ವೈಯಕ್ತಿಕ ಕಾರಣ ನೀಡಿ ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಂಡ ಅಲೆಕ್ಸ್

Update: 2019-04-20 18:18 GMT

ಲಂಡನ್, ಎ.20: ವಿಶ್ವಕಪ್ ಕ್ರಿಕೆಟ್‌ಗಾಗಿ ಇಂಗ್ಲೆಂಡ್‌ನ ತಾತ್ಕಾಲಿಕ ತಂಡದಲ್ಲಿ ಸ್ಥಾನ ಪಡೆದಿರುವ ದಾಂಡಿಗ ಅಲೆಕ್ಸ್ ಹೇಲ್ಸ್ ವೈಯಕ್ತಿಕ ಕಾರಣ ನೀಡಿ ಅನಿರ್ದಿಷ್ಟಾವಧಿಗೆಕ್ರಿಕೆಟ್‌ನಿಂದ ವಿರಾಮ ತೆಗೆದುಕೊಂಡಿದ್ದಾರೆ ಎಂದು ಅವರ ಕ್ಲಬ್ ತಂಡ ನಾಟಿಂಗ್‌ಹ್ಯಾಮ್‌ಶೈರ್ ತಿಳಿಸಿದೆ.

‘‘ಅಲೆಕ್ಸ್ ತಮ್ಮ ವೈಯಕ್ತಿಕ ಕಾರಣಗಳಿಗಾಗಿ ಆಯ್ಕೆಗೆ ಅಲಭ್ಯರಾಗಿದ್ದಾರೆ ಹಾಗೂ ಅವರು ಆಟಕ್ಕೆ ಮರಳುವ ಸಮಯವನ್ನು ತಿಳಿಸಿಲ್ಲ’’ ಎಂದು ನಾಟಿಂಗ್‌ಹ್ಯಾಮ್‌ಶೈರ್ ತನ್ನವೆಬ್‌ಸೈಟ್‌ನಲ್ಲಿ ನೀಡಿದ ಹೇಳಿಕೆಯಲ್ಲಿ ತಿಳಿಸಿದೆ.

ಶುಕ್ರವಾರ ಹೇಲ್ಸ್ ಲಂಕಾಶೈರ್ ತಂಡದ ವಿರುದ್ಧ 50 ಓವರ್‌ಗಳ ಮಾದರಿಯ ಪಂದ್ಯವನ್ನು ತಪ್ಪಿಸಿಕೊಂಡಿದ್ದರು. ಇಂಗ್ಲೆಂಡ್ ರಾಷ್ಟ್ರೀಯ ತಂಡದ ಪರ 70ಏಕದಿನಪಂದ್ಯಗಳನ್ನು ಆಡಿರುವ 30 ವರ್ಷ ವಯಸ್ಸಿನ ಆರಂಭಿಕ ದಾಂಡಿಗ ಮೇ 3ರಂದು ಐರ್ಲೆಂಡ್ ವಿರುದ್ಧ ಅಥವಾ ಪಾಕಿಸ್ತಾನ ವಿರುದ್ಧದ 5 ಪಂದ್ಯಗಳಏಕದಿನ ಹಾಗೂ ಏಕೈಕಟಿ20 ಪಂದ್ಯ ಸರಣಿಗೆ ಇಂಗ್ಲೆಂಡ್ ಪರವಾಗಿ ಆಡಲಿದ್ದಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ.

ಈ ಪಂದ್ಯಗಳು ಮೊದಲ ಬಾರಿ ಏಕದಿನ ವಿಶ್ವಕಪ್ ಗೆಲ್ಲಲು ಸಿದ್ಧವಾಗುತ್ತಿರುವ ಇಂಗ್ಲೆಂಡ್‌ಗೆ ವಿಶ್ವಕಪ್‌ಗೆ ಮುಂಚೆ ನಡೆಯುವ ಕೊನೆಯ ಅಂತರ್‌ರಾಷ್ಟ್ರೀಯಟೂರ್ನಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News