ಕಾರ್ಮಿಕರು ಯಾವ ಧ್ಯೇಯ ಹೊಂದಿರಬೇಕು?

Update: 2019-05-02 18:32 GMT

‘ದಿ ಇಂಡಿಯನ್ ಫೆಡರೇಶನ್ ಆಫ್ ಲೇಬರ್’ ಎಂಬ ಸಂಸ್ಥೆಯು ದಿಲ್ಲಿಯಲ್ಲಿ ದಿನಾಂಕ 8 ರಿಂದ 17 ಸೆಪ್ಟಂಬರ್ 1943ರ ವರೆಗೆ ಏರ್ಪಡಿಸಿದ ‘ದ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ವರ್ಕ್ಸ್ ಸ್ಟಡೀ ಕ್ಯಾಂಪ್’ನ ಸಮಾರೋಪ ಸಮಾರಂಭದ ಕಾಲಕ್ಕೆ ದಿ.17 ಸೆಪ್ಟ್ಟಂಬರ್ 1943ರಂದು ಡಾ. ಬಾಬಾಸಾಹೇಬ ಅಂಬೇಡ್ಕರರು ಮಾಡಿದ ಭಾಷಣ.

ನಿಮ್ಮ ಕಾರ್ಯದರ್ಶಿ ನಾನು ಒಂದೆರಡು ಮಾತು ಆಡಬೇಕೆಂದು ಹೇಳಿದ್ದು ನನಗೆ ಸಂತೋಷವನ್ನುಂಟುಮಾಡಿದೆ. ಈ ಆಮಂತ್ರಣವನ್ನು ಸ್ವೀಕರಿಸಬೇಕೆ, ಬೇಡವೇ ಎಂಬ ಪ್ರಶ್ನೆಯು ಎರಡು ಕಾರಣಕ್ಕಾಗಿ ಕಾಡಿತು. ಸರಕಾರಕ್ಕೆ ಬಂಧನಕಾರಕವಾಗುವಂತೆ ನಾನು ಮಾತಾಡುವುದು ಸಾಧ್ಯವಿಲ್ಲ. ಎರಡನೆಯದೆಂದರೆ, ನಿಮ್ಮ ಆತ್ಮೀಯವಾದ ಕಾರ್ಮಿಕರ ಆರ್ಥಿಕ ಬೇಡಿಕೆಯ ಬಗೆಗೆ ನಾನು ತೀರ ಕಡಿಮೆ ಮಾತಾಡಬಹುದು. ಸತ್ಯ ಹೇಳಬೇಕೆಂದರೆ, ನಾನು ಒಪ್ಪುವವರೆಗೆ ನಿಮ್ಮ ಕಾರ್ಯದರ್ಶಿ ಅಲುಗಾಡಲೂ ಸಿದ್ಧನಿರಲಿಲ್ಲ. ಹೀಗಾಗಿ ಒಪ್ಪಿಗೆ ನೀಡಬೇಕಾಯಿತು. ಹಾಗೆ ನನಗೆ ಅನಿಸಿದ್ದೇನೆಂದರೆ ಕಾರ್ಮಿಕ ಚಳವಳಿಯ ಬಗೆಗೆ ನನ್ನ ಮನದೊಳಗಿರುವ ವಿಷಯವನ್ನು ಹೇಳಲು ಇದೊಂದು ಉತ್ತಮ ಅವಕಾಶ ಸಿಕ್ಕಿದೆ ಮತ್ತು ಕೇವಲ ಕಾರ್ಮಿಕರ ಆರ್ಥಿಕ ಚಳವಳಿಯ ವಿಷಯದಲ್ಲಷ್ಟೇ ಆಸ್ಥೆಯಿದ್ದವರಿಗೂ, ನನ್ನ ಅಭಿಪ್ರಾಯದ ಕೆಲವು ಸಂಗತಿಯಾದರೂ ಒಪ್ಪಿಗೆಯಾಗದೇ ಇರಲಾರದು. ಆದರೆ ಆ ಪ್ರಶ್ನೆಯು ಇಂದಿನ ಸ್ವರೂಪವನ್ನು ಅರಿಯಲು ಸ್ವಲ್ಪ ಹಿಂದಕ್ಕೆ ಹೋಗಬೇಕಾಗುತ್ತದೆ. ಮಾನವ ಸಮಾಜದ ಆಡಳಿತ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಒಮ್ಮೆ ಎಂಥ ಕಾಲವಿತ್ತೆಂದರೆ, ಕೆಟ್ಟರಾಜರ ಅನಿಯಂತ್ರಿತ ಸತ್ತೆಯೇ ಆಡಳಿತ ಸಂಸ್ಥೆಯ ಸ್ವರೂಪವಾಗಿತ್ತು.

ಎಷ್ಟೋ ವರ್ಷಗಳ ರಕ್ತಸಿಕ್ತ ಕಾಳಗದ ಬಳಿಕ ಆ ಪರಿಸ್ಥಿತಿಯು ಬದಲಾಗಿ ಸಂಸದೀಯ ಪ್ರಜಾ ಪ್ರಭುತ್ವ ಬಂತು. ಆಡಳಿತದಲ್ಲಿ ಇದೇ ಸರ್ವೋತ್ಕೃಷ್ಟ ಎಂಬ ಭಾವನೆಯು ಆಗ ಎಲ್ಲೆಡೆ ಪಸರಿಸಿತ್ತು. ಪ್ರತಿವ್ಯಕ್ತಿಗೂ ಸ್ವಾತಂತ್ರ ಸಂಪತ್ತು ಮತ್ತು ಸುಖ ಪ್ರಾಪ್ತಿ ಮಾಡುವ ಅಧಿಕಾರವಿರುವಂತಹ ವಾತಾವರಣ ನಿರ್ಮಿಸಲಾಗುವುದು ಎಂಬ ನಂಬಿಕೆಯಿತ್ತು. ಅದಕ್ಕೆ ನಿಜವಾದ ಕಾರಣವೂ ಇತ್ತು. ಈ ಪದ್ಧತಿಯಲ್ಲಿ ಜನತೆಯ ಅವ್ಯಕ್ತ ಬಯಕೆಗಳಿಗೆ ಮೂರ್ತಸ್ವರೂಪ ನೀಡುವ ಕಾಯ್ದೆ ಮಂಡಳವಿದೆ. ಅದಕ್ಕೆ ಹೊಣೆಯಾಗಿರುವ ಕಾರ್ಯಕಾರಿ ಮಂಡಳವಿದೆ. ಅದರಾಚೆಗೆ ಅವರಿಬ್ಬರ ಮೇಲೆ ಗಮನವಿರಿಸಿ, ನಿಯಂತ್ರಣದಲ್ಲಿಡಲು ನ್ಯಾಯ ಮಂಡಳಿಯೂ ಇದೆ. ಕಾಯ್ದೆಮಂಡಳಿ ಮತ್ತು ಕಾರ್ಯಕಾರಿ ಮಂಡಳಿಯ ಮೇಲೆ ನಿಯಂತ್ರಣ ಮತ್ತು ಅಧಿಕಾರ ಕ್ಷೇತ್ರದಲ್ಲಿರಿಸಲು ನ್ಯಾಯ ವ್ಯವಸ್ಥೆಯಿದೆ. ಜನರಿಂದ, ಜನರಿಗಾಗಿ, ಜನರೇ ನಡೆಸಿದ ಸರಕಾರವು ಜನಪ್ರಿಯ ಸರಕಾರದ ಎಲ್ಲಾ ವೈಶಿಷ್ಟವು ಸಂಸದೀಯ ಪ್ರಜಾಪ್ರಭುತ್ವದಲ್ಲಿದೆ.

 ಜನತೆಯ ನಿಜವಾದ ರಾಜ್ಯಕ್ಕೆ ಅಗತ್ಯವಿರುವ ಸರ್ವಗುಣವು ಈ ಪದ್ಧತಿಯಲ್ಲಿ ಗೋಚರಿಸುತ್ತದೆ. ಆದ್ದರಿಂದಲೆ ಈ ಪದ್ಧತಿಯೂ ಸಾರ್ವತ್ರಿಕವಾಗಿ ಶುರುವಾಗಿ ಒಂದು ಶತಕವೂ ಉರುಳಿರಲಿಕ್ಕಿಲ್ಲ. ಅಷ್ಟರಲ್ಲಿ ಅದರ ವಿರುದ್ಧ ಎಲ್ಲೆಡೆ ಸುದ್ದಿ ಹಬ್ಬಿರುವುದು ಕಂಡು ಬೆರಗಾಗುವುದೇ ಸಹಜ. ಇಟಲಿ, ಸ್ಪೇನ್, ಜರ್ಮನ್ ಅಥವಾ ರಶ್ಯಾದಲ್ಲೇ ಇರಲಿ, ಈ ಪದ್ಧತಿಯ ವಿರುದ್ಧ ಜೋರಾಗಿ ಬಂಡೇಳಲಾಗಿದೆ. ಈ ಪದ್ಧತಿಯ ವಿರುದ್ಧ ಕೂಗು ಎಬ್ಬಿಸದ ದೇಶಗಳು ತೀರ ವಿರಳ. ಹೀಗೇಕೆ ಎನ್ನುವುದು ಯೋಚಿಸಬೇಕಾದ ಸಂಗತಿ. ಉಳಿದ ಯಾವುದೇ ದೇಶಕ್ಕಿಂತಲೂ ಭಾರತದಲ್ಲೇ ಅಧಿಕವಾಗಿ ಈ ಪ್ರಶ್ನೆಯ ಕುರಿತು ಯೋಚಿಸ ಬೇಕಾಗಿದೆ. ಭಾರತದಲ್ಲಿ ಸಂಸದೀಯ ಪ್ರಜಾಪ್ರಭುತ್ವವಿರಬೇಕೆಂಬ ಚರ್ಚೆಯೂ ಆರಂಭಗೊಂಡಿದೆ. ಆದರೆ ಒಬ್ಬ ನಿರ್ಭೀತ ವ್ಯಕ್ತಿಯು ಮುಂದೆ ಬಂದು, ‘‘ಈ ಮಾರ್ಗದಲ್ಲಿ ಸಾಗುವುದು ಗಂಡಾಂತಕಾರಿ, ಆರಂಭಕ್ಕೆ ಅನಿಸಿದಂತೆ ಈ ಪದ್ಧತಿಯು ಸಮಾಜಧಾರಣೆಯ ಸರ್ವೋತ್ತಮ ಮಾರ್ಗವಲ್ಲ’’ ಎಂದು ಹೇಳಬೇಕಾಗಿದೆ.

ಆದರೆ ಪಾರ್ಲಿಮೆಂಟರಿ ಸ್ವರೂಪದ ಪ್ರಜಾಪ್ರಭುತ್ವವು ಅಯಶಸ್ವಿಯಾಗಿದೆಯೇ? ಸರ್ವಾಧಿಕಾರಿಗಳ ದೇಶದಲ್ಲಿ ಅದು ವಿಫಲವಾಗಿದ್ದು ನಿಜ. ಏಕೆಂದರೆ ತಕ್ಷಣ ಕೆಲಸಮಾಡುವ ರೂಢಿಯದಕ್ಕಿಲ್ಲ. ವಿಳಂಬವೇ ಅದರ ಪ್ರತಿಜ್ಞೆಯಾಗಿದೆ. ಯಾವ ಕಾಯ್ದೆಯು ಮಂಜೂರಾಗಬೇಕೆಂದು ಕಾನೂನು ಮಂಡಳಿಯು ಸ್ಥಗಿತವಾಗಿಡದಿದ್ದರೆ, ನ್ಯಾಯಮಂಡಳಿಯು ಅದನ್ನು ಸ್ಥಗಿತಗೊಳಿಸಬಹುದಾಗಿದೆ. ಸಂಸದೀಯ ಪ್ರಜಾಪ್ರಭುತ್ವದಲ್ಲಿ ಸರ್ವಾಧಿಕಾರಕ್ಕೆ ಅವಕಾಶವಿಲ್ಲ. ಸರ್ವಾಧಿಕಾರವಿರುವ ಇಟಲಿ, ಸ್ಪೇನ್, ಜರ್ಮನ್‌ನಂತಹ ದೇಶದಲ್ಲಿ ಸಂಸದೀಯ ಪ್ರಜಾಪ್ರಭುತ್ವ ಅಪನಂಬಿಕೆಯ ಸಂಸ್ಥೆಯೆಂದು ಪರಿಗಣಿಸಲಾಗುತ್ತದೆ. ಆದರೆ ಕೇವಲ ಸರ್ವಾಧಿಕಾರವಷ್ಟೇ ಈ ಪದ್ಧತಿಯನ್ನು ವಿರೋಧಿಸುತ್ತದೆ ಎಂದೇನಲ್ಲ. ಸರ್ವಾಧಿಕಾರವು ಪ್ರಜಾಪ್ರಭುತ್ವಕ್ಕೆ ಮಾಡಿದ ವಿರೋಧವು ನಿಜವಾದ ಅರ್ಥದಲ್ಲಿ ವಿರೋಧ ಎಂದೆನಿಸುವುದಿಲ್ಲ. ಸಂಸದೀಯ ಪ್ರಜಾಪ್ರಭುತ್ವವನ್ನು ಸ್ವಾಗತಿಸಲಾಗುವುದು, ಏಕೆಂದರೆ ಅದು ಸರ್ವಾಧಿಕಾರದ ಮೇಲೆ ಪ್ರಭಾವಶಾಲಿಯಾಗಿ ನಿಯಂತ್ರಣವನ್ನು ಇರಿಸಬಲ್ಲುದು. ದುರ್ದೈವವೆಂದರೆ, ಯಾವ ದೇಶದ ಜನರು ಸರ್ವಾಧಿಕಾರವನ್ನು ವಿರೋಧಿಸುತ್ತಾರೋ ಅಲ್ಲಿಯೂ ಸಹ ಸಂಸದೀಯ ಪ್ರಜಾಪ್ರಭುತ್ವದ ಬಗೆಗೆ ಅಸಮಾಧಾನವಿದೆ. ಇದು ಸಂಸದೀಯ ಪ್ರಜಾಪ್ರಭುತ್ವದ ಬಗೆಗಿನ ಶೋಚನೀಯ ಸ್ಥಿತಿ. ಸಂಸದೀಯ ಪ್ರಜಾಪ್ರಭುತ್ವವು ಸ್ಥಗಿತಗೊಂಡಿಲ್ಲ ಎನ್ನುವುದೇ ಅಧಿಕ ಶೋಚನೀಯವಾದುದು. ಮೂರು ದಿಕ್ಕಿನಿಂದ ಅದರ ವಿಕಾಸವಾಗಿದೆ. ಪ್ರತಿವ್ಯಕ್ತಿಗೂ ಸಮಾನ ರಾಜಕೀಯ ಹಕ್ಕಿರಬೇಕು ಎಂಬ ತತ್ವವು ಸತತವಾಗಿ ಬೆಳೆಯುತ್ತಿದೆ. ಅದೆಷ್ಟೆಂದರೆ, ಸಾರ್ವತ್ರಿಕ ಮತದಾನದ ಹಕ್ಕು ಇರದ ಒಂದು ರಾಷ್ಟ್ರವು ಈ ಪದ್ಧತಿಯನ್ನು ಅವಲಂಭಿಸದೆ ಇರಲಿಲ್ಲ. ಎರಡನೆಯದೆಂದರೆ ಇದರಲ್ಲಿ ಆರ್ಥಿಕ ಮತ್ತು ಸಾಮಾಜಿಕ ಸಮಿತಿಯ ತತ್ವವು ಒಪ್ಪಿಗೆಯಾಗಿದೆ. ಮೂರನೆಯದು, ಸಮಾಜ ವಿರೋಧಿಯಾಗಿರುವ ಸಂಘಟಿತ ಸಂಸ್ಥೆಗಳು ಸ್ವಂತ ಉದ್ದೇಶಕ್ಕಾಗಿ ರಾಜ್ಯವನ್ನು ಇಕ್ಕಟ್ಟಿನಲ್ಲಿ ಸಿಕ್ಕಿಸುವುದಿಲ್ಲವೆಂದು ಒಪ್ಪಿಕೊಳ್ಳಲಾಗಿದೆ.

ಸಂಸದೀಯ ಪ್ರಜಾಪ್ರಭುತ್ವವು ಆರ್ಥಿಕ ವಿಷಮತೆಯನ್ನು ಗಮನಿಸಲಿಲ್ಲ. ಹಾಗೆಯೇ ಕರಾರಿನ ಸ್ವಾತಂತ್ರವು ಸಂಬಂಧಿತ ಪಕ್ಷದ ಮೇಲೆ ಯಾವ ಪರಿಣಾಮ ಬೀರಬಲ್ಲದು, ಅದು ಅನ್ಯಾಯಕಾರಕವಾಗಬಹುದೇ ಎನ್ನುವುದನ್ನು ಯೋಚಿಸಲಿಲ್ಲ. ಕರಾರು ಮಾಡುವ ಸ್ವಾತಂತ್ರದಿಂದಾಗಿ ದುರ್ಬಲರನ್ನು ಅವರ ಹಕ್ಕಿನಿಂದ ವಂಚಿತಗೊಳಿಸುವ ಅವಕಾಶವು ಸಶಕ್ತರಿಗೆ ಪ್ರಾಪ್ತವಾಗಿದೆ ಎನ್ನುವುದರ ಬಗೆಗೂ ಯೋಚಿಸಲಿಲ್ಲ. ಇಷ್ಟಿದ್ದರೂ ಪ್ರಜಾಪ್ರಭುತ್ವದ ಪ್ರತಿಜ್ಞೆಯನ್ನು ತೆಗೆದುಕೊಂಡ ದೇಶದಲ್ಲಿ ಈ ಪದ್ಧತಿಯ ವಿರುದ್ಧ ಸಾಕಷ್ಟು ಅಸಂತೋಷವಿದೆ. ಈ ವಿರೋಧವು ಸರ್ವಾಧಿಕಾರದ ವಿರೋಧಕ್ಕಿಂತಲೂ ತೀರ ಬೇರೆಯಾಗಿದೆ ಎನ್ನುವುದು ಸತ್ಯ. ತೀರ ಆಳಕ್ಕಿಳಿಯದೆ, ಸ್ವಲ್ಪದರಲ್ಲೇ ಹೇಳಬೇಕೆಂದರೆ, ಸಾಮಾನ್ಯ ಜನರಿಗೆ ಸುಖ, ಸಂಪತ್ತು ಮತ್ತು ಸ್ವಾತಂತ್ರದ ಲಾಭವು ಈಗಲೂ ಈ ಪದ್ಧತಿಯಿಂದ ಸಂಪೂರ್ಣ ಲಭಿಸದೇ ಇರುವುದೇ ಈ ಅಸಂತೋಷದ ಮೂಲದಲ್ಲಿದೆ. ಇದು ಸತ್ಯವೇ ಆಗಿದ್ದರೆ, ಸಂಸದೀಯ ಪ್ರಜಾಪ್ರಭುತ್ವದ ಅಪಯಶದ ಕಾರಣವನ್ನು ನಾವು ಅರಿತುಕೊಳ್ಳಬೇಕಿದೆ. ನನ್ನ ಅನಿಸಿಕೆಯ ಪ್ರಕಾರ, ತಪ್ಪು ಆಲೋಚನಾಕ್ರಮ ಮತ್ತು ಸಂಘಟನೆಯ ದೋಷವೇ ಈ ಅಪಯಶದ ಕಾರಣವಾಗಿದೆ.

ತಪ್ಪು ಆಲೋಚನಾ ಕ್ರಮದ ಬಗೆಗೆ ನಾನು ಎರಡು ಉದಾಹರಣೆಗಳನ್ನು ನೀಡುತ್ತೇನೆ. ಈ ಪದ್ಧತಿಯಲ್ಲಿ ಕರಾರು ಸ್ವಾತಂತ್ರದ ಹಿಂದೆ ಹೋಗಲಾಯಿತು. ಆಗ ಸಾಮಾಜಿಕ ವಿಷಮತೆ ಮತ್ತು ಅದರ ಪರಿಣಾಮದ ಬಗೆಗೆ ಯೋಚಿಸಲಿಲ್ಲ. ವಿಷಮ ಪಕ್ಷದಲ್ಲಿ ಏರ್ಪಟ್ಟ ಕರಾರು ಹೇಗೆ ಅನ್ಯಾಯವಾಗುತ್ತದೆ ಎನ್ನುವುದು ದೃಷ್ಟಿಯಿಂದ ಮರೆಯಾಯಿತು. ಸಬಲರಿಗೆ ದುರ್ಬಲರನ್ನು ಬದಿಗೆ ಸರಿಸುವ ಅವಕಾಶ ಸಿಗುತ್ತದೆ ಎಂಬುದನ್ನು ಲೆಕ್ಕಿಸಲಿಲ್ಲ. ಪರಿಣಾಮ ಏನಾಯಿತೆಂದರೆ, ಸ್ವಾತಂತ್ರವನ್ನು ಪುರಸ್ಕರಿಸುವ ಈ ಸಂಸದೀಯ ಪ್ರಜಾಪ್ರಭುತ್ವವು ಬಡವರ ದುಃಖವನ್ನು ಮತ್ತಷ್ಟು ಹೆಚ್ಚಿಸಿತು.

 ಎರಡನೆಯ ಕೊರತೆಯೇನೆಂದರೆ, ಸಾಮಾಜಿಕ, ಆರ್ಥಿಕ ಸಮತೆಯಿಲ್ಲದಿದ್ದರೆ ಕೇವಲ ರಾಜಕೀಯ ಸಮತೆಯಿಂದ ಏನೂ ಪ್ರಯೋಜನವಿಲ್ಲ ಎನ್ನ್ನುವುದು ಅರಿವಾಗಲೇ ಇಲ್ಲ. ಈ ಮಾತು ಕೆಲವರಿಗೆ ಒಪ್ಪಿಗೆಯಾಗಲಿಕ್ಕಿಲ್ಲ. ಅಂತಹವರಿಗೆ ನಾನು ಕೇಳುವುದೇನೆಂದರೆ, ಇಂಗ್ಲೆಂಡ್ ಮತ್ತು ಅಮೆರಿಕದಲ್ಲಿ ಈ ಸಂಸದೀಯ ಪ್ರಜಾಪ್ರಭುತ್ವವು ಅಯಶಸ್ವಿಯಾಗಲಿಲ್ಲ. ಆದರೆ ಇಟಲಿ,ಜರ್ಮನ್, ರಶ್ಯಾದಲ್ಲಾಯಿತು, ಏಕೆ? ಅದರ ಕಾರಣವಿಷ್ಟೇ, ಅಲ್ಲಿ ಆರ್ಥಿಕ ಮತ್ತು ಸಾಮಾಜಿಕ ಪ್ರಜಾಪ್ರಭುತ್ವ ಹೆಚ್ಚಿತ್ತು. ನಿಜವಾಗಿ ಹೇಳಬೇಕೆಂದರೆ ಪ್ರಜಾಪ್ರಭುತ್ವವೆಂದರೆ ಸಮತೆ, ಸಂಸದೀಯ ಪ್ರಜಾಪ್ರಭುತ್ವವು ಸ್ವಾತಂತ್ರವನ್ನು ಘೋಷಣೆ ಮಾಡಿತು. ಆದರೆ ನಿಜವಾದ ಸಮತೆಯ ಮುಖ ಪರಿಚಯವನ್ನು ಮಾಡಿಕೊಳ್ಳಲಿಲ್ಲ! ಸಮತೆಯ ಮಹತ್ವವು ಅರಿಯದೆ ಇರುವುದರಿಂದ ಅದಕ್ಕೆ ಸ್ವಾತಂತ್ರ ಮತ್ತು ಸಮತೆಯನ್ನು ಒಂದುಗೂಡಿಸುವುದು ಸಾಧ್ಯವಾಗಲಿಲ್ಲ. ಪರಿಣಾಮ ಸ್ವಾತಂತ್ರದ ಎದುರಿಗೆ ಸಮತೆ ನಾಮಾವಶೇಷವಾಯಿತು ಮತ್ತು ವಿಷಮತೆ ಬೆಳೆಯಿತು.

ಆದರೆ ಆಲೋಚನ ಕ್ರಮದ ದೋಷಕ್ಕಿಂತಲೂ ಸಂಘಟನೆಯ ದೋಷವೇ ಈ ಅಪಜಯಕ್ಕೆ ಹೆಚ್ಚು ಕಾರಣವಾಯಿತು. ಸರ್ವರಾಜಕೀಯ ಸಮಾಜದ ರಾಜ್ಯಕರ್ತರು ಮತ್ತು ಸಾಮಾನ್ಯ ಜನತೆಯು ಹೀಗೆ ವರ್ಗವನ್ನು ಮಾಡುತ್ತಿರುವುದು ದುರ್ದೈವ. ಅಷ್ಟಕ್ಕೆ ನಿಂತಿದ್ದರೆ ಸರಿಯಾಗುತ್ತಿತ್ತು. ಅದರ ಮೇಲೆ ಒತ್ತಡ ಎಷ್ಟಿರುತ್ತದೆ ಎಂದರೆ, ಈ ಎರಡು ದಡ ಶಾಶ್ವತವಾಗಿ ಉಳಿಯುತ್ತದೆ. ಸಮಾಜದ ಒಂದೇ ವಿಶಿಷ್ಟ ಘಟಕದಿಂದಲೇ ರಾಜ್ಯಕರ್ತರು ಆಯ್ಕೆಯಾಗುತ್ತಾರೆ. ಸಾಮಾನ್ಯ ಜನತೆಯು ಹಾಗೇ ಉಳಿಯುತ್ತದೆ. ಜನತೆ ಸ್ವತಃ ರಾಜ್ಯಾಡಳಿತ ನಡೆಸುವುದಿಲ್ಲ. ಅದು ಕೇವಲ ಶಾಸಕಾಂಗವನ್ನು ಸ್ಥಾಪಿಸುತ್ತದೆ. ಆನಂತರ ಅದರಿಂದ ನಿರ್ಲಿಪ್ತವಾಗುಳಿಯುತ್ತಾರೆ. ಅದು ತನ್ನ ರಾಜ್ಯ ಎನ್ನುವುದನ್ನೇ ಮರೆಯುತ್ತಾರೆ. ಹೀಗಾಗಿದ್ದರಿಂದಲೇ ಪಾರ್ಲಿಮೆಂಟರಿ ಪ್ರಜಾಪ್ರಭುತ್ವವು ಜನತೆಯ ರಾಜ್ಯವನ್ನು ಎಂದೂ ಸ್ಥಾಪಿಸಲಿಲ್ಲ. ಒಟ್ಟಿನಲ್ಲಿ, ಬಾಹ್ಯಾಡಂಬರಕ್ಕೆ ಜನತೆಯ ರಾಜ್ಯವಿದ್ದೂ, ವಾಸ್ತವವಾಗಿ ಅದು ಒಂದು ವರ್ಗ ಮತ್ತೊಂದು ವರ್ಗದ ಮೇಲೆ ಪರಂಪರಾಗತವಾಗಿ ನಡೆಸುವ ರಾಜ್ಯವಾಯಿತು. ಈ ದೋಷದಿಂದಾಗಿ ಪಾರ್ಲಿಮೆಂಟರಿ ಪ್ರಜಾಪ್ರಭುತ್ವವು ಅಯಶಸ್ವಿಯಾಯಿತು. ಜನತೆಯ ಸುಖದ ಆಶೆ ಪೂರ್ತಿಯಾಗಲಿಲ್ಲ.

ಹಾಗಾದರೆ ಇದಕ್ಕೆ ಯಾರು ಹೊಣೆ? ಎಂಬ ಪ್ರಶ್ನೆ ಕಾಡುತ್ತದೆ. ಪಾರ್ಲಿಮೆಂಟರಿ ಪ್ರಜಾಪ್ರಭುತ್ವವು ಬಡವರ, ಕಾರ್ಮಿಕರ ಇತರ ದಲಿತರ ಹಿತವನ್ನು ಮಾಡಲಿಲ್ಲ ಎನ್ನುವುದೂ ಸತ್ಯವೇ. ಆದರೆ ಅದಕ್ಕೆ ಅವರೇ ಹೊಣೆ. ಅಂದರೆ ನಾವು ಮನುಷ್ಯ ಜೀವನದ ಬುನಾದಿಯು ಆರ್ಥಿಕವಾದುದು ಎನ್ನುವುದನ್ನೇ ಮರೆತಂತಾಗಲಿಲ್ಲವೇ? ನಾನು ಈಗಷ್ಟೇ ‘ಆರ್ಥಿಕ ಮಾನವನ ಸಾವು’ ಎಂಬ ಪುಸ್ತಕವನ್ನು ನೋಡಿದೆ. ಆದರೆ ಆರ್ಥಿಕ ಮನುಷ್ಯನ ಜನ್ಮವೇ ಆಗದಿದ್ದಾಗ ಅವನ ಸಾವಿನ ಪ್ರಶ್ನೆಯೇ ಬರಲಾರದು. ಕೇವಲ ಅನ್ನದ ಮೇಲೆಯೇ ಮನುಷ್ಯ ಬದುಕಿರಲಾರ ಎಂದು ಮಾರ್ಕ್ಸ್‌ನ ಟೀಕಾಕಾರರು ನೀಡಿದ ಉತ್ತರವು ದುರ್ದೈವದಿಂದ ಸತ್ಯವಾದುದು. ಮನುಷ್ಯ ಹಂದಿಯಂತೆ ದಢೂತಿಯಾಗುವುದೇ ಸಂಸ್ಕೃತಿಯ ಧ್ಯೇಯವಲ್ಲ ಎಂಬ ಕಾರ್ಲೈಲನ ಮಾತನ್ನು ನಾನು ಒಪ್ಪುತ್ತೇನೆ. ಆದರೆ ಕಾರ್ಮಿಕನು ಲಕ್ಷಾಧಿಪತಿಯಾಗುವುದಂತೂ ದೂರದ ಮಾತು. ಅವನಿಗೆ ಹೊಟ್ಟೆ ತುಂಬ ಅನ್ನವೇ ಸಿಗುವುದಿಲ್ಲ. ನನ್ನ ಪ್ರಕಾರ, ಕಾರ್ಮಿಕರು ಎಲ್ಲಾ ಬಿಟ್ಟು ಮೊದಲು ಅನ್ನದ್ದೇ ಯೋಚಿಸಬೇಕು.

ಮಾನವ ಜೀವನದ ಬುನಾದಿಯು ಆರ್ಥಿಕವಾದುದು, ಹೀಗಾಗಿ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ಇತಿಹಾಸ ಜರುಗುತ್ತಿರುತ್ತದೆ ಎಂಬ ವಿಚಾರವನ್ನು ಮಾರ್ಕ್ಸ್ ಜಗತ್ತಿನ ಎದುರಿಗೆ ಮಂಡಿಸಿದಾಗಿನಿಂದ ಅದರ ಬಗೆಗೆ ವಾದ ನಡೆಯಿತು. ಆದರೆ ನನ್ನ ಅಭಿಪ್ರಾಯದಂತೆ, ಅವನು ಇದನ್ನು ತತ್ವವೆಂದು ಮಂಡಿಸದೆ, ಅದರ ಮೂಲಕ ಕಾರ್ಮಿಕರಿಗೆ ಬೋಧನೆ ಮಾಡಿದ. ಯಾವ ರೀತಿ ವರಿಷ್ಠ ವರ್ಗವೂ ಆರ್ಥಿಕ ವಿಷಯಕ್ಕೆ ಮಹತ್ವ ನೀಡುತ್ತದೆಯೋ,ಅದೇ ರೀತಿ ಕಾರ್ಮಿಕರೂ ನೀಡಿದರೆ ಇತಿಹಾಸ ಎಂದರೆ ಆರ್ಥಿಕ ಜೀವನದ ಪ್ರತಿಬಿಂಬವಾಗುತ್ತದೆ. ಮಾರ್ಕ್ಸ್‌ನ ತತ್ವವು ಸತ್ಯವಾಗಿದೆ ಎಂದು ಅನಿಸದೇ ಇರಲು ಕಾರಣ ಮೂಲದಲ್ಲಿದೆ. ಅದೇನೆಂದರೆ ಕಾರ್ಮಿಕರ ಆರ್ಥಿಕ ಪರಿಸ್ಥಿತಿಯು ಸಮಾಜ ರಚನೆಯ ಮೇಲೆ ಪರಿಣಾಮವಾಗುತ್ತದೆ ಎಂಬುದನ್ನು ಗಮನಿಸಲೇ ಇಲ್ಲ. ಶಾಸನಕ್ಕೆ ಸಂಬಂಧಿಸಿದ ಸಾಹಿತ್ಯವನ್ನು ಅವರು ಓದಲಿಲ್ಲ. ರುಸೋನ ‘ಸಾಮಾಜಿಕ ಕರಾರು’, ಮಾರ್ಕ್ಸ್‌ನ ‘ಕಮ್ಯುನಿಷ್ಟ್ ಪ್ರಣಾಳಿಕೆ’, ಪೋಪ್ 13ನೇ ಲಿವೋನ ‘ಕಾರ್ಮಿಕರ ಸ್ಥಿತಿ’ ಮತ್ತು ಜಾವಸ್ಟೂಲಿರ್ಟ್ ಮಿಲ್‌ನ ‘ಸ್ವಾತಂತ್ರ’ ಎಂಬ ಸಮಾಜ ರಚನೆಯ ಕುರಿತಾದ ನಾಲ್ಕು ಮೂಲಭೂತ ಪುಸ್ತಕಗಳನ್ನು ಕಾರ್ಮಿಕರು ಓದಲೇಬೇಕು. ಆದರೆ ಕಾರ್ಮಿಕರು ಅದಕ್ಕೆ ಮಹತ್ವ ನೀಡುವುದಿಲ್ಲೆಂದು ನನಗೆ ಖಂಡಿತ ಗೊತ್ತು. ಅವರು ರಾಜರಾಣಿಯರ ಕಥೆ ಓದುವ ಹವ್ಯಾಸವನ್ನು ಆರಂಭದಿಂದಲೂ ಬೆಳೆಸಿಕೊಂಡಿದ್ದಾರೆ.

ಖರೆಯೆಂದರೆ, ಅವರ ಅಪರಾಧ ಇದಕ್ಕಿಂತಲೂ ಭೀಕರವಾಗಿದೆ. ರಾಜ್ಯಾಡಳಿತವನ್ನು ಹಸ್ತಗತ ಮಾಡಿಕೊಳ್ಳುವ ಕಲ್ಪನೆಯೇ ಅವರನ್ನು ಸ್ಪರ್ಶಿಸಲಿಲ್ಲ. ಅಷ್ಟೇ ಅಲ್ಲ, ಸ್ವಂತದ ಹಿತಕ್ಕಾಗಿ ರಾಜ್ಯಾಡಳಿತದ ಮೇಲೆ ಹಿಡಿತವಿರಿಸಿಕೊಳ್ಳುವ ಅಗತ್ಯವಿದೆ ಎನ್ನುವುದೂ ಅವರಿಗೆ ಒಪ್ಪಿಗೆಯಿಲ್ಲ. ಅವರು ಅದರ ಬಗೆಗೆ ಯೋಚಿಸುವುದೇ ಇಲ್ಲ. ಈವರೆಗಿನ ಕೆಟ್ಟ ಘಟನೆಗಳಲ್ಲಿ ಇದೂ ಒಂದು. ಅವರ ಎಲ್ಲಾ ಸಂಘಟನಾಚಾತುರ್ಯವು ಟ್ರೇಡ್ ಯೂನಿಯನ್‌ನಂತೆ ಕೇವಲ ಆರ್ಥಿಕ ಬೇಡಿಕೆಗಾಗಿರುವ ಸೀಮಿತ ಸ್ವರೂಪದ ಸಂಸ್ಥೆಗಾಗಿಯೇ ಖರ್ಚಾಗುತ್ತದೆ. ನಾನೂ ಸಹ ಟ್ರೇಡ್ ಯೂನಿಯನ್ ವಿರುದ್ಧವಿಲ್ಲ. ಅವರಿಂದಲೂ ಉಪಯೋಗವಿರುವುದನ್ನು ನಾನು ನಿರಾಕರಿಸುವುದಿಲ್ಲ. ಆದರೆ ಅದು ಸೀಮಿತವಾಗಿರುವುದೂ ಅಷ್ಟೇ ಸತ್ಯ. ಕಾರ್ಮಿಕರ ಸಕಲ ಪ್ರಶ್ನೆಗಳನ್ನು ಅದು ಬಗೆಹರಿಸುವುದು ಸಾಧ್ಯವಿಲ್ಲ. ಅವರೆಷ್ಟೇ ಸಂಘಟಿತ ಮತ್ತು ಬಂಡವಾಳಶಾಹಿಯು ಉತ್ತಮವಾಗಿ ನಡೆಯುವಂತೆ ಬಂಡವಾಳಗಾರರನ್ನು ಅವರು ಒತ್ತಾಯ ಮಾಡುವುದು ಸಾಧ್ಯವಿಲ್ಲ.

ಅವರ ಬೆನ್ನಿಗೆ ಕಾರ್ಮಿಕ ಸರಕಾರ ಇದ್ದದ್ದೇ ಆಗಿದ್ದರೆ ಮಾತು ಬೇರೆಯಾಗುತ್ತಿತ್ತು. ಆದ್ದರಿಂದ ಕಾರ್ಮಿಕರು ಸತ್ತೆಯ ಗಳಿಸುವ ಏಕೈಕ ಧ್ಯೇಯವನ್ನು ಇರಿಸಿಕೊಳ್ಳಬೇಕು. ಇಲ್ಲದಿದ್ದರೆ, ಕಾರ್ಯಕರ್ತರ ಜಗಳ ಬಗೆಹರಿಸುವುದರಲ್ಲೇ ಅವರ ಶಕ್ತಿ ವಿನಿಯೋಗವಾಗಬಹುದು ಮತ್ತು ಕಾರ್ಮಿಕರ ಹಿತ ಬದಿಗುಳಿಯಬಹುದು.

ರಾಷ್ಟ್ರವಾದದ ಹೆಸರಿನಲ್ಲಿ ಜನರು ಅವರನ್ನು ಬೇರೆಯೇ ಮಾರ್ಗದತ್ತ ಒಯ್ಯುವುದು ಕಾರ್ಮಿಕರ ಮೂರನೇ ಅತಿದೊಡ್ಡ ದೋಷ. ಮೊದಲೇ ಬಡವರು, ಅಂತಹದ್ದರಲ್ಲಿ ರಾಷ್ಟ್ರವಾದದ ಹೆಸರಿನಲ್ಲಿ ಅವರು ಎಲ್ಲವನ್ನೂ ತ್ಯಾಗ ಮಾಡಬೇಕಾಗುತ್ತದೆ.
ಇಷ್ಟಾದರೂ ಅವರ ಸ್ವಾರ್ಥತ್ಯಾಗದಿಂದಾಗಿ ರಾಷ್ಟ್ರವಾದವು ಜಯಶಾಲಿಯಾದಾಗಲಾದರೂ ಅವರಿಗೆ ಆರ್ಥಿಕ ಮತ್ತು ಸಾಮಾಜಿಕ ಸಮತೆಯ ಲಾಭವಾಗುತ್ತದೆಯೇ ಎನ್ನುವುದರ ಬಗೆಗೂ ಕಾರ್ಮಿಕರು ಯೋಚಿಸುವುದಿಲ್ಲ. ಅವರ ಹೆಸರಿನಲ್ಲಿ ಯಾವ ರಾಷ್ಟ್ರವಾದವನ್ನು ಸಂರಕ್ಷಿಸಲಾಗುತ್ತದೆಯೋ, ಅದೇ ಅದರ ಮುಖ್ಯ ಶತ್ರುವಾಗುತ್ತದೆ. ಇಲ್ಲೇ ಅತ್ಯಂತ ಹೆಚ್ಚಿನ ಶೋಷಣೆಯಾಗುತ್ತದೆ.

ಆದ್ದರಿಂದ ಕಾರ್ಮಿಕರು ಪಾರ್ಲಿಮೆಂಟರಿ ಪ್ರಜಾಪ್ರಭುತ್ವದ ಅಡಿಯಲ್ಲೇ ಬದುಕಬೇಕೆಂದಿದ್ದಾರೆ. ತಮ್ಮ ಸ್ವಂತ ಉಪಯೋಗಕ್ಕಾಗಿಯೇ ಅದನ್ನು ಬಳಸಬೇಕಾಗುತ್ತದೆ. ಅದಕ್ಕಾಗಿ ಹಿಂದೂಸ್ಥಾನದಲ್ಲಿ ಎರಡು ಸಂಗತಿಗಳ ಅಗತ್ಯವಿದೆ. ಕೇವಲ ಆರ್ಥಿಕ ಬೇಡಿಕೆಗಾಗಿಯೇ ಟ್ರೇಡ್ ಯೂನಿಯನ್ ಸ್ಥಾಪಿಸುವ ಸಂಕುಚಿತವಾದ ಧ್ಯೇಯವನ್ನಷ್ಟೇ ಹಿಂದಿ ಕಾರ್ಮಿಕರು ಹೊಂದಿರದೆ, ಶಾಸಕಾಂಗದ ಆಡಳಿತವನ್ನು ಹಸ್ತಗತ ಮಾಡಿಕೊಳ್ಳುವ ಧ್ಯೇಯವನ್ನು ಎದುರಿಗಿರಿಸಿಕೊಳ್ಳಬೇಕು. ಹೀಗಾಗಿ ಕಾರ್ಮಿಕರು ತಮ್ಮ ಸ್ವಂತ ರಾಜಕೀಯ ಪಕ್ಷವನ್ನು ಸ್ಥಾಪಿಸಬೇಕು. ಅಂದರೆ ಟ್ರೇಡ್ ಯೂನಿಯನ್ ಕೆಲಸವು ಈ ಪಕ್ಷದ್ದಾಗುತ್ತದೆ. ಇಂತಹ ಪಕ್ಷದ ಕಾರ್ಮಿಕರ ಪ್ರತಿನಿಧಿಯೆಂದು ಮೆರೆಯುವ ಕಾರ್ಯಕರ್ತರ ವರ್ಚಸ್ಸನ್ನು ತಿರಸ್ಕರಿಸಬೇಕು ಮತ್ತು ಕೆಲವೇ ತಾತ್ಕಾಲಿಕ ಲಾಭಕ್ಕಾಗಿ ಅಂತಿಮ ಧ್ಯೇಯಕ್ಕೆ ಹಾನಿಯನ್ನುಂಟುಮಾಡುವ ಮಾಡುವ ಪ್ರವೃತ್ತಿಯನ್ನು ತೊರೆಯಬೇಕು. ಹಾಗೆಯೇ ಹಿಂದೂಮಹಾಸಭೆ ಅಥವಾ ಕಾಂಗ್ರೆಸ್‌ನಂತಹ ಜಾತೀಯ ಮತ್ತು ಬಂಡವಾಳವಿರುವ ರಾಜಕೀಯ ಪಕ್ಷದಿಂದ ಅದು ನಿರ್ಲಿಪ್ತವಾಗಿರಬೇಕು.

ಹಿಂದೂಸ್ಥಾನದ ಸ್ವಾತಂತ್ರಕ್ಕಾಗಿ ನಾವು ಹೋರಾಡುತ್ತಿದ್ದೇವೆ ಎಂಬ ಸೋಗನ್ನು ಈ ಪಕ್ಷ ಹಾಕಿಕೊಂಡರೂ, ಅದಕ್ಕೆ ಮೋಸಹೋಗದೆ ಅವರಿಂದ ದೂರ ಉಳಿಯಬೇಕು. ಕಾಂಗ್ರೆಸ್ ಮತ್ತು ಹಿಂದೂಮಹಾಸಭೆಯ ಕಪಿಮುಷ್ಟಿಯಿಂದ ಬೇರ್ಪಟ್ಟ ಮೇಲೆ ಕಾರ್ಮಿಕರು ಹಿಂದಿ ಸ್ವಾತಂತ್ರದ ಹೋರಾಟದಲ್ಲಿ ಮತ್ತಷ್ಟು ಹುರುಪಿನಿಂದ ಭಾಗವಹಿಸಬಹುದು ಎಂದು ರಾಷ್ಟ್ರವಾದದ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಯನ್ನು ನಿಲ್ಲಿಸಬಹುದು. ಆದರೆ ಅದಕ್ಕೆ ಒಂದೇ ಮಾರ್ಗ. ಸ್ವಂತದ ರಾಜಕೀಯ ಪಕ್ಷವನ್ನು ಸ್ಥಾಪಿಸುವುದು ಎಲ್ಲಕ್ಕಿಂತ ಮಹತ್ವದ ಸಂಗತಿ ಎಂದರೆ ಹಿಂದಿ ರಾಜಕಾರಣದಲ್ಲಿ ಬುದ್ಧಿವಾದದ ಅಭಾವ ಅದರಿಂದ ಕಡಿಮೆಯಾಗಬಹುದು. ತಮ್ಮ ರಾಜಕಾರಣವು ಕ್ರಾಂತಿವಾದಿಯಾಗಿದೆ ಎಂದು ಕಾಂಗ್ರೆಸ್ ಧಿಮಾಕು ತೋರಿಸುವುದರಿಂದಾಗಿ ಕೆಲವು ಜನರು ಅದರ ಬೆನ್ನು ಹತ್ತಿ ಹೋಗುತ್ತಿರುವುದೇನೋ ಸತ್ಯ.ಆದರೆ ಅದರ ಉಡಿಗೆ ಅಪಯಶದ ಹೊರತು ಬೇರೇನೂ ಬೀಳುವುದಿಲ್ಲ ಎನ್ನುವುದು ಅಷ್ಟೇ ಸತ್ಯ. ಇದರ ಕಾರಣವೇನೆಂದರೆ ಕಾಂಗ್ರೆಸ್‌ಗೆ ಪ್ರತಿಸ್ಪರ್ಧಿಯಿಲ್ಲದಿದ್ದರಿಂದ ಅದರಲ್ಲಿ ಬುದ್ಧಿವಾದ ಎಂದಿಗೂ ಬರಲೇ ಇಲ್ಲ. ಕಳೆದ ಇಪ್ಪತ್ತು ವರ್ಷಗಳ ಈ ಕೊರತೆಯೂ ಕಾರ್ಮಿಕ ಪಕ್ಷದಿಂದ ತುಂಬಿದಂತಾಗುವುದು.

ಹಿಂದಿ ಕಾರ್ಮಿಕರು ಮತ್ತೂ ಒಂದು ವಿಷಯವನ್ನು ಕಲಿಯಬೇಕಾಗಿದೆ. ಅದು ಯಾವುದೆಂದರೆ, ಜ್ಞಾನದ ಹೊರತು ಸಾಮರ್ಥ್ಯವಿಲ್ಲ. ತಮ್ಮ ಪ್ರಶ್ನೆಯೊಂದಿಗೆ ಕಾರ್ಮಿಕರು ಜನರ ಎದುರಿಗೆ ಹೋಗಿ ನಿಂತಾಗ ‘ರಾಜ್ಯ ಕಟ್ಟುವ ಅರ್ಹತೆಯು ಅವರಲ್ಲಿದೆಯೇ?’ ಎಂದು ಖಂಡಿತವಾಗಿ ಪ್ರಶ್ನೆಯನ್ನು ಕೇಳಲಾಗುತ್ತದೆ. ರಾಷ್ಟ್ರೀಯ ಮತ್ತು ಅಂತರ್ ರಾಷ್ಟ್ರೀಯ ರಾಜಕಾರಣದಲ್ಲಿ ಉಳಿದವರಷ್ಟೇ ತಪ್ಪು ನಾವು ಮಾಡುತ್ತೇವೆ ಎಂದು ಆ ಕಾಲಕ್ಕೆ ಉತ್ತರ ನೀಡಿದರೆ ಆಗುವುದಿಲ್ಲ. ಅವರು ಅದರಾಚೆಗೂ ಹೋಗಿ, ವರಿಷ್ಠ ವರ್ಗಕ್ಕಿಂತಲೂ ಹೆಚ್ಚು ರಾಜಕುಶಲರಾಗಿದ್ದಾರೆ ಎಂದು ಸಿದ್ಧ ಮಾಡಿ ತೋರಿಸಬೇಕಾಗುತ್ತದೆ. ಕಾರ್ಮಿಕರ ಶಾಸಕಾಂಗದ ಪದ್ಧತಿಯು ಉಳಿದ ವರ್ಗದ ಪದ್ಧತಿಗಿಂತ ಹೆಚ್ಚು ಜಟಿಲವಾಗಿರಬಲ್ಲದು. ಏಕೆಂದರೆ ಅವರ ಸರಕಾರವು ಆರ್ಥಿಕ ನಿಯೋಜನೆ ಪದ್ಧತಿಯ ಮೇಲೆ ನಿಂತಿರುತ್ತದೆ. ಉಳಿದ ಪದ್ಧತಿಗಿಂತಲೂ ಈ ಪದ್ಧತಿಗೆ ಹೆಚ್ಚು ಜ್ಞಾನದ ಅಗತ್ಯವಿದೆ. ದುರ್ದೈವಕ್ಕೆ ಹಿಂದಿ ಕಾರ್ಮಿಕರಿಗೆ ಅಧ್ಯಯನ ಅಗತ್ಯ ಇಂದಿಗೂ ಅನಿಸಲಿಲ್ಲ. ಕಾರ್ಖಾನೆದಾರರಿಗೆ, ಉದ್ಯೋಗಪತಿಗಳಿಗೆ ಬೈಯುವುದರ ಆಚೆಗೆ ಕಾರ್ಮಿಕ ಕಾರ್ಯಕರ್ತರು ಬೇರೆ ಏನೂ ಕಲಿಯಲೇ ಇಲ್ಲ!

ಈ ಕೊರತೆಯನ್ನು ಹೋಗಲಾಡಿಸುವು�

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News