30ಕ್ಕೂ ಅಧಿಕ ಜನರ ಜೀವ ಉಳಿಸಿ ತನ್ನ ಪ್ರಾಣ ತ್ಯಾಗ ಮಾಡಿದ ಶ್ವಾನ!

Update: 2019-04-13 06:34 GMT
ಫೋಟೊ ಕೃಪೆ: ANI

ಬಂಡಾ(ಉ.ಪ್ರ.), ಎ.13: ಶ್ವಾನಗಳು ಮನುಷ್ಯನ ಉತ್ತಮ ಸ್ನೇಹಿತ ಎಂಬ ಮಾತಿದೆ. ಈ ಮಾತು ನಿಜ ಎಂದು ಉತ್ತರಪ್ರದೇಶದಲ್ಲಿ ಮತ್ತೊಮ್ಮೆ ಸಾಬೀತಾಗಿದೆ.

 ನಾಲ್ಕು ಮಹಡಿಯ ಕಟ್ಟಡದ ನೆಲ ಮಾಳಿಗೆಯಲಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಾಗ ಜೋರಾಗಿ ಬೊಗಳಿದ ನಾಯಿಯೊಂದು ಕಟ್ಟಡದಲ್ಲಿದ್ದ 30ಕ್ಕೂ ಅಧಿಕ ಜನರ ಜೀವವನ್ನು ಉಳಿಸಿದೆ. ಆದರೆ, ಅದು ಸಿಲಿಂಡರ್ ಸ್ಫೋಟದಲ್ಲಿ ಸಾವನ್ನಪ್ಪಿದೆ.

‘‘ಬೆಂಕಿ ಹೊತ್ತಿಕೊಂಡಾಗ ನಾಯಿ ಬೊಗಳಲಾರಂಭಿಸಿ ಎಲ್ಲರನ್ನು ಎಚ್ಚರಿಸಿತ್ತು. ಹೀಗಾಗಿ ಎಲ್ಲರೂ ಸುರಕ್ಷಿತವಾಗಿ ಪಾರಾದರು. ಆ ನಂತರ ನಾಯಿ ಸಿಲಿಂಡರ್ ಸ್ಫೋಟದಿಂದ ಮೃತಪಟ್ಟಿದೆ’’ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಕಟ್ಟಡದ ತಳಮಾಳಿಗೆ ಹಾಗೂ ಮೊದಲ ಮಹಡಿಯಲ್ಲಿ ಫರ್ನಿಚರ್ ಫ್ಯಾಕ್ಟರಿ ಇದೆ. ಎರಡನೇ ಮಾಳಿಗೆಯಲ್ಲಿ ಎಲೆಕ್ಟ್ರಾನಿಕ್ ಶೋ ರೂಮ್ ಇದೆ. ಮೂರು ಹಾಗೂ ನಾಲ್ಕನೇ ಮಾಳಿಗೆಯಲ್ಲಿ ಪರಿವಾರದ ವಾಸವಾಗಿದ್ದರು.

‘‘ಕಟ್ಟಡದ ನೆಲಮಾಳಿಗೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿತ್ತು. ನೆಲಮಾಳಿಗೆಯಲ್ಲಿ ಅನಿಲ ಸಿಲಿಂಡರ್‌ಗಳಿದ್ದ ಕಾರಣ ಭಾರೀ ಸ್ಪೋಟ ಸಂಭವಿಸಿದ್ದು ಹತ್ತಿರದ ನಾಲ್ಕು ಕಟ್ಟಡಗಳು ಧ್ವಂಸವಾಗಿದೆ’’ ಎಂದು ಅಗ್ನಿಶಾಮಕ ದಳದ ಅಧಿಕಾರಿ ವಿನಯಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News