ಬಿಜೆಪಿ ಪರ ಮತ ಹಾಕಲು ಯೋಧರಿಂದ ಮತದಾರರಿಗೆ ಬೆದರಿಕೆ: ಮೆಹಬೂಬಾ ಮುಫ್ತಿ ಆರೋಪ

Update: 2019-04-11 17:49 GMT

ಜಮ್ಮು,ಎ.11: ಇಲ್ಲಿನ ಪೂಂಚ್ ಪ್ರದೇಶದಲ್ಲಿ ಗುರುವಾರ ನಡೆದ ಲೋಕಸಭಾ ಚುನಾವಣೆಯ ಪ್ರಥಮ ಹಂತದ ಮತದಾನದ ವೇಳೆ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತ ಹಾಕುವಂತೆ, ಅರೆಸೈನಿಕ ಪಡೆಗಳ ಯೋಧರು ಮತದಾರರಿಗೆ ಬೆದರಿಕೆ ಹಾಕಿದ್ದಾರೆಹಾಗೂ ಕೆಲವು ಮತಗಟ್ಟೆಗಳಲ್ಲಿನ ಇವಿಎಂಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರಿನ ಮುಂದಿರುವ ಬಟನ್ಗಳು ಕಾರ್ಯನಿವ ಹಿಸುತ್ತಿರಲಿಲ್ಲವೆಂದು ಎಂದು ನ್ಯಾಶನಲ್ ಕಾನ್ಫರೆನ್ಸ್ ಹಾಗೂ ಪಿಡಿಪಿ ಪಕ್ಷಗಳು ಆಪಾದಿಸಿವೆ.

ಪೂಂಚ್ ಪ್ರದೇಶದಲ್ಲಿ ಬಿಜೆಪಿ ಪರವಾಗಿ ಮತಚಲಾಯಿ ಸಲಿಲ್ಲವೆಂಬ ಕಾರಣಕ್ಕಾಗಿ ಭದ್ರತಾ ಸಿಬ್ಬಂದಿ ತಮ್ಮೊಂದಿಗೆ ಒರಟಾಗಿ ನಡೆದುಕೊಂಡ ಘಟನೆಯ ಬಳಿಕ ಕೆಲವು ಮತ ದಾರರು ಬಿಜೆಪಿ ವಿರೋಧಿ ಘೋಷಣೆಗಳನ್ನು ಕೂಗುತ್ತಿರುವ ವಿಡಿಯೋವನ್ನು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.

 ‘‘ ಜಮ್ಮುವಿನ ಮತಗಟ್ಟೆಯೊಂದರಲ್ಲಿ ಬಿಜೆಪಿಗೆ ಮತಚಲಾಯಿಸಲು ನಿರಾಕರಿಸಿದ ಮತದಾರನ ಮೇಲೆ ಬಿಎಸ್ಎಫ್ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ. ಬಿಜೆಪಿಗೆ ಮತಹಾಕುವಂತೆ ಬೆದರಿಸುವುದಕ್ಕಾಗಿ ಭದ್ರತಾ ಸಿಬ್ಬಂದಿಯನ್ನು ಮತಗಟ್ಟೆಗಳಲ್ಲಿಬಳಸಿಕೊಳ್ಳುತ್ತಿರುವುದು, ಆ ಪಕ್ಷದ ಹತಾಶೆ ಹಾಗೂ ಅಧಿಕಾರದಾಹವನ್ನು ತೋರಿಸುತ್ತದೆ’’ ಎಂದು ಮೆಹಬೂಬಾ ಟ್ವೀಟಿಸಿದ್ದಾರೆ.

ಪೂಂಚ್ನ ಅರಾಯ್ ಮಾಲ್ಕಾ ಪ್ರದೇಶದಲ್ಲಿ ಬಿಜೆಪಿಗಾಗಿ ಮತಚಲಾಯಿಸುವಂತೆ ಸಮವಸ್ತ್ರಧಾರಿ ಅಧಿಕಾರಿಯೊಬ್ಬರು ಮತದಾರರಿಗೆ ಬೆದರಿಕೆ ಹಾಕಿದ್ದಾರೆಂದು ಜಮ್ಮುವಿನ ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ಪ್ರಾಂತೀಯ ಅಧ್ಯಕ್ಷ ದೇವಿಂದರ್ ಸಿಂಗ್ ಆರೋಪಿಸಿದ್ದಾರೆ.

 ಈ ಬಗ್ಗೆ ತಾನು ದೂರು ನೀಡಿದ ಬಳಿಕ ಸ್ಥಳೀಯಾಡಳಿತದ ಅಧಿಕಾರಿಯೊಬ್ಬರು ಸ್ಥಳಕ್ಕೆ ಆಗಮಿಸಿದ್ದರು ಹಾಗೂ ಮತದಾರರ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಯನ್ನು ಕರ್ತವ್ಯದಿಂದ ತೆರವುಗೊಳಿಸಲಾಯಿತೆಂದು ಅವರು ಹೇಳಿದರು. ಪೂಂಚ್ ಪ್ರದೇಶದಲ್ಲಿ

ಇವಿಎಂ ಯಂತ್ರದ ಬಟನ್ ಕಾರ್ಯ ನಿರ್ವಹಿಸದಿರುವುದನ್ನು ಮತಗಟ್ಟೆ ಅಧಿಕಾರಿಯೊಬ್ಬರು ವಿವ ರಿಸುತ್ತಿರುವ ವಿಡಿಯೋ ಒಂದನ್ನು ನ್ಯಾಶನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಉಮರ್ ಅಬ್ದುಲ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

 ಪೂಂಚ್ ಪ್ರಾಂತದ ಕೆಲವು ಪ್ರದೇಶಗಳಲ್ಲಿ ಮತದಾನ ಸ್ಥಗಿತಗೊಂಡ ಬಳಿಕ ಮತಗಟ್ಟೆ ಅಧಿಕಾರಿಯವರು ಬೇಗನೇ ಮತ ದಾನ ಆರಂಭವಾಗುವುದೆಂದು ಜನರಿಗೆ ತಿಳಿಸುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಯಾವ ಬಟನ್ 

ಕೆಲಸಮಾಡುತ್ತಿಲ್ಲವೆಂದು ಅವರನ್ನು ಪ್ರಶ್ನಿಸಿದಾಗ, ‘‘ ಹಾತ್ಕಾ ಬಟನ್ (ಕೈ ಚಿಹ್ನೆಯಿರುವ ಬಟನ್) ಎಂದು ಆತ ಉತ್ತರಿಸುತ್ತಿರುವುದನ್ನು ವಿಡಿಯೋ ಪ್ರದರ್ಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News