ರಕ್ಷಣಾ ಕಾರ್ಯದರ್ಶಿಯನ್ನು ವಜಾ ಗೊಳಿಸಿದ ತೆರೇಸಾ ಮೇ

Update: 2019-05-02 17:13 GMT

ಲಂಡನ್, ಮೇ 2: ಬ್ರಿಟಿಶ್ ಪ್ರಧಾನಿ ತೆರೇಸಾ ಮೇ ಬುಧವಾರ ರಕ್ಷಣಾ ಕಾರ್ಯದರ್ಶಿ ಗ್ಯಾವಿನ್ ವಿಲಿಯಮ್ಸನ್‌ರನ್ನು ವಜಾಗೊಳಿಸಿದ್ದಾರೆ.

ಬ್ರಿಟನ್‌ನಲ್ಲಿ 5ಜಿ ಮೊಬೈಲ್ ಜಾಲವನ್ನು ನಿರ್ಮಿಸಲು ಚೀನಾದ ತಂತ್ರಜ್ಞಾನ ದೈತ್ಯ ವಾವೆ ಕಂಪೆನಿಗೆ ಶರತ್ತುಬದ್ಧ ಅನುಮೋದನೆ ನೀಡಲಾಗಿದೆ ಎಂಬ ಮಾಹಿತಿಯ ಸೋರಿಕೆ ಬಗ್ಗೆ ನಡೆದ ತನಿಖೆಯ ಬಳಿಕ ಈ ಬೆಳವಣಿಗೆ ನಡೆದಿದೆ.

‘‘ಸರಕಾರದಿಂದ ಹೊರಹೋಗುವಂತೆ ರಕ್ಷಣಾ ಕಾರ್ಯದರ್ಶಿ ಗ್ಯಾವಿನ್ ವಿಲಿಯಮ್ಸನ್‌ರಿಗೆ ಪ್ರಧಾನಿ ಈ ಸಂಜೆ ಸೂಚಿಸಿದ್ದಾರೆ. ರಕ್ಷಣಾ ಕಾರ್ಯದರ್ಶಿಯಾಗಿ ಹಾಗೂ ತನ್ನ ಸಚಿವ ಸಂಪುಟದ ಸದಸ್ಯರಾಗಿ ಸೇವೆ ಸಲ್ಲಿಸುವ ಅವರ ಸಾಮರ್ಥ್ಯದ ಬಗ್ಗೆ ಪ್ರಧಾನಿ ವಿಶ್ವಾಸ ಕಳೆದುಕೊಂಡಿದ್ದಾರೆ’’ ಎಂದು ಪ್ರಧಾನಿಯ ಡೌನಿಂಗ್ ಸ್ಟ್ರೀಟ್ ಕಚೇರಿಯ ವಕ್ತಾರೆಯೊಬ್ಬರು ಬುಧವಾರ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News