೆಯಿಂದತಿಳಿದುಬಂದಿದೆ.

ಜಗತ್ತಿನ ನೀರ್ಗಲ್ಲು ನದಿಗಳು 1960ರ ದಶಕದಲ್ಲಿ ಕರಗುತ್ತಿದ್ದುದಕ್ಕಿಂತ ಐದು ಪಟ್ಟು ವೇಗದಲ್ಲಿ ಇಂದು ಕರಗುತ್ತಿವೆ. ಜಾಗತಿಕ ತಾಪಮಾನದಿಂದಾಗಿ ಕರಗುವಿಕೆ ಪ್ರಮಾಣ ಹೆಚ್ಚಾಗಿದೆ ಎಂದು ಅಧ್ಯಯನ ತಿಳಿಸಿದೆ.

ಹಿಮನದಿಗಳ ಅಪರಿಮಿತ ವೇಗದ ಕರಗುವಿಕೆಯು, ಈಗಾಗಲೇ ಏರುತ್ತಿರುವ ಸಮುದ್ರಗಳಿಗೆ ಇನ್ನಷ್ಟು ನೀರನ್ನು ಸೇರಿಸುತ್ತಿದೆ ಎಂದಿದೆ.

ಅತ್ಯಂತ ವೇಗವಾಗಿ ಕರಗುವ ನೀರ್ಗಲ್ಲುಗಳು ಮಧ್ಯ ಯುರೋಪ್, ಕಾಕಸ್ ವಲಯ, ಪಶ್ಚಿಮ ಕೆನಡ ಮತ್ತು ಅಮೆರಿಕದಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News