ಮಾಲಕನನ್ನು ಕುಕ್ಕಿ ಕೊಂದ ಸಾಕು ಹಕ್ಕಿ !

Update: 2019-04-15 18:04 GMT

ಟ್ಯಾಲಹಾಸೀ (ಫ್ಲೋರಿಡ), ಎ. 15: ಬೃಹತ್ ಗಾತ್ರದ ‘ಕ್ಯಾಸವೇರಿ’ ಎಂಬ ಹಕ್ಕಿಯು ತನ್ನ ಮಾಲಕನನ್ನೇ ಕುಕ್ಕಿ ಕೊಂದ ಘಟನೆಯೊಂದು ಅಮೆರಿಕದ ಫ್ಲೋರಿಡದಿಂದ ಶುಕ್ರವಾರ ವರದಿಯಾಗಿದೆ.

ಹಾರದ ಈ ದೈತ್ಯ ಹಕ್ಕಿಯು ಅತ್ಯಂತ ಅಪಾಯಕಾರಿ ಹಕ್ಕಿ ಎಂಬುದಾಗಿ ಪಕ್ಷಿ ಶಾಸ್ತ್ರಜ್ಞರು ಹೇಳುತ್ತಾರೆ. ಈ ಹಕ್ಕಿಯ ಸಮೀಪ ಹೋಗುವಾಗ ಪರಿಣತ ಕೆಲಸಗಾರರೂ ಜಾಗರೂಕತೆಯಿಂದ ಇರುತ್ತಾರೆ.

75 ವರ್ಷದ ಮಾರ್ವಿನ್ ಹ್ಯಾಜೊಸ್ ಈ ಜಾತಿಯ ಹಕ್ಕಿಗಳನ್ನು ತನ್ನ ಫಾರ್ಮ್‌ನಲ್ಲಿ ಸಾಕಿದ್ದರು. ಅವರು ಫಾರ್ಮ್‌ಗೆ ಹೋದಾಗ ಈ ಹಕ್ಕಿ ಅವರ ಮೇಲೆ ದಾಳಿ ಮಾಡಿತು ಎನ್ನಲಾಗಿದೆ. ಕೆಳಗೆ ಬಿದ್ದ ಅವರ ಮೇಲೆ ಹಕ್ಕಿ ದಾಳಿಯನ್ನು ಮುಂದುವರಿಸಿತು. ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಕೊನೆಯುಸಿರೆಳೆದರು ಎಂದು ಅಲಚುವ ಕೌಂಟಿ ಶೆರಿಫ್ ಕಚೇರಿಯ ಲೆಫ್ಟಿನೆಂಟ್ ಜೋಶ್ ಕ್ರೂಸ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News