ಲಂಡನ್ ನಲ್ಲಿ ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್ ಬಂಧನ

Update: 2019-04-11 14:56 GMT

ಲಂಡನ್,ಎ.11: ಈಕ್ವೆಡಾರ್ ತಾನು ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್ ಅವರಿಗೆ ನೀಡಿದ್ದ ಆಶ್ರಯವನ್ನು ಹಿಂದೆಗೆದುಕೊಂಡ ಹಿನ್ನೆಲೆಯಲ್ಲಿ ಅವರನ್ನು ಬ್ರಿಟಿಷ್ ಪೋಲಿಸರುಗುರುವಾರ ಇಲ್ಲಿಯ ಈಕ್ವೆಡಾರ್ ರಾಯಭಾರಿ ಕಚೇರಿಯಿಂದ ಬಂಧಿಸಿದ್ದಾರೆ.

ತನ್ನ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪಗಳಿಗೆ ಸಂಬಂಧಿಸಿದಂತೆ ಸ್ವೀಡನ್ಗೆ ಗಡಿಪಾರಾಗುವುದರಿಂದ ತಪ್ಪಿಸಿಕೊಳ್ಳಲು ಈಕ್ವೆಡಾರ್ನ ಆಶ್ರಯ ಕೋರಿದ್ದ ಅಸಾಂಜ್ಜೂನ್,2012ರಿಂದ ಇಲ್ಲಿಯ ಈಕ್ವೆಡಾರ್ ರಾಯಭಾರಿ ಕಚೇರಿಯಲ್ಲಿ ವಾಸವಾಗಿದ್ದರು. ಸ್ವೀಡನ್ ಸರಕಾರವು ನಂತರ ಅವರ ವಿರುದ್ಧದ ಆರೋಪಗಳ ತನಿಖೆಯನ್ನು ಕೈಬಿಟ್ಟಿತ್ತು. ‘ಅಂತರರಾಷ್ಟ್ರೀಯ ನಿರ್ಣಯಗಳು ಮತ್ತು ದೈನಂದಿನ ಶಿಷ್ಟಾಚಾರಗಳ ಪುನರಪಿ ಉಲ್ಲಂಘನೆಗಳ ’ ಕಾರಣ ನೀಡಿ ಈಕ್ವೆಡಾರ್ನ ಅಧ್ಯಕ್ಷ ಲೆನಿನ್ ಮೊರೆನೊ ಅವರು ಅಸಾಂಜ್‌ಗೆ ನೀಡಿದ್ದ ಆಶ್ರಯವನ್ನು ಹಿಂದೆಗೆದುಕೊಂಡ ಬೆನ್ನಲ್ಲೇ ಅವರ ಬಂಧನವಾಗಿದೆ.

 ಅಸಾಂಜ್ ಈಕ್ವೆಡಾರ್ನ ಆಶ್ರಯ ಪಡೆದುಕೊಳ್ಳಲು ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ ಬಳಿಕ 2012ರಲ್ಲಿ ವೆಸ್ಟ್ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಹೊರಡಿಸಿದ್ದವಾರಂಟ್ನ ಮೇರೆಗೆ ಅವರನ್ನು ಬಂಧಿಸಲಾಗಿದೆ ಎಂದು ಮೆಟ್ರೋಪಾಲಿಟನ್ ಪೊಲೀಸ್ ಸರ್ವೀಸ್ನ ಅಧಿಕಾರಿಗಳು ತಿಳಿಸಿದರು. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸ್ವೀಡನ್ಹೊರಡಿಸಿದ್ದ ಗಡಿಪಾರು ವಾರಂಟ್ಗೆ ಸಂಬಂಧಿಸಿದಂತೆ ಅಸಾಂಜ್ ರನ್ನು ಲಂಡನ್ನಲ್ಲಿ ಬಂಧಿಸಲಾಗಿತ್ತು.

ಅಸಾಂಜ್‌ಗೆ ನೀಡಿದ್ದ ಆಶ್ರಯವನ್ನು ಹಿಂದೆಗೆದುಕೊಂಡ ಹಿನ್ನೆಲೆಯಲ್ಲಿ ಈಕ್ವೆಡಾರ್ ರಾಯಭಾರಿಗಳ ಕರೆಯ ಮೇರೆಗೆ ಅವರ ಕಚೇರಿಗೆ ತೆರಳಿ ಬಂಧನ ಕಾರ್ಯಾಚರಣೆಯನ್ನುನಡೆಸಲಾಗಿದೆ. ಅಸಾಂಜ್ರನ್ನು ಸೆಂಟ್ರಲ್ ಲಂಡನ್ ಪೊಲೀಸ್ ಠಾಣೆಯಲ್ಲಿರಿಸಲಾಗಿದ್ದು,ಸಾಧ್ಯವಾದಷ್ಟು ಶೀಘ್ರ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗುವುದು ಎಂದುಮೆಟ್ರೋಪಾಲಿಟನ್ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈಕ್ವೆಡಾರ್ ಅಸಾಂಜ್‌ಗೆ ನೀಡಿದ್ದ ಆಶ್ರಯವನ್ನು ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿ ಅಕ್ರಮವಾಗಿ ಹಿಂದೆಗೆದುಕೊಂಡಿದೆ ಎಂದು ವಿಕಿಲೀಕ್ಸ್ ಟ್ವಿಟರ್ನಲ್ಲಿ ಆರೋಪಿಸಿದೆ.ಆದರೆ,ಆಶ್ರಯವನ್ನು ಹಿಂದೆಗೆದುಕೊಳ್ಳುವುದು ತನ್ನ ಸಾರ್ವಭೌಮ ಹಕ್ಕು ಎಂದು ಈಕ್ವೆಡಾರ್ ಹೇಳಿದೆ.

 ಸ್ವೀಡನ್‌ ಗೆ ತನ್ನ ಗಡಿಪಾರು ಅಮೆರಿಕಕ್ಕೆ ತನ್ನನ್ನು ವಾಪಸ್ ಕಳುಹಿಸಲು ಅವಕಾಶ ಕಲ್ಪಿಸಬಹುದು ಮತ್ತು ತಾನು ಸಂಭಾವ್ಯ ಮರಣ ದಂಡನೆಯನ್ನು ಎದುರಿಸಬೇಕಾಗಬಹುದುಎಂಬ ಅಸಾಂಜ್ ವಾದವನ್ನು ಪುರಸ್ಕರಿಸಿ ಈಕ್ವೆಡಾರ್ ಅವರಿಗೆ ಆಶ್ರಯವನ್ನು ಮಂಜೂರು ಮಾಡಿತ್ತು. ವರ್ಷಗಳ ಕಾಲ ಸಾವಿರಾರು ದಾಖಲೆಗಳನ್ನು ಸೋರಿಕೆ ಮಾಡಿದ್ದಕ್ಕೆ ಸಂಬಂಧಿಸಿದಂತೆ ಅಸಾಂಜ್ ಅಮೆರಿಕಕ್ಕೆ ಬೇಕಾಗಿರುವ ವ್ಯಕ್ತಿಯಾಗಿದ್ದಾರೆ. ಆಸ್ಟ್ರೇಲಿಯಾ ಸಂಜಾತ ಅಸಾಂಜ್ ಅವರ ವಿಕಿಲೀಕ್ಸ್ 2010ರಲ್ಲಿ ಇತರ ರಹಸ್ಯ ಸಂದೇಶಗಳ ಜೊತೆಗೆ ಅಫಘಾನಿಸ್ತಾನ್ ಮತ್ತು ಇರಾಕ್‌ ಗಳಲ್ಲಿ  ಅಮೆರಿಕದ ಯುದ್ಧಗಳ ಕುರಿತ ವರ್ಗೀಕೃತ ದಾಖಲೆಗಳನ್ನು ಬಿಡುಗಡೆಗೊಳಿಸಿದ್ದರು. ಸೋರಿಕೆಯಾಗಿದ್ದ ಈ ದಾಖಲೆಗಳು ಇರಾಕ್ಯುದ್ಧಕೈದಿಗಳಿಗೆ ನೀಡಲಾಗಿದ್ದ ಚಿತ್ರಹಿಂಸೆ ಮತ್ತು ನಾಗರಿಕ ಸಾವುನೋವುಗಳ ವಿವರಗಳನ್ನು ಬಹಿರಂಗಗೊಳಿಸಿದ್ದವು. ಜೊತೆಗೆ ಅಮೆರಿಕದ ಅಧಿಕಾರಿಗಳ ವಿರುದ್ದ ಇತರ ಆರೋಪಗಳೂ ಬಯಲಾಗಿದ್ದವು.

2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಡೆಮಾಕ್ರಾಟಿಕ್ ಪಕ್ಷದ ರಾಷ್ಟ್ರೀಯ ಪ್ರಚಾರದ ಹಲವಾರು ಇ-ಮೇಲ್‌ ಗಳನ್ನು  ವಿಕಿಲೀಕ್ಸ್ ಬಿಡುಗಡೆಗೊಳಿಸಿದ್ದು,ಇದುಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ಅವರಿಗೆ ಹಿನ್ನಡೆಯನ್ನುಂಟು ಮಾಡಿತ್ತೆನ್ನಲಾಗಿದೆ. ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಜಯಶಾಲಿಯಾಗಿದ್ದರು. ಇ-ಮೇಲ್ ಸೋರಿಕೆಯಲ್ಲಿ ರಷ್ಯಾಭಾಗಿಯಾಗಿತ್ತೆಂದು ಅಮೆರಿಕದ ಅಧಿಕಾರಿಗಳು ಆರೋಪಿಸಿದ್ದು, ಅದನ್ನು ಅಸಾಂಜ್ ಮತ್ತು ವಿಕಿಲೀಕ್ಸ್ ಅಧಿಕಾರಿಗಳು ನಿರಾಕರಿಸಿದ್ದರು.

 2010ರಲ್ಲಿ ವರ್ಗೀಕೃತ ಮಿಲಿಟರಿ ಮತ್ತು ರಾಜತಾಂತ್ರಿಕ ದಾಖಲೆಗಳನ್ನು ಸೋರಿಕೆಗೊಳಿಸಿದ್ದ ಆರೋಪವನ್ನು ಅಸಾಂಜ್ ವಿರುದ್ಧ ಹೇರಲಾಗಿದೆ ಎಂದು 2018, ನವೆಂಬರ್‌ ನಲ್ಲಿ ಅಮೆರಿಕದ ಪ್ರಾಸಿಕ್ಯೂಟರ್ಗಳು ಆಕಸ್ಮಿಕವಾಗಿ ಬಹಿರಂಗಗೊಳಿಸಿದ್ದರು. ಸಂಬಂಧಿಸದ ಪ್ರಕರಣವೊಂದರಲ್ಲಿ ಅಸಾಂಜ್ ವಿರುದ್ಧದ ದೋಷಾರೋಪವು ಸೀಲ್ ಮಾಡಿದ್ದಕವರೊಂದರಲ್ಲಿ ನ್ಯಾಯಾಲಯವನ್ನು ತಲುಪಿತ್ತು ಎನ್ನಲಾಗಿದ್ದು, ಆರೋಪಗಳನ್ನು ಬಹಿರಂಗಗೊಳಿಸಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News