×
Ad

ಚುನಾವಣಾ ಆಯೋಗದಿಂದ ಪಕ್ಷಪಾತ: ರಾಹುಲ್ ಗಾಂಧಿ

Update: 2019-05-04 20:56 IST

ಹೊಸದಿಲ್ಲಿ,ಮೇ 4: ನೀತಿ ಸಹಿತೆ ಉಲ್ಲಂಘನೆ ಆರೋಪಗಳ ಕುರಿತಂತೆ ಚುನಾವಣಾ ಆಯೋಗವು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ನೀಡಿರುವ ‘ಕ್ಲೀನ್ ಚಿಟ್’ಗೆ ಶನಿವಾರ ಇಲ್ಲಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಚುನಾವಣಾ ಆಯೋಗವು ಪ್ರತಿಪಕ್ಷಗಳ ಬಗ್ಗೆ ಸಂಪೂರ್ಣವಾಗಿ ಪೂರ್ವಗ್ರಹವನ್ನು ಹೊಂದಿದೆ ಎಂದು ಆರೋಪಿಸಿದರು.

ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ನೇತೃತ್ವದ ‘ಪೂರ್ಣ ಚುನಾವಣಾ ಆಯೋಗ’ದ ಸಭೆಯಲ್ಲಿ ಓರ್ವ ಚುನಾವಣಾ ಆಯುಕ್ತರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದರೂ ಆಯೋಗವು ಈ ಕ್ಲೀನ್ ಚಿಟ್‌ಗಳನ್ನು ನೀಡಿತ್ತು. ಇದು ಅದರ ನಿಷ್ಪಕ್ಷಪಾತ ನಿಲುವಿನ ಬಗ್ಗೆ ಪ್ರಶ್ನೆಗಳನ್ನು ಸೃಷ್ಟಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್,ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಪೋಷಕ ಆರೆಸ್ಸೆಸ್ ಚುನಾವಣಾ ಆಯೋಗ ಸೇರಿದಂತೆ ಎಲ್ಲ ಪ್ರಮುಖ ಸಂಸ್ಥೆಗಳ ಮೇಲೆ ಒತ್ತಡ ಹೇರುತ್ತಿವೆ ಎಂದೂ ಆರೋಪಿಸಿದರು.

ಐದು ಪ್ರಕರಣಗಳಲ್ಲಿ ಮೋದಿ ಮತ್ತು ಶಾ ಅವರನ್ನು ನೀತಿ ಸಂಹಿತೆ ಉಲ್ಲಂಘನೆ ಆರೋಪಗಳಿಂದ ಮುಕ್ತಗೊಳಿಸುವ ಬಹುಮತದ ಅಭಿಪ್ರಾಯಕ್ಕೆ ಓರ್ವ ಆಯುಕ್ತರು ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News