ಉ.ಪ್ರ.ದ ಸುಲ್ತಾನ್‌ ಪುರದಿಂದ ನಾಮಪತ್ರ ಸಲ್ಲಿಸಿದ ಮೇನಕಾ ಗಾಂಧಿ

Update: 2019-04-18 15:33 GMT

ಸುಲ್ತಾನ್‌ಪುರ, ಎ. 18: ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಉತ್ತರಪ್ರದೇಶದ ಸುಲ್ತಾನ್‌ಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ಮುನ್ನ ಅವರು ರೋಡ್ ಶೋ ನಡೆಸಿದರು.

ನಾಮಪತ್ರ ಸಲ್ಲಿಸುವ ಮೊದಲು ಮಾಧ್ಯಮದವರೊಂದಿಗೆ ಮಾತನಾಡಿದ ಮೇನಕಾ ಗಾಂಧಿ, “ಒಂದು ವೇಳೆ ನಾನು ಆಯ್ಕೆಯಾದರೆ, ನನ್ನ ಹಿಂದಿನ ಲೋಕಸಭಾ ಕ್ಷೇತ್ರದಂತೆ ಸುಲ್ತಾನ್‌ಪುರದಲ್ಲಿ ಕೂಡ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸಲಿದ್ದೇನೆ” ಎಂದರು. ‘‘ಬಿಜೆಪಿ ಜಯ ಗಳಿಸಲಿದೆ ಹಾಗೂ ಕೇಂದ್ರದಲ್ಲಿ ಸರಕಾರ ರಚಿಸಲಿದೆ’’ ಎಂದು ಅವರು ಭರವಸೆ ವ್ಯಕ್ತಪಡಿಸಿದರು. ಮೇನಕಾ ಗಾಂಧಿ ಅವರು ಈ ಹಿಂದೆ ಉತ್ತರಪ್ರದೇಶದ ಪಿಲಿಬಿಟ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಈ ಕ್ಷೇತ್ರದಿಂದ ಈ ಬಾರಿ ಅವರ ಪುತ್ರ ವರುಣ್ ಗಾಂಧಿ ಸ್ಪರ್ಧಿಸುತ್ತಿದ್ದಾರೆ. ಉತ್ತರಪ್ರದೇಶದಲ್ಲಿ 80 ಲೋಕಸಭಾ ಕ್ಷೇತ್ರಗಳಿವೆ. ಇವುಗಳಲ್ಲಿ 8 ಲೋಕಸಭಾ ಕ್ಷೇತ್ರಗಳಿಗೆ ಎಪ್ರಿಲ್ 11ರಂದು ಚುನಾವಣೆ ನಡೆದಿದೆ. ಅಷ್ಟೇ ಸಂಖ್ಯೆಯ ಲೋಕಸಭಾ ಕ್ಷೇತ್ರಗಳಿಗೆ ಗುರುವಾರ ಚುನಾವಣೆ ನಡೆದಿದೆ. ಮುಂದಿನ ಕ್ಷೇತ್ರಗಳ ಚುನಾವಣೆ ಮುಂದಿನ ಐದು ಹಂತಗಳಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News