×
Ad

ಐಪಿಎಲ್ ಪ್ಲೇ-ಆಫ್ ಪಂದ್ಯಗಳ ಸಮಯ ಬದಲಾವಣೆ

Update: 2019-04-29 23:52 IST

ಮುಂಬೈ, ಎ.29: ಇಂಡಿಯನ್ ಪ್ರೀಮಿಯರ್ ಲೀಗ್‌ನ(ಐಪಿಎಲ್)ನಾಲ್ಕು ಪ್ಲೇ-ಆಫ್ ಪಂದ್ಯಗಳು ಹಾಗೂ ಫೈನಲ್ ಪಂದ್ಯ ಸಂಜೆ 7:30ಕ್ಕೆ ಆರಂಭವಾಗಲಿದೆ.

ಸಾಂಪ್ರದಾಯಿಕವಾಗಿ ರಾತ್ರಿ 8:00 ಗಂಟೆಗೆ ಪಂದ್ಯ ಆರಂಭವಾಗಬೇಕಾಗಿತ್ತು. 7:30ಕ್ಕೆ ಟಾಸ್ ಚಿಮ್ಮುವಿಕೆ ನಡೆಯುತ್ತದೆ. ಈಗ ಪಂದ್ಯ ಅರ್ಧಗಂಟೆ ಮುಂಚಿತವಾಗಿ ಆರಂಭವಾಗಲಿದೆ. 2018ರ ಆವೃತ್ತಿಯ ಐಪಿಎಲ್‌ನಲ್ಲಿ ಪ್ಲೇ-ಆಫ್ ಪಂದ್ಯಗಳನ್ನು ಸಂಜೆ 7:00ಕ್ಕೆ ಆರಂಭಿಸಲಾಗಿತ್ತು.

ಇತ್ತೀಚೆಗೆ ಹೊಸದಿಲ್ಲಿಯಲ್ಲಿ ನಡೆದ ಆಡಳಿತಾಧಿಕಾರಿಗಳ ಸಮಿತಿ ಸಭೆಯಲ್ಲಿ ಐಪಿಎಲ್ ಪಂದ್ಯಗಳ ಸಮಯವನ್ನು ಪರಿಷ್ಕೃರಿಸುವ ಕುರಿತು ಚರ್ಚಿಸಲಾಗಿದೆ.

‘‘ನಾವು ಪಂದ್ಯ ಪ್ರಸಾರ ಸಂಸ್ಥೆಗಳೊಂದಿಗೆ ಮಾತನಾಡಿದ್ದು, ಪಂದ್ಯ ರಾತ್ರಿ 8ರ ಬದಲಿಗೆ 7:30ಕ್ಕೆ ಆರಂಭವಾಗುವ ಸಾಧ್ಯತೆಯಿದೆ’’ ಎಂದು ಶನಿವಾರ ಸಿಒಎಯೊಂದಿಗೆ ಸಭೆ ನಡೆಸಿದ ಬಳಿಕ ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದರು.

ಕ್ವಾಲಿಫೈಯರ್-1 ಪಂದ್ಯ ಚೆನ್ನೈನಲ್ಲಿ ಮೇ 7 ರಂದು ನಡೆದರೆ, ಮೇ 8 ರಂದು ಎಲಿಮಿನೇಟರ್ ಹಾಗೂ ಮೇ 10 ರಂದು ಕ್ವಾಲಿಫೈಯರ್-2 ಪಂದ್ಯಗಳು ವಿಶಾಖಪಟ್ಟಣದಲ್ಲಿ ನಡೆಯಲಿದೆ. ಫೈನಲ್ ಪಂದ್ಯ ಮೇ 12ಕ್ಕೆ ಹೈದರಾಬಾದ್‌ನಲ್ಲಿ ನಿಗದಿಯಾಗಿದೆ.

ಇದೇ ವೇಳೆ, ಮಹಿಳಾ ಟಿ-20 ಚಾಲೆಂಜ್ ಟೂರ್ನಿಯ ಮೂರು ಪಂದ್ಯಗಳು ಸಂಜೆ 7:30ಕ್ಕೆ ಆರಂಭವಾಗುತ್ತವೆ. ಎರಡನೇ ಪಂದ್ಯ ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ. ಎಲ್ಲ ಪಂದ್ಯಗಳು ಜೈಪುರದ ಸವಾಯ್ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News