ಝುಕರ್‌ಬರ್ಗ್ ಭದ್ರತೆಗೆ ಫೇಸ್‌ಬುಕ್‌ನಿಂದ 156 ಕೋಟಿ ರೂ. ಖರ್ಚು

Update: 2019-04-13 16:56 GMT

ಸಾನ್‌ಫ್ರಾನ್ಸಿಸ್ಕೊ (ಅಮೆರಿಕ), ಎ. 13: ತನ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ)ಯ ಭದ್ರತೆಗಾಗಿ ಫೇಸ್‌ಬುಕ್ ಕಂಪೆನಿಯು 2018ರಲ್ಲಿ 22.6 ಮಿಲಿಯ ಡಾಲರ್ (ಸುಮಾರು 156 ಕೋಟಿ ರೂಪಾಯಿ) ಖರ್ಚು ಮಾಡಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಎರಡು ಪಟ್ಟಿಗಿಂತಲೂ ಅಧಿಕವಾಗಿದೆ.

ಝುಕರ್‌ಬರ್ಗ್ ಕಳೆದ ಮೂರು ವರ್ಷಗಳ ಅವಧಿಯಲ್ಲಿ, ತನ್ನ ಮೂಲ ವೇತನವಾಗಿ ಒಂದು ಡಾಲರ್ (69 ರೂಪಾಯಿ) ಪಡೆದುಕೊಂಡಿದ್ದಾರೆ. ಅವರಿಗೆ ಇತರ ಭತ್ತೆಗಳಾಗಿ 22.6 ಮಿಲಿಯ ಡಾಲರ್ ನೀಡಲಾಗಿದೆ. ಈ ಪೈಕಿ ಹೆಚ್ಚಿನ ಮೊತ್ತವನ್ನು ಅವರ ಖಾಸಗಿ ಭದ್ರತೆಗಾಗಿ ವ್ಯಯಿಸಲಾಗಿದೆ.

ಈ ಪೈಕಿ ಸುಮಾರು 20 ಮಿಲಿಯ ಡಾಲರ್ (ಸುಮಾರು 138 ಕೋಟಿ ರೂಪಾಯಿ) ಮೊತ್ತವನ್ನು ಝುಕರ್‌ಬರ್ಗ್ ಮತ್ತು ಅವರ ಕುಟುಂಬದ ಭದ್ರತೆಗಾಗಿ ವ್ಯಯಿಸಲಾಗಿದೆ. ಈ ಮೊತ್ತ ಕಳೆದ ವರ್ಷ 9 ಮಿಲಿಯ ಡಾಲರ್ (ಸುಮಾರು 62 ಕೋಟಿ ರೂಪಾಯಿ) ಆಗಿತ್ತು.

ಖಾಸಗಿ ವಿಮಾನಗಳ ಬಳಕೆಗಾಗಿ ಅವರಿಗೆ 2.6 ಮಿಲಿಯ ಡಾಲರ್ (ಸುಮಾರು 18 ಕೋಟಿ ರೂಪಾಯಿ) ಮೊತ್ತವನ್ನು ಒದಗಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News