ವಿಮಾನ ಸಂಚಾರ ಮರು ಆರಂಭಕ್ಕೆ ಜೆಟ್ ಏರ್‌ವೇಸ್‌ನಿಂದ ನವೀಕರಣ ಯೋಜನೆ ಕೇಳಿದ ಡಿಜಿಸಿಎ

Update: 2019-04-18 15:41 GMT

ಹೊಸದಿಲ್ಲಿ, ಎ. 18: ಆರ್ಥಿಕ ಬಿಕ್ಕಟ್ಟಿನಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ವಿಮಾನಗಳ ಸಂಚಾರವನ್ನು ಮರು ಆರಂಭಿಸಲು ದೃಢ ಹಾಗೂ ವಿಶ್ವಾಸಾರ್ಹ ನವೀಕರಣ ಯೋಜನೆ ಸಲ್ಲಿಸಲು ಜೆಟ್ ಏರ್‌ವೇಸ್‌ಗೆ ತಿಳಿಸಲಾಗಿದೆ ಎಂದು ನಾಗರಿಕ ವಿಮಾನ ಯಾನದ ಮಹಾ ನಿರ್ದೇಶನಾಲಯ (ಡಿಜಿಸಿಎ) ಗುರುವಾರ ಹೇಳಿದೆ. ನಿಯಂತ್ರಕ ಚೌಕಟ್ಟಿನ ಒಳಗಡೆ ವಿಮಾನಗಳ ಕಾರ್ಯಾಚರಣೆ ನವೀಕರಣಗೊಳಿಸಲು ಡಿಜಿಸಿಎ ಜೆಟ್ ಏರ್‌ವೇಸ್‌ಗೆ ಸಾಧ್ಯವಾದಷ್ಟು ನೆರವಾಗಲಿದೆ ಎಂದು ಡಿಜಿಸಿಎ ಹೇಳಿಕೆ ತಿಳಿಸಿದೆ.

ಕನಿಷ್ಠ ವಿಮಾನಗಳ ಸಂಚಾರ ನಿರ್ವಹಿಸಲು ಮಧ್ಯಂತರ ನಿಧಿ ಪಡೆಯಲು ವಿಫಲವಾದ ಬಳಿಕ ಜೆಟ್ ಏರ್‌ವೇಸ್ ತನ್ನ ಎಲ್ಲಾ ವಿಮಾನಗಳ ಹಾರಾಟವನ್ನು ಬುಧವಾರ ರಾತ್ರಿಯಿಂದ ಸ್ಥಗಿತಗೊಳಿಸಿತ್ತು. ಅನಂತರ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ.

ಮರು ಪಾವತಿ ಹಾಗೂ ರದ್ದತಿಗೆ ಸಂಬಂಧಿಸಿ ಈಗ ಅಸ್ತಿತ್ವದಲ್ಲಿರುವ ಎಲ್ಲ ನಿಯಮಗಳ ಖಾತರಿ ನೀಡಲು ಡಿಜಿಸಿಎ ಹಾಗೂ ಇತರ ನಿಯಂತ್ರಣ ಸಂಸ್ಥೆಗಳು ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ಪರಿಶೀಲಿಸಲಿದೆ. ಪರ್ಯಾಯ ಬುಕಿಂಗ್‌ಗಳನ್ನು ಕಟ್ಟುನಿಟ್ಟಿನಿಂದ ಅನುಸರಿಸಲಿದೆ ಎಂದು ನಾಗರಿಕ ವಿಮಾನ ಯಾನ ಸಚಿವಾಲಯ ಬುಧವಾರ ಸಂಜೆ ಟ್ವೀಟ್ ಮಾಡಿತ್ತು. ನಮ್ಮ ಅತಿ ಮುಖ್ಯ ಆದ್ಯತೆ ವಿಮಾನ ವ್ಯವಸ್ಥೆಯ ಸುರಕ್ಷೆ, ಸಮರ್ಥನೀಯತೆ ಹಾಗೂ ಅನುಕೂಲತೆ. ದರ ಸ್ಥಿರ ಹಾಗೂ ಸ್ವರ್ಧಾತ್ಮಕವಾಗಿರುವುದನ್ನು ಖಾತರಿ ನೀಡಲು ಸಾಮರ್ಥ್ಯವನ್ನು ತ್ವರಿತವಾಗಿ ವೃದ್ಧಿಸಲು ನಾವು ಏರ್‌ಲೈನ್ಸ್ ಹಾಗೂ ವಿಮಾನ ನಿಲ್ದಾಣಗಳಿಗೆ ನೆರವು ನೀಡುತ್ತಿದ್ದೇವೆ ಎಂದು ಡಿಜಿಸಿಎ ಇನ್ನೊಂದು ಟ್ವೀಟ್‌ನಲ್ಲಿ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News