ಬುಲಂದ್‌ ಶಹರ್ ಹಿಂಸಾಚಾರ: ಪೊಲೀಸ್ ಅಧಿಕಾರಿಯ ಸಾವಿಗೆ ಮುನ್ನ ಗುಂಪು ಸೇರಿಸಿದ ಬಜರಂಗದಳದ ನಾಯಕ

Update: 2019-04-22 18:15 GMT

ಹೊಸದಿಲ್ಲಿ, ಎ. 22: ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ಸಿಂಗ್ ಸಾವಿಗೆ ಕಾರಣವಾದ ಡಿಸೆಂಬರ್ 3ರ ಬುಲಂದ್‌ಶಹರ್ ಗಲಭೆ ಆರಂಭವಾಗುವುದಕ್ಕೆ ಗಂಟೆಗಳಿಗಿಂತ ಮುನ್ನ ಬಜರಂಗದಳದ ಸಂಚಾಲಕ ಹಾಗೂ ಪ್ರಕರಣದ ಆರೋಪಿ ಯೋಗೇಶ್ ರಾಜ್ ಹಾಗೂ ಇತರ ಆರೋಪಿಗಳ ನಡುವೆ ಹಲವು ಬಾರಿ ಫೋನ್ ಕರೆಗಳು ವಿನಿಮಯವಾಗಿವೆ ಎಂದು ಉತ್ತರಪ್ರದೇಶ ಸಿಟ್ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.

ಮಹಾವ್‌ನಲ್ಲಿ ಗೋಹತ್ಯೆ ಘಟನೆ ನಡೆದಿದೆ ಎಂದು ಸೂಚಿಸಲು ಆರೋಪಿ ಸಚಿನ್ ಅಹ್ಲಾವತ್ ಬೆಳಗ್ಗೆ 8.55ಕ್ಕೆ ಯೋಗೇಶ್ ರಾಜ್‌ಗೆ 28 ಸೆಕೆಂಡ್‌ಗಳ ಕಾಲ್ ಮಾಡಿದ್ದಾನೆ ಎಂದು ಹೇಳಲಾಗಿದೆ.

  ಅನಂತರ, ಯೋಗೇಶ್ ಹಾಗೂ ಇತರ ಆರೋಪಿಗಳಾದ ಆಶಿಶ್ ಚೌಹಾನ್, ಸತೀಶ್ ಚಂದ್ರ, ಸಚಿನ್ ಜಾಟ್, ಪವನ್, ಸತ್ಯೇಂದ್ರ ಹಾಗೂ ವಿಶಾಲ್ ತ್ಯಾಗಿ ನಡುವೆ ಬೆಳಗ್ಗೆ 9ರಿಂದ 10.30ರ ನಡುವೆ ಹಲವು ಬಾರಿ ಫೋನ್ ಕರೆಗಳ ವಿನಿಮಯ ಆಗಿದೆ. ಮೊದಲ ಕರೆ ಸ್ವೀಕರಿಸಿದ 45 ನಿಮಿಷಗಳಲ್ಲಿ ಯೋಗೇಶ್ ರಾಜ್ ಇದ್ದ ಸ್ಥಳ ನಯಾಬಾಸ್‌ನಿಂದ ಸಿಯಾನಕ್ಕೆ ಬದಲಾಗಿದೆ.

ಈ ಆರೋಪ ಪಟ್ಟಿಯನ್ನು ಮಾರ್ಚ್‌ಲ್ಲಿ ಸಲ್ಲಿಸಲಾಗಿತ್ತು.

ಪೊಲೀಸ್ ಅಧಿಕಾರಿ ಸುಭೋದ್ ಕುಮಾರ್ ಸಿಂಗ್ ಹಾಗೂ ಯುವಕ ಕಲುವಾ ಹತ್ಯೆಯಾದ ಈ ಪ್ರಕರಣದಲ್ಲಿ ಬಜರಂಗದಳದ ನಾಯಕ ಯೋಗೇಶ್ ರಾಜ್, ಶಿಖಾರ್ ಅಗರ್ವಾಲ್, ಪ್ರಶಾಂತ್ ನಾಥ್ ಸಹಿತ 35 ಮಂದಿ ಆರೋಪಿಗಳಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News