×
Ad

ಹಾಲೆಪ್‌ರಿಂದ ಎರಡನೇ ಸ್ಥಾನ ಕಸಿದ ಕ್ವಿಟೋವಾ

Update: 2019-04-29 23:37 IST

ಪ್ಯಾರಿಸ್, ಎ.29: ಝೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ ಸೋಮವಾರ ಬಿಡುಗಡೆಯಾದ ಡಬ್ಲುಟಿಎ ರ್ಯಾಂಕಿಂಗ್‌ನಲ್ಲಿ ರೊಮಾನಿಯದ ಎದುರಾಳಿ ಸಿಮೊನಾ ಹಾಲೆಪ್‌ರಿಂದ ವಿಶ್ವದ ನಂ.2ನೇ ಸ್ಥಾನವನ್ನು ಕಸಿದುಕೊಂಡಿದ್ದಾರೆ.

ಕ್ವಿಟೋವಾ ರವಿವಾರ ನಡೆದ ಸ್ಟಟ್‌ಗರ್ಟ್ ಡಬ್ಲುಟಿಎ ಟೂರ್ನಮೆಂಟ್ ಫೈನಲ್‌ನಲ್ಲಿ ತೋರಿದ ಪರಾಕ್ರಮದಿಂದಾಗಿ ಈ ಸಾಧನೆ ಮಾಡಿದ್ದಾರೆ. ಕ್ವಿಟೋವಾ ಮೊದಲ ರ್ಯಾಂಕಿನಲ್ಲಿರುವ ನವೊಮಿ ಒಸಾಕಾರಿಂದ ಕೇವಲ 136 ಅಂಕದಿಂದ ಹಿಂದಿದ್ದಾರೆ. ಒಸಾಕಾ ಜರ್ಮನಿಯಲ್ಲಿ ನಡೆದಿದ್ದ ಸ್ಟಟ್‌ಗರ್ಟ್ ಓಪನ್‌ನ ಸೆಮಿ ಫೈನಲ್‌ನಲ್ಲಿ ಸೋತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News