10 ಲಕ್ಷ ಜೀವ ಪ್ರಬೇಧಗಳು ಅಳಿವಿನಂಚಿನಲ್ಲಿ: ವಿಶ್ವಸಂಸ್ಥೆ

Update: 2019-04-26 17:11 GMT

ವಿಶ್ವಸಂಸ್ಥೆ, ಎ. 26: ಮಾನವನ ಹಸ್ತಕ್ಷೇಪದಿಂದಾಗಿ ಸುಮಾರು 10 ಲಕ್ಷ ಜೀವ ಪ್ರಬೇಧಗಳು ವಿನಾಶದ ಅಂಚಿನಲ್ಲಿವೆ ಎಂದು ವಿಶ್ವಸಂಸ್ಥೆಯ ಕರಡು ವರದಿಯೊಂದು ಹೇಳಿದೆ.

ಮಾನವ ಕುಲದ ಉಳಿವು ಪ್ರಾಕೃತಿಕ ಸಂಪನ್ಮೂಲವನ್ನೇ ಅವಲಂಬಿಸಿದ್ದರೂ, ಅದನ್ನು ಹೇಗೆ ನಾಶಗೊಳಿಸಲಾಗುತ್ತಿದೆ ಎಂಬುದನ್ನು ಈ ವರದಿಯು ವಿವರಿಸುತ್ತದೆ.

ವೇಗವಾಗಿ ನಾಶವಾಗುತ್ತಿರುವ ಪ್ರಾಕೃತಿಕ ಸಂಪನ್ಮೂಲಗಳ ಪೈಕಿ ಶುದ್ಧ ಗಾಳಿ, ಕುಡಿಯುವ ನೀರು, ಇಂಗಾಲದ ಡೈ ಆಕ್ಸೈಡ್ ಹೀರುವ ಅರಣ್ಯಗಳು, ಪರಾಗಸ್ಪರ್ಷ ನಡೆಸುವ ಕೀಟಗಳು, ಪ್ರೊಟೀನ್ ಸಮೃದ್ಧ ಮೀನುಗಳು ಮತ್ತು ಬಿರುಗಾಳಿಯನ್ನು ತಡೆಯುವ ಮ್ಯಾನ್‌ಗ್ರೂವ್‌ಗಳು ಕೆಲವೇ ಕೆಲವಾಗಿವೆ. ಇದು ಹವಾಮಾನ ಬದಲಾವಣೆಯಷ್ಟೇ ಪ್ರಮಾಣದ ಬೆದರಿಕೆಯಾಗಿದೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News