ಚುನಾವಣಾ ಪ್ರಚಾರದಲ್ಲಿ ಅಭಿನಂದನ್ ರನ್ನು ಉಲ್ಲೇಖಿಸಿದ ಮೋದಿ

Update: 2019-04-21 16:26 GMT

ಅಹ್ಮದಾಬಾದ್, ಎ. 21: ಪ್ರಧಾನಿ ನರೇಂದ್ರ ಮೋದಿ ಅವರ ಮಾತುಗಳಲ್ಲಿ ಯಾವುದೇ ರೀತಿಯ ನೀತಿ ಸಂಹಿತೆ ಉಲ್ಲಂಘನೆ ಕಂಡು ಬಂದರೆ ಸ್ಥಳೀಯ ಚುನಾವಣಾ ಅಧಿಕಾರಿ ವರದಿ ಸಲ್ಲಿಸಲಿದ್ದಾರೆ ಎಂದು ಗುಜರಾತ್‌ನ ಮುಖ್ಯ ಚುನಾವಣಾ ಆಯುಕ್ತ ಎಸ್. ಮುರಳಿ ಕೃಷ್ಣ ರವಿವಾರ ದೃಢಪಡಿಸಿದ್ದಾರೆ.

ರಾಜ್ಯದಲ್ಲಿ ನಡೆದ ಚುನಾವಣಾ ರ‌್ಯಾಲಿ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಉಲ್ಲೇಖಿಸಿದ ಗಂಟೆಗಳ ಬಳಿಕ ಮುರಳಿ ಕೃಷ್ಣ ಈ ಸ್ಪಷ್ಟನೆ ನೀಡಿದ್ದಾರೆ. ಇಂದು ಬೆಳಗ್ಗೆ ಪಾಟ್ನಾ ಜಿಲ್ಲೆಯಲ್ಲಿ ಚುನಾವಣಾ ರ‌್ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ಪಾಕಿಸ್ತಾನ ಅಭಿನಂದನ್ ಅವರನ್ನು ವಶಕ್ಕೆ ತೆಗೆದುಕೊಂಡಾಗ, ‘‘ಒಂದು ವೇಳೆ ನಮ್ಮ ಪೈಲೆಟ್‌ಗೆ ಏನಾದರೂ ಆದರೆ, ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ನಾನು (ಪಾಕಿಸ್ತಾನಕ್ಕೆ) ಎಚ್ಚರಿಸಿದ್ದೆ.’’ ಎಂದು ಹೇಳಿದ್ದರು.

ಚುನಾವಣಾ ಪ್ರಚಾರದ ಭಾಗವಾದ ಜಾಹೀರಾತಿನಲ್ಲಿ ರಕ್ಷಣಾ ಸಿಬ್ಬಂದಿಯ ಭಾವಚಿತ್ರ ಪ್ರದರ್ಶಿಸದಂತೆ ಹಾಗೂ ಸೇನಾ ಪಡೆಗಳ ಬಗ್ಗೆ ಉಲ್ಲೇಖಿಸದಂತೆ ತಮ್ಮ ಅಭ್ಯರ್ಥಿಗಳು ಹಾಗೂ ನಾಯಕರಿಗೆ ನಿರ್ದೇಶನ ನೀಡುವಂತೆ ರಾಜಕೀಯ ಪಕ್ಷಗಳಿಗೆ ಈ ಹಿಂದೆ ಚುನಾವಣಾ ಆಯೋಗ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News