ಪಾಕ್ ನಲ್ಲಿ ಬಸ್ ನಿಂದ ಬಲವಂತವಾಗಿ ಇಳಿಸಿ 14 ಪ್ರಯಾಣಿಕರ ಹತ್ಯೆ

Update: 2019-04-18 07:38 GMT

 ಕ್ವೆಟ್ಟಾ, ಎ.18: ಪಾಕಿಸ್ತಾನದ ಬಲೋಚಿಸ್ತಾನದಲ್ಲಿ ಉಗ್ರರು ಬಸ್ಸೊಂದನ್ನು ತಡೆದು ನಿಲ್ಲಿಸಿ, ಬಸ್ ನಲ್ಲಿದ್ದ ಹದಿನಾಲ್ಕು ಪ್ರಯಾಣಿಕರನ್ನು ಗುಂಡಿಟ್ಟು ಕೊಂದಿರುವ ಘಟನೆ ಗುರುವಾರ ನಡೆದಿದೆ.

ಮಕ್ರಾನ್ ಕೋಸ್ಟಲ್ ಹೈವೆಯಲ್ಲಿ ಬಸ್ ನ್ನು ತಡೆದು ನಿಲ್ಲಿಸಿದ ಉಗ್ರರು ಬಸ್ ನಿಂದ  ಪ್ರಯಾಣಿಕರನ್ನು ಬಲವಂತವಾಗಿ ಇಳಿಸಿ  ಅವರ ಮೇಲೆ ಗುಂಡಿನ ಮಳೆಗೆರೆದು ಪರಾರಿಯಾದರು ಎನ್ನಲಾಗಿದೆ.

ಹತ್ಯೆಗೀಡಾದವರಲ್ಲಿ ಓರ್ವ ನೌಕಾ ಅಧಿಕಾರಿ ಮತ್ತು ಕೋಸ್ಟಲ್ ಸಿಬ್ಬಂದಿ ಸೇರಿದ್ದಾರೆ, ಉಗ್ರರು ಅರೆ ಸೇನಾ ಪಡೆಯಂತೆ ಸಮವಸ್ತ್ರ ಧರಿಸಿದ್ದರು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News