ಇಂಗ್ಲೆಂಡ್ ವಿಶ್ವಕಪ್ ತಂಡದಿಂದ ಹಿಂದೆ ಸರಿದ ಅಲೆಕ್ಸ್ ಹೇಲ್ಸ್
Update: 2019-04-29 23:39 IST
ಲಂಡನ್, ಎ.29: ಮುಂಬರುವ ವಿಶ್ವಕಪ್‌ನಲ್ಲಿ ಅನಗತ್ಯ ಕಾರ್ಯಭಂಗವಾಗುವುದನ್ನು ತಪ್ಪಿಸಲು ಬ್ಯಾಟ್ಸ್‌ಮನ್ ಅಲೆಕ್ಸ್ ಹೇಲ್ಸ್ ಇಂಗ್ಲೆಂಡ್ ಪ್ರಕಟಿಸಿರುವ ವಿಶ್ವಕಪ್ ಸಂಭಾವ್ಯ ತಂಡದಿಂದ ಹಿಂದೆ ಸರಿದಿದ್ದಾರೆ ಎಂದು ಇಂಗ್ಲೆಂಡ್ ಹಾಗು ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ)ಸೋಮವಾರ ತಿಳಿಸಿದೆ.
ಇಂಗ್ಲೆಂಡ್ ತಂಡ ಪ್ರಕಟಿಸಿರುವ ಸಂಭಾವ್ಯ ತಂದಲ್ಲಿ ಹೇಲ್ಸ್ ಸ್ಥಾನ ಪಡೆದಿದ್ದರು.
ನಾಟಿಂಗ್‌ಹ್ಯಾಮ್ ಶೈರ್ ದಾಂಡಿಗ ಹೇಲ್ಸ್ ಐರ್ಲೆಂಡ್ ವಿರುದ್ಧ ಏಕೈಕ ಪಂದ್ಯದಲ್ಲಿ ಆಡಿಲ್ಲ. ಪಾಕಿಸ್ತಾನ ವಿರುದ್ಧ ಏಕದಿನ ಹಾಗೂ ಟಿ-20 ತಂಡಗಳಿಂದ ಹೊರಗಿಡಲಾಗಿದೆ.
ಅಲೆಕ್ಸ್ 2017ರಲ್ಲಿ ಸಹ ಆಟಗಾರ ಬೆನ್‌ಸ್ಟೋಕ್ಸ್ ರೊಂದಿಗೆ ನೈಟ್ ಕ್ಲಬ್‌ನಲ್ಲಿ ನಡೆಸಿದ ಗಲಾಟೆಗೆ ಸಂಬಂಧಿಸಿ ದಂಡದಜೊತೆಗೆ ಅಮಾನತುಗೊಂಡಿದ್ದರು.
ಐಸಿಸಿ ಏಕದಿನ ವಿಶ್ವಕಪ್ ಮೇ 30 ರಿಂದ ಇಂಗ್ಲೆಂಡ್‌ನಲ್ಲಿ ಆರಂಭವಾಗಲಿದೆ. ಇಂಗ್ಲೆಂಡ್ ಲಂಡನ್‌ನಲ್ಲಿ ಆಡಲಿರುವ ತನ್ನ ಮೊದಲ ಪಂದ್ಯದಲ್ಲಿ ದ.ಆಫ್ರಿಕವನ್ನು ಎದುರಿಸಲಿದೆ.