ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಗುರಿ
Update: 2019-04-29 23:28 IST
ಚೆನ್ನೈ, ಎ.29: ದೋಹಾದಲ್ಲಿ ಇತ್ತೀಚೆಗೆ ಕೊನೆಗೊಂಡ ಏಶ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ ತಮಿಳುನಾಡಿನ ಅಥ್ಲೀಟ್ ಗೋಮತಿ ಮಾರಿಮುತ್ತು ರಾತೋರಾತ್ರಿ ಸ್ಟಾರ್ ಅಥ್ಲೀಟ್ ಆಗಿ ಹೊರಹೊಮ್ಮಿದ್ದರು. ಇದೀಗ ಅವರು 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವತ್ತ ಸಂಪೂರ್ಣ ಚಿತ್ತ ಹರಿಸಿದ್ದಾರೆ.
ತಿರುಚಿರಾಪಲ್ಲಿಯ ಹಳ್ಳಿಯೊಂದರ ಕಾರ್ಮಿಕ ಮಾರಿಮುತ್ತುವಿನ ಮಗಳಾಗಿರುವ ಗೋಮತಿ ದೋಹದಲ್ಲಿ 800 ಮೀ. ಓಟದಲ್ಲಿ 2:02:70 ಸೆಕೆಂಡ್‌ನಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದಿದ್ದರು. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲೂ ಉತ್ತಮ ಪ್ರದರ್ಶ ನ ನೀಡುವ ಗುರಿ ಹಾಕಿಕೊಂಡಿದ್ದಾರೆ. ಪ್ರಸ್ತುತ ಅವರು ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆಯ ಉದ್ಯೋಗಿಯಾಗಿದ್ದಾರೆ. ಸೋಮವಾರ ಚೆನ್ನೈಗೆ ಆಗಮಿಸಿರುವ ಗೋಮತಿಗೆ ಹೂಹಾರ ಹಾಕಿ ಆತ್ಮೀಯ ಸ್ವಾಗತ ಕೋರಲಾಗಿದೆ.