ಈಜಿಪ್ಟ್: 4,300 ವರ್ಷಗಳ ಹಿಂದಿನ ರಾಜವಂಶದ ಗೋರಿ ಪತ್ತೆ

Update: 2019-04-14 18:20 GMT

ಕೈರೋ (ಈಜಿಪ್ಟ್), ಎ. 14: ಈಜಿಪ್ಟ್‌ನಲ್ಲಿ ಅತ್ಯಂತ ಪುರಾತನ ‘ಐದನೇ ರಾಜವಂಶ’ದ ಅಧಿಕಾರಿಯೊಬ್ಬನ ಗೋರಿಯನ್ನು ಶನಿವಾರ ಸಾರ್ವಜನಿಕರಿಗೆ ತೆರೆಯಲಾಗಿದೆ.

ರಾಜಧಾನಿ ಕೈರೋದ ದಕ್ಷಿಣಕ್ಕಿರುವ ಗೋರಿಯು ‘ಖುವಿ’ ಎಂಬ ಹೆಸರಿನ ಅಧಿಕಾರಿಗೆ ಸೇರಿದ್ದೆನ್ನಲಾಗಿದೆ. ಆ ವ್ಯಕ್ತಿಯು ಸುಮಾರು 4,300 ವರ್ಷಗಳ ಹಿಂದೆ ಈಜಿಪ್ಟನ್ನು ಆಳಿದ ‘ಐದನೇ ರಾಜವಂಶ’ದ ‘ಕುಲೀನ ವ್ಯಕ್ತಿ’ ಎಂಬುದಾಗಿ ಭಾವಿಸಲಾಗಿದೆ.

‘‘ಇಂಗ್ಲಿಷ್‌ನ ‘ಎಲ್’ ಅಕ್ಷರದ ಆಕೃತಿಯ ಗೋರಿಯ ಬಾಗಿಲಲ್ಲಿ ಸಣ್ಣ ಕಾರಿಡಾರ್ ಇದೆ. ಈ ಕಾರಿಡಾರ್ ಇಳಿಜಾರಾಗಿ ಮುಂದಕ್ಕೆ ಹೋಗಿ ಸಣ್ಣ ಕೋಣೆಯೊಂದಕ್ಕೆ ಸೇರುತ್ತದೆ. ಅಲ್ಲಿಂದ ದೊಡ್ಡ ಕೋಣೆಗೆ ತಲುಪುತ್ತದೆ. ಅಲ್ಲಿ ಗೋರಿಯ ಮಾಲೀಕನು ಪೂಜಾ ಮೇಜೊಂದರ ಮೇಲೆ ಕುಳಿತಿರುವ ಚಿತ್ರವಿದೆ’’ ಎಂದು ಪುರಾತತ್ವ ಸಚಿವಾಲಯದ ಹೇಳಿಕೆಯೊಂದರಲ್ಲಿ ಉತ್ಖನನ ತಂಡದ ಮುಖ್ಯಸ್ಥ ಮುಹಮ್ಮದ್ ಮುಜಾಹಿದ್ ಹೇಳಿದರು.

ಗೋರಿಯನ್ನು ಕಳೆದ ತಿಂಗಳು ಪತ್ತೆಹಚ್ಚಲಾಯಿತು ಎಂದು ಪುರಾತತ್ವ ಸಚಿವ ಖಾಲಿದ್ ಅಲ್-ಎನನಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News