ಶಿವ ಥಾಪ ಶುಭಾರಂಭ, ದೀಪಕ್ ಕ್ವಾರ್ಟರ್ ಫೈನಲ್‌ಗೆ

Update: 2019-04-20 18:14 GMT

ಬ್ಯಾಂಕಾಕ್, ಎ.20: ಏಶ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಿ-ಕ್ವಾರ್ಟರ್ ಫೈನಲ್‌ಗೆ ತಲುಪಿರುವ ಶಿವ ಥಾಪ ನಾಲ್ಕನೇ ಪದಕ ಜಯಿಸಿ ದಾಖಲೆ ನಿರ್ಮಿಸುವವಿಶ್ವಾಸದಲ್ಲಿದ್ದಾರೆ. ಮತ್ತೊಂದೆಡೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ವಿಜೇತ ಲವ್ಲೀನಾ ಬೊರ್ಗೊಹೈನ್(69ಕೆಜಿ) ಹಾಗೂ ದೀಪಕ್(49ಕೆಜಿ) ಅಂತಿಮ-8ರ ಹಂತ ತಲುಪಿದ್ದಾರೆ.

ಥಾಪಾ ಶನಿವಾರ ನಡೆದ 60 ಕೆಜಿ ವಿಭಾಗದ ಪಂದ್ಯದಲ್ಲಿ ಕೊರಿಯಾದ ಕಿಮ್ ವೊನ್ಹೊ ವಿರುದ್ಧ 4-1 ಅಂತರದ ಜಯ ದಾಖಲಿಸಿದರು. 2013, 2015 ಹಾಗೂ 2017ರಆವೃತ್ತಿಯಲ್ಲಿ ಕ್ರಮವಾಗಿ ಚಿನ್ನ, ಕಂಚು ಹಾಗೂ ಬೆಳ್ಳಿ ಜಯಿಸಿದ್ದ ಥಾಪ ಇದೀಗ ಮತ್ತೊಂದು ಪದಕದ ಹಾದಿಯಲ್ಲಿದ್ದಾರೆ. ಅಸ್ಸಾಂ ಬಾಕ್ಸರ್ ರವಿವಾರ ನಡೆಯುವ ಪ್ರಿ-ಕ್ವಾರ್ಟರ್ಫೈನಲ್‌ನಲ್ಲಿ ಕಿರ್ಗಿಸ್ತಾನದ ಸೆಟ್‌ಬೆಕ್ ಉಲು ಅವರನ್ನು ಎದುರಿಸಲಿದ್ದಾರೆ.

ಅಸ್ಸಾಂನ ಇನ್ನೋರ್ವ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ವಿಯೆಟ್ನಾಂ ಟ್ರಾನ್ ಥಿ ಲಿನ್‌ರನ್ನು 5-0 ಅಂತರದಿಂದ ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ತೇರ್ಗಡೆಯಾದರು.ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಚೈನೀಸ್ ತೈಪೆಯ ಚೆನ್ ನಿಯೆನ್-ಚಿನ್‌ರಿಂದ ಕಠಿಣ ಸವಾಲು ಎದುರಿಸಲಿದ್ದಾರೆ. ಕಳೆದ ವರ್ಷ ಹೊಸದಿಲ್ಲಿಯಲ್ಲಿ ನಡೆದ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಸೆಮಿ ಫೈನಲ್‌ನಲ್ಲಿ ಲವ್ಲಿನಾ ಅವರು ಚಿನ್‌ಗೆಸೋತಿದ್ದರು.

ಉತ್ತಮ ಪ್ರದರ್ಶನ ಮುಂದುವರಿಸಿದ ರಾಷ್ಟ್ರೀಯ ಚಾಂಪಿಯನ್ ಹಾಗೂ ಮಕ್ರನ್ ಕಪ್ ಚಾಂಪಿಯನ್ ದೀಪಕ್ ಶ್ರೀಲಂಕಾದ ಮುಟುನಕಾ ಪೆಡಿ ಗೆಡಾರಾ ವಿರುದ್ಧ 5-0ಅಂತರದಿಂದ ಜಯ ಸಾಧಿಸಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

ರವಿವಾರದ ಪಂದ್ಯದಲ್ಲಿ ಎಲ್ಲರ ಕಣ್ಣು ಏಶ್ಯನ್ ಚಾಂಪಿಯನ್ ಅಮಿತ್ ಪಾಂಘಾಲ್(52ಕೆಜಿ)ಮೇಲೆ ನೆಟ್ಟಿದೆ. ಪಾಂಘಾಲ್ ತೈಪೆಯ ಟು ಪೊ ವೀ ವಿರುದ್ಧ ಮೊದಲ ಪಂದ್ಯಆಡಲಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ನಾಲ್ಕು ಬಾರಿಯ ಏಶ್ಯನ್ ಚಾಂಪಿಯನ್ ಸರಿತಾ ದೇವಿ(60 ಕೆಜಿ)ಕೊರಿಯಾದ ಗ್ವಾವೊನ್ ಸುಜಿನ್‌ರನ್ನು ಎದುರಿಸುವ ಮೂಲಕ ಟೂರ್ನಮೆಂಟ್‌ನಲ್ಲಿಆರನೇ ಪದಕಕ್ಕಾಗಿ ತನ್ನ ಅಭಿಯಾನ ಆರಂಭಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News