×
Ad

ಮದ್ಯ ಸೇವಿಸಿ ಅಮಾನತುಗೊಂಡ ಏರ್ ಇಂಡಿಯಾ ಪೈಲಟ್ ಈಗ ಪ್ರಾದೇಶಿಕ ನಿರ್ದೇಶಕ!

Update: 2019-04-30 22:13 IST

ಹೊಸದಿಲ್ಲಿ,ಎ.30: ವಿಮಾನ ಯಾನಕ್ಕೂ ಮೊದಲ ಮದ್ಯಪಾನ ಪರೀಕ್ಷೆಯಲ್ಲಿ ವಿಫಲವಾಗಿ ಅಮಾನತುಗೊಂಡಿದ್ದ ಏರ್ ಇಂಡಿಯಾ ಪೈಲಟ್ ಅರವಿಂದ್ ಕತ್ಪಲಿಯ ಅವರಿಗೆ ಸದ್ಯ ವೈಮಾನಿಕ ಸಂಸ್ಥೆಯ ಉತ್ತರ ಭಾಗದ ಪ್ರಾದೇಶಿಕ ನಿರ್ದೇಶಕ ಸ್ಥಾನಕ್ಕೆ ಭಡ್ತಿ ನೀಡಲಾಗಿದೆ ಎಂದು ವೈಮಾನಿಕ ಸಂಸ್ಥೆಯ ಮಂಗಳವಾರದ ಅಧಿಕೃತ ಪ್ರಕಟನೆಯಲ್ಲಿ ತಿಳಿಸಲಾಗಿದೆ.

 ಮದ್ಯಪಾನ ಪರೀಕ್ಷೆಯಲ್ಲಿ ವಿಫಲವಾದ ಕಾರಣಕ್ಕೆ 2018ರ ನವೆಂಬರ್‌ನಲ್ಲಿ ಕತ್ಪಲಿಯ ಅವರ ಹಾರಾಟ ಪರವಾನಿಗೆಯನ್ನು ಅಮಾನತುಗೊಳಿಲಾಗಿತ್ತು. ಪ್ರಸ್ತುತ ಉತ್ತರ ವಿಭಾಗದ ಪ್ರಾದೇಶಿಕ ನಿರ್ದೇಶಕರಾಗಿರುವ ಪಂಕಜ್ ಕುಮಾರ್ ಎಪ್ರಿಲ್ 30, 2019ರಂದು ಸೇವೆಯಿಂದ ನಿವೃತ್ತಿ ಹೊಂದುತ್ತಿರುವ ಕಾರಣ ಮೇ 1, 2019ರಿಂದ ಆ ಸ್ಥಾನದಲ್ಲಿ ಅರವಿಂದ್ ಕತ್ಪಲಿಯ ಅಧಿಕಾರ ಸ್ವೀಕರಿಸಿಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಕಳೆದ ವರ್ಷ ನವೆಂಬರ್ 11ರಂದು ಹೊಸದಿಲ್ಲಿಯಿಂದ ಲಂಡನ್‌ಗೆ ತೆರಳುವ ವಿಮಾನದ ಹಾರಾಟಕ್ಕೂ ಮೊದಲು ಕತ್ಪಲಿಯ ಅವರ ಮೇಲೆ ನಡೆಸಿದ ಮದ್ಯಪಾನ ಪರೀಕ್ಷೆಯಲ್ಲಿ ಅವರು ವಿಫಲವಾಗಿದ್ದರು. ಮರುದಿನ ಡಿಜಿಸಿಎ ಕತ್ಪಲಿಯ ಅವರ ಹಾರಾಟ ಪರವಾನಿಗೆಯನ್ನು ಮೂರು ವರ್ಷಗಳ ಅವಧಿಗೆ ಅಮಾನತುಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News