ಇಸ್ರೇಲ್ ಪ್ರಧಾನಿಯಾಗಿ 5ನೇ ಬಾರಿಗೆ ಬೆಂಜಮಿನ್ ನೇಮಕ

Update: 2019-04-18 17:45 GMT

ಜೆರುಸಲೇಮ್, ಎ. 18: ಕಳೆದ ವಾರ ನಡೆದ ಚುನಾವಣೆಯ ಬಳಿಕ, ಸಮ್ಮಿಶ್ರ ಸರಕಾರ ರಚನೆ ಪ್ರಕ್ರಿಯೆಯನ್ನು ಆರಂಭಿಸಲು ಇಸ್ರೇಲ್ ಅಧ್ಯಕ್ಷ ರೂವಿನ್ ರಿವ್ಲಿನ್ ಬುಧವಾರ ಔಪಚಾರಿಕವಾಗಿ ಹಾಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹುರಿಗೆ ನೇಮಕಾತಿ ಪತ್ರ ನೀಡಿದ್ದಾರೆ.

120 ಸದಸ್ಯ ಬಲದ ಸಂಸತ್ತಿಗೆ ಆಯ್ಕೆಯಾಗಿರುವ ಎಲ್ಲ ಪಕ್ಷಗಳೊಂದಿಗೆ ತಾನು ಸಮಾಲೋಚನೆ ನಡೆಸಿದ್ದು, ‘‘65 ಸಂಸದರು ನಿಮ್ಮನ್ನು ಶಿಫಾರಸು ಮಾಡಿದ್ದಾರೆ’’ ಎಂದು ಟೆಲಿವಿಶನ್‌ನಲ್ಲಿ ಪ್ರಸಾರಗೊಂಡ ಸಮಾರಂಭದಲ್ಲಿ ರಿವ್ಲಿನ್ ಅವರು ನೆತನ್ಯಾಹುರಿಗೆ ಹೇಳಿದ್ದಾರೆ.

ರಿವ್ಲಿನ್ ಸೋಮವಾರ ಮತ್ತು ಮಂಗಳವಾರ ರಾಜಕೀಯ ಪಕ್ಷಗಳ ನಿಯೋಗಗಳನ್ನು ಭೇಟಿಯಾಗಿದ್ದರು.

ನೆತನ್ಯಾಹು ಇನ್ನು 28 ದಿನಗಳಲ್ಲಿ ಸರಕಾರ ರಚಿಸಬೇಕಾಗಿದೆ.

ಎಪ್ರಿಲ್ 9ರಂದು ನಡೆದ ಚುನಾವಣೆಯಲ್ಲಿ ನೆತನ್ಯಾಹು ಅವರ ಮಿತ್ರಕೂಟ ವಿಜಯಿಯಾಗಿದ್ದು, ಐದನೇ ಬಾರಿಗೆ ಅವರು ಸರಕಾರ ರಚಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News