ಬಾರ್ಟಿ, ಸಬಾಲೆಂಕಾಗೆ ಗೆಲುವು ಆಸ್ಟ್ರೇಲಿಯ-ಬೆಲಾರಸ್ ಪಂದ್ಯ ಡ್ರಾ

Update: 2019-04-20 18:20 GMT

ಬ್ರಿಸ್ಬೇನ್, ಎ.20: ಫೆಡ್ ಕಪ್‌ನ ಸೆಮಿ ಫೈನಲ್‌ನ ಮೊದಲ ದಿನವಾದ ಶನಿವಾರ ಆಸ್ಟ್ರೇಲಿಯ ಹಾಗೂ ಬೆಲಾರಸ್ ತಲಾ 1 ಪಂದ್ಯವನ್ನು ಜಯಿಸಿ 1-1 ರಿಂದ ಸಮಬಲ ಸಾಧಿಸಿವೆ.

ಮಹಿಳೆಯರ ಸಿಂಗಲ್ಸ್‌ನಲ್ಲಿ ಆಸೀಸ್‌ನ ಅಶ್ಲೆ ಬಾರ್ಟಿ ಅವರು ವಿಕ್ಟೋರಿಯ ಅಝರೆಂಕಾರನ್ನು ಮಣಿಸಿದರೆ, ಅರ್ಯನಾ ಸಬಾಲೆಂಕಾ ಅವರು ಸಮಂತಾ ಸ್ಟೋಸರ್ ಅವರನ್ನುಸೋಲಿಸಿದರು. ಆಸ್ಟ್ರೇಲಿಯ-ಬೆಲಾರಸ್ ತಲಾ ಒಂದು ಪಂದ್ಯ ಗೆದ್ದು 1-1 ರಿಂದ ಸಮಬಲ ಸಾಧಿಸಿರುವ ಹಿನ್ನೆಲೆಯಲ್ಲಿ ರವಿವಾರ ರಿವರ್ಸ್ ಸಿಂಗಲ್ಸ್ ಪಂದ್ಯ ನಡೆಯಲಿದ್ದುಉಭಯ ತಂಡಗಳಿಗೆ ಇದು ನಿರ್ಣಾಯಕವಾಗಿದೆ.

ವಿಶ್ವದ ನಂ.9ನೇ ಆಟಗಾರ್ತಿ ಬಾರ್ಟಿ 10ನೇ ರ್ಯಾಂಕಿನ ಸಬಾಲೆಂಕಾರನ್ನು ಎದುರಿಸಲಿದ್ದರೆ, ಹಿರಿಯ ಜೋಡಿ ಸ್ಟೋಸರ್ ಹಾಗೂ ಅಝರೆಂಕಾ ಮುಖಾಮುಖಿಯಾಗಲಿದ್ದಾರೆ.

2017ರಲ್ಲಿ ಅಮೆರಿಕವನ್ನು ಮಣಿಸಿದ್ದ ಬೆಲಾರಸ್ ಮೂರು ಪ್ರಯತ್ನದಲ್ಲಿ ಎರಡನೇ ಬಾರಿ ಫೈನಲ್‌ಗೆ ತಲುಪಲು ಯತ್ನಿಸಲಿದೆ. ಆಸ್ಟ್ರೇಲಿಯ 26 ವರ್ಷಗಳ ಬಳಿಕ ಮೊದಲ ಬಾರಿಫೈನಲ್ ತಲುಪುವ ವಿಶ್ವಾಸದಲ್ಲಿದೆ. 1974ರಲ್ಲಿ 7 ಪಂದ್ಯಗಳಲ್ಲಿ ಗೆದ್ದ ಸಾಧನೆ ಮಾಡಿದೆ.

ಇತ್ತೀಚೆಗೆ ಮಿಯಾಮಿ ಓಪನ್‌ನಲ್ಲಿ ಜಯ ಸಾಧಿಸಿ ಅಗ್ರ-10ರಲ್ಲಿ ಸ್ಥಾನ ಪಡೆದಿರುವ ಬಾರ್ಟಿ ಡಬಲ್ಸ್ ಜೊತೆಗಾರ್ತಿ ಅಝರೆಂಕಾ ಎದುರು 7-6(7/2), 6-3 ಅಂತರದಿಂದಜಯಸಾಧಿಸಿದರು. 2 ಗಂಟೆ, 47ನಿಮಿಷಗಳ ಕಾಲ ನಡೆದ ಮತ್ತೊಂದುಪಂದ್ಯದಲ್ಲಿ ಸಬಾಲೆಂಕಾ ಅವರು ಮಾಜಿ ಯುಎಸ್ ಓಪನ್ ಚಾಂಪಿಯನ್ ಸ್ಟೋಸರ್ ರನ್ನು 7-5, 5-7,6-3ಸೆಟ್‌ಗಳ ಅಂತರದಿಂದಮಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News