ಮೋದಿ ಇದ್ದಕ್ಕಿದ್ದಂತೆ ಹಿಂದುಳಿದವರಾಗಿದ್ದಾರೆ: ತೇಜಸ್ವಿ ಯಾದವ್

Update: 2019-04-18 15:39 GMT

ಪಾಟ್ನಾ, ಎ. 18: ಪ್ರಧಾನಿ ಮೋದಿ ‘ನಕಲಿ ಹಿಂದುಳಿದ’ ವ್ಯಕ್ತಿ. ಅವರು ಹಿಂದುಳಿದ ವರ್ಗಗಳಿಗಾಗಿ ಏನನ್ನೂ ಮಾಡಿಲ್ಲ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಗುರುವಾರ ಆರೋಪಿಸಿದ್ದಾರೆ.

‘‘ನರೇಂದ್ರ ಮೋದಿಜಿ ನಕಲಿ ಹಿಂದುಳಿದ ವ್ಯಕ್ತಿ. ಹುಟ್ಟಿನಿಂದ ಇದುವರೆಗಿನ 55 ವರ್ಷಗಳಲ್ಲಿ ಅವರು ಮೇಲ್ವರ್ಗದವರಂತೆ ಇದ್ದರು. ಆದರೆ, ಈಗ ಇದ್ದಕ್ಕಿದ್ದಂತೆ ಹಿಂದುಳಿದವರಾಗಿದ್ದಾರೆ. ನಿಜವಾದ ಹಿಂದಳಿದ ವರ್ಗದವರು ಎಂದಿಗೂ ಸುಳ್ಳು ಹೇಳುವುದಿಲ್ಲ. ಹಿಂದುಳಿದ ವರ್ಗದವರು ಮೂರ್ಖರು ಎಂದು ಭಾವಿಸಿದ್ದೀರಾ? ಹಿಂದುಳಿದ ವರ್ಗದವರಿಗೆ ಮೋದಿ ಏನು ಮಾಡಿದ್ದಾರೆ ?’’ ಎಂದು ಯಾದವ್ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.

‘‘ಆತ್ಮೀಯ ಮೋದಿಜಿ ಅವರೇ ನೀವು ಹುಟ್ಟಿನಿಂದ ಹಿಂದುಳಿದ ವ್ಯಕ್ತಿ ಅಲ್ಲ. ನಕಲಿ ಹಿಂದುಳಿದ ವ್ಯಕ್ತಿ. ಹೌದು ನೀವು ಕಳವುಗೈದಿದ್ದೀರಿ. ನೀವು ಹಿಂದುಳಿದ ವರ್ಗದವರಿಗಾಗಿ ಏನು ಮಾಡಿದ್ದೀರಿ ?, ಪ್ರಧಾನ ಮಂತ್ರಿ ಕಚೇರಿಯಲ್ಲಿ ಒಬ್ಬನೇ ಒಬ್ಬ ಹಿಂದುಳಿದ ವರ್ಗದವರು ಇದ್ದಾರೆಯೇ ?, ಜಾತಿ ಆಧಾರಿತ ಮೀಸಲಾತಿಯಲ್ಲಿ ನೀವು ಹಿಂದುಳಿದ ವರ್ಗದ ಮೀಸಲಾತಿಯನ್ನು ಹೆಚ್ಚಿಸಿಲ್ಲ ಯಾಕೆ ?’’ ಎಂದು ಅವರು ಪ್ರಶ್ನಿಸಿದ್ದಾರೆ.

ಮೋದಿ ಎಂದು ಉಪ ನಾಮ ಇರುವವರೆಲ್ಲರೂ ಕಳ್ಳರು ಎಂದು ಕರೆದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಸೋಲಾಪುರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News