ಮಹಾರಾಷ್ಟ್ರದಲ್ಲಿ ದೋಷಪೂರಿತ ಇವಿಎಂಗಳ ಬಗ್ಗೆ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

Update: 2019-04-18 15:36 GMT

ಮುಂಬೈ,ಎ.18: ಗುರುವಾರ ಎರಡನೇ ಹಂತದ ಮತದಾನ ನಡೆದ ಮಹಾರಾಷ್ಟ್ರದ 10 ಲೋಕಸಭಾ ಕ್ಷೇತ್ರಗಳಲ್ಲಿಯ ಕೆಲವು ಮತಗಟ್ಟೆಗಳಲ್ಲಿ ವಿದ್ಯುನ್ಮಾನ ಮತದಾನ ಯಂತ್ರ(ಎಇವಿಎಂ)ಗಳಲ್ಲಿಯ ತಾಂತ್ರಿಕ ದೋಷಗಳ ಕುರಿತು ತಾನು ಚುನಾವಣಾ ಆಯೋಗಕ್ಕೆ 33 ದೂರುಗಳನ್ನು ಸಲ್ಲಿಸಿರುವುದಾಗಿ ಕಾಂಗ್ರೆಸ್ ತಿಳಿಸಿದೆ.

ಕೆಲವು ಮತಗಟ್ಟಗಳಲ್ಲಿ ಕಳಪೆ ಬೆಳಕಿನ ವ್ಯವಸ್ಥೆಯ ಬಗ್ಗೆಯೂ ಪಕ್ಷವು ಕಳವಳಗಳನ್ನು ವ್ಯಕ್ತಪಡಿಸಿದೆ ಎಂದು ಕಾಂಗ್ರೆಸ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಸೋಲಾಪುರ,ಹಿಂಗೋಲಿ ಮತ್ತು ನಾಂದೇಡ್ ಕ್ಷೇತ್ರಗಳಲ್ಲಿ ಹೆಚ್ಚು ಇವಿಎಂ ಸಂಬಂಧಿತ ದೂರುಗಳು ವರದಿಯಾಗಿವೆ ಎಂದು ರಾಜ್ಯ ಕಾಂಗ್ರೆಸ್‌ನ ಕಾನೂನು ಘಟಕದ ವಿನಯ ಪಾಂಡೆ ಹೇಳಿದರು.

ಪರ್ಭನಿ,ಬೀಡ್,ಉಸ್ಮಾನಾಬಾದ್,ಲಾತೂರು,ಅಕೋಲಾ,ಬುಲ್ಡಾನಾ ಮತ್ತು ಅಮರಾವತಿ ಮತದಾನ ನಡೆದ ಇತರ ಲೋಕಸಭಾ ಕ್ಷೇತ್ರಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News