ಭಾರತವನ್ನು ಭದ್ರತಾ ಮಂಡಳಿಯ ಖಾಯಂ ಸದಸ್ಯರನ್ನಾಗಿ ಮಾಡಲು ಫ್ರಾನ್ಸ್ ಯತ್ನ

Update: 2019-05-07 17:14 GMT

 ವಿಶ್ವಸಂಸ್ಥೆ, ಮೇ 7: ಸುಧಾರಿತ ಹಾಗೂ ವಿಸ್ತರಿತ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಖಾಯಂ ಸದಸ್ಯರಾಗಿ ಭಾರತ, ಜರ್ಮನಿ, ಬ್ರೆಝಿಲ್ ಮತ್ತು ಜಪಾನ್ ಮುಂತಾದ ದೇಶಗಳನ್ನು ಸೇರಿಸಿಕೊಳ್ಳುವುದು ‘ಅತ್ಯಂತ ಅಗತ್ಯವಾಗಿದೆ’ ಎಂದು ವಿಶ್ವಸಂಸ್ಥೆಗೆ ಫ್ರಾನ್ಸ್ ರಾಯಭಾರಿ ಫ್ರಾಂಕೋಯಿಸ್ ಡೆಲಾಟರ್ ಹೇಳಿದ್ದಾರೆ.

ಸಮಕಾಲೀನ ವಾಸ್ತವಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬಿಂಬಿಸಲು ಈ ಕ್ರಮ ಅಗತ್ಯವಾಗಿದೆ ಎಂದು ಹೇಳಿರುವ ಅವರು, ಈ ಪ್ರಮುಖ ಸದಸ್ಯ ದೇಶಗಳನ್ನು ವಿಶ್ವಸಂಸ್ಥೆಯ ಅತ್ಯುನ್ನತ ವೇದಿಕೆಗೆ ಸೇರಿಸುವುದು ಫ್ರಾನ್ಸ್‌ನ ಆದ್ಯತೆಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದ್ದಾರೆ.

 ‘‘ಭದ್ರತಾ ಮಂಡಳಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಜೊತೆಯಾಗಿ ಕೆಲಸ ಮಾಡುವ ಪ್ರಬಲ ನೀತಿಯನ್ನು ಫ್ರಾನ್ಸ್ ಮತ್ತು ಜರ್ಮನಿಗಳು ಹೊಂದಿವೆ. ವಿಸ್ತರಣೆಯ ನಿಟ್ಟಿನಲ್ಲಿ ಮಾತುಕತೆಗಳನ್ನು ನಡೆಸುವ ನಿರ್ಧಾರಕ್ಕೂ ಅವು ಬಂದಿವೆ. ಜಗತ್ತನ್ನು ಅದು ಇರುವಂತೆ ಪ್ರತಿನಿಧಿಸಲು ಭದ್ರತಾ ಮಂಡಳಿಯ ವಿಸ್ತರಣೆ ಅತ್ಯಂತ ಅಗತ್ಯವಾಗಿದೆ ಎಂಬ ನಿಲುವನ್ನೂ ಈ ಎರಡು ರಾಷ್ಟ್ರಗಳು ಹೊಂದಿವೆ’’ ಎಂದು ಕಳೆದ ವಾರ ಸುದ್ದಿಗಾರರೊಂದಿಗೆ ಮಾತನಾಡಿದ ಫ್ರಾನ್ಸ್ ರಾಯಭಾರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News