ತೈವಾನ್‌ನಲ್ಲಿ ಪ್ರಬಲ ಭೂಕಂಪ

Update: 2019-04-18 17:40 GMT

ತೈಪೆ (ತೈವಾನ್), ಎ. 18: ತೈವಾನ್‌ನಲ್ಲಿ ಗುರುವಾರ ರಿಕ್ಟರ್ ಮಾಪಕದಲ್ಲಿ 6 ರಷ್ಟು ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯಾಲಜಿಕಲ್ ಸರ್ವೆ ಹೇಳಿದೆ. ಭೂಕಂಪದ ಪರಿಣಾಮವಾಗಿ ಕಟ್ಟಡಗಳು ಕಂಪಿಸಿವೆ ಹಾಗೂ ಸಾರಿಗೆ ಸಂಚಾರ ಅಸ್ತವ್ಯಸ್ತಗೊಂಡಿವೆ.

ತೈವಾನ್ ದ್ವೀಪದಾದ್ಯಂತ ಭೂಕಂಪದ ಅನುಭವವಾಗಿದೆ ಹಾಗೂ ಕಲ್ಲುಗಳು ಬೀಳುತ್ತಿದ್ದ ಹಿನ್ನೆಲೆಯಲ್ಲಿ, ಯಿಲನ್ ಮತ್ತು ಹುವಲೀನ್‌ಗಳನ್ನು ಸಂಪರ್ಕಿಸುವ ಹೆದ್ದಾರಿಯನ್ನು ಮುಚ್ಚಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ರಾಜಧಾನಿ ತೈಪೆಯಲ್ಲಿ ಬಹುಮಹಡಿ ಕಟ್ಟಡಗಳು ಜೋರಾಗಿ ಹೊಯ್ದಾಡಿದವು ಹಾಗೂ ಯಿಲನ್ ಕೌಂಟಿಯಲ್ಲಿ ಗಾಬರಿಗೊಂಡ ಶಾಲಾ ಮಕ್ಕಳು ತರಗತಿ ಕೋಣೆಗಳಿಂದ ಹೊರಗೋಡಿದರು.

ಭೂಕಂಪವು ಹುವಲೀನ್ ಕೌಂಟಿಯಲ್ಲಿ 19 ಕಿ.ಮೀ. ಆಳದಲ್ಲಿ ಸ್ಥಳೀಯ ಸಮಯ ಮಧ್ಯಾಹ್ನ 1:01ಕ್ಕೆ ಸಂಭವಿಸಿತು. ಸಾವು-ನೋವುಗಳ ಬಗ್ಗೆ ವರದಿಯಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News