×
Ad

ತ್ರಿಪುರಾ ಸಿಎಂರಿಂದ ದೌರ್ಜನ್ಯ: ಆರೋಪ ನಿರಾಕರಿಸಿದ ಪತ್ನಿ

Update: 2019-04-26 20:40 IST

ಹೊಸದಿಲ್ಲಿ,ಎ.26: ತ್ರಿಪುರಾ ಸಿಎಂ ಬಿಪ್ಲಬ್ ದೇಬ್ ತನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ ಈ ಕಾರಣದಿಂದ ತಾನು ವಿಚ್ಛೇದನಕ್ಕೆ ಮುಂದಾಗಿದ್ದೇನೆ ಎಂಬ ವರದಿಗಳನ್ನು ಬಿಪ್ಲಬ್ ದೇಬ್ ಅವರ ಪತ್ನಿ ನೀತಿ ದೇಬ್ ನಿರಾಕರಿಸಿದ್ದಾರೆ ಎಂದು NDTV.com ವರದಿ ಮಾಡಿದೆ.

ವದಂತಿಗಳಗೆ ಬಾಯಿಇಲ್ಲ, ಕೇವಲ ರೋಗಗ್ರಸ್ತ ಮನಸ್ಸುಗಳು ಮಾತ್ರ ಕೀಳುಮಟ್ಟದ ವಿಚಾರ ನಡೆಸುತ್ತದೆ. ಪ್ರಭಾವಿ ವ್ಯಕ್ತಿಗಳ ವಿರುದ್ಧ ಲಾಭ ಪಡೆಯಲು ವದಂತಿಗಳನ್ನು ಸೃಷ್ಟಿಸಲಾಗಿದೆ ಎಂದವರು ಫೇಸ್ ಬುಕ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆಂದು ವರದಿಯಾಗಿದೆ.

ಆದರೆ ಈ ಫೇಸ್ ಬುಕ್ ಖಾತೆಯು ನೀತಿ ದೇಬ್ ಅವರದ್ದೇ ಎಂದು ಖಚಿತಪಡಿಸಲು ಸಾಧ್ಯವಾಗಿಲ್ಲ ಎಂದು NDTV.com ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News