ಮುಶರ್ರಫ್ ವಿರುದ್ಧದ ದೇಶದ್ರೋಹ ಪ್ರಕರಣದ ವಿಚಾರಣೆ ಮುಂದೂಡಿಕೆ

Update: 2019-05-02 16:34 GMT

ಇಸ್ಲಾಮಾಬಾದ್, ಮೇ 2: ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೇಝ್ ಮುಶರ್ರಫ್ ತನ್ನ ವಿರುದ್ಧದ ದೇಶದ್ರೋಹದ ವಿಚಾರಣೆಯನ್ನು ಎದುರಿಸಲು ಗುರುವಾರ ಇಲ್ಲಿನ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಲು ವಿಫಲರಾದರು.

ತನ್ನ ಅನುಪಸ್ಥಿತಿಗೆ ಕ್ಷೀಣಿಸುತ್ತಿರುವ ಆರೋಗ್ಯವೇ ಕಾರಣ ಎಂಬ ಅವರ ವಾದವನ್ನು ಸ್ವೀಕರಿಸಿದ ನ್ಯಾಯಾಲಯವು, ರಮಝಾನ್ ಮುಗಿಯುವವರೆಗೆ ವಿಚಾರಣೆಯನ್ನು ಮುಂದೂಡಬೇಕೆನ್ನುವ ಅವರ ಮನವಿಯನ್ನು ಅಂಗೀಕರಿಸಿತು ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.

75 ವರ್ಷದ ಮುಶರ್ರಫ್ ಮಾತನಾಡುವ ಸ್ಥಿತಿಯಲ್ಲಿ ಇಲ್ಲ ಎಂದು ಹೇಳಿದ ಅವರ ವಕೀಲ ಸಲ್ಮಾನ್ ಸಫ್ದರ್, ನನ್ನ ಕಕ್ಷಿಗಾರನ ನೆರವಿಲ್ಲದೆ ನಾನು ನ್ಯಾಯಾಲಯದಲ್ಲಿ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಿಲ್ಲ ಎಂದರು.

ಮುಶರ್ರಫ್‌ರ ಮನವಿಯನ್ನು ಅಂಗೀಕರಿಸಿದ ಮೂವರು ಸದಸ್ಯರ ನ್ಯಾಯಪೀಠವು, ವಿಚಾರಣೆಯನ್ನು ಜೂನ್ 12ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News