​ಮತದಾನ ಜಾಗೃತಿಗಾಗಿ ಟೋಪ್ಕೋ ಜ್ಯುವೆಲ್ಲರಿಯ ವಿಶಿಷ್ಟ ಕಾರ್ಯಕ್ರಮ

Update: 2019-04-16 16:24 GMT

ಪುತ್ತೂರು: ಎ. 18 ರ ದಕ್ಷಿಣ ಕನ್ನಡ ಲೋಕಸಭಾ ಚುನಾವಣೆಗಾಗಿ ಎಲ್ಲಾ ರೀತಿಯ ಪೂರ್ವ ಸಿದ್ಧತೆಗಳು ನಡೆಯುತ್ತಿವೆ. ಆದರೆ ವಿಟ್ಲ ಮತ್ತು ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ ಟೋಪ್ಕೋ ಝಮ್ ಝಮ್ ಜ್ಯುವೆಲ್ಲರಿಯು ಮತದಾನದ ದಿನ ವೈಶಿಷ್ಟ್ಯಪೂರ್ಣ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡು ಸಮಾಜಕ್ಕೆ ಮಾದರಿಯಾಗಿದೆ.

"ಮತದಾನ ನಮ್ಮ ಹಕ್ಕು, ತಪ್ಪದೇ ಹಕ್ಕು ಚಲಾಯಿಸಿ, ಪ್ರಜಾಪ್ರಭುತ್ವವನ್ನು ಗೆಲ್ಲಿಸಿ" ಎಂಬ ಘೋಷವಾಕ್ಯದೊಂದಿಗೆ ಎ. 18ರ ಚುನಾವಣೆಯ ಸಂದರ್ಭ ಮೊದಲ ಮತದಾರರಿಗೆ ವಿಶೇಷ ಉಚಿತ ಉಡುಗೊರೆ ನೀಡಲು ಮುಂದಾಗಿದೆ.

"ಟೋಪ್ಕೋ ಜೊತೆಗೆ ಮೊದಲ ಮತದಾನದ ಸವಿನೆನಪು" ಎಂಬ ಯೋಜನೆಯೊಂದಿಗೆ 18 ವರ್ಷ ತುಂಬಿ ಮೊದಲು ಮತ ನೀಡುವ ಯುವಕ, ಯುವತಿಯರು ಮೊದಲ ಮತದಾನದ ಸವಿನೆನಪಿಗೆ ಒಂದು ಗಿಡನೆಟ್ಟು ಅದರ ಜೊತೆಗೆ ಫೋಟೋ ತೆಗೆದು +919900802040 ಗೆ ವಾಟ್ಸ್ಆ್ಯಪ್ ಮಾಡಬೇಕು. 

ಎ.19 ದಂದು ಬೆಳಗ್ಗೆ 11 ರಿಂದ ಸಂಜೆ 6 ರೊಳಗೆ ವಿಟ್ಲ ಎಂಪೈರ್ ಮಾಲ್ ನಲ್ಲಿರುವ ಟೋಪ್ಕೋ ಜ್ಯುವೆಲ್ಲರಿಯ ಶಾಖೆಗೆ ಆಗಮಿಸಿ ಉಚಿತವಾಗಿ ವಿಶೇಷ ಉಡುಗೊರೆ ಪಡೆಯಬಹುದು.

ಉಡುಗೊರೆ ಪಡೆಯುವ ಸಂದರ್ಭ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮೊದಲ ಮತದಾರರು ತಮ್ಮ ವೋಟರ್ ಐಡಿ, ಗಿಡ ನೆಡುವ ಮೊಬೈಲ್ ಫೋಟೋ ಮತ್ತು ಕೈಬೆರಳಿನ ಮತದಾನದ ಕಪ್ಪು ಶಾಯಿಯ ಗುರುತನ್ನು ತೋರಿಸಬೇಕು.

ಯುವ ಸಮೂಹದಲ್ಲಿ ಪರಿಸರ ಸಂರಕ್ಷಣೆ ಹಾಗೂ ಗಿಡನೆಟ್ಟು ಪೋಷಿಸುವ ಜಾಗೃತಿಯ ಜೊತೆಗೆ ಮತದಾನದ ಜಾಗೃತಿಗಾಗಿ ಈ ವಿಶಿಷ್ಟ ಪರಿಕಲ್ಪನೆಯನ್ನು ವಿಟ್ಲ ಮತ್ತು ಪುತ್ತೂರು ಟೋಪ್ಕೋ ಝಮ್ ಝಮ್ ಜ್ಯುವೆಲ್ಲರಿ ಆಯೋಜಿಸಿದೆ ಎಂದು ಮಾಲಕರಾದ ಟಿ.ಕೆ. ಮಹಮ್ಮದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News