ಫೆಲೆಸ್ತೀನ್-ಇಸ್ರೇಲ್ ಭೀಕರ ಸಂಘರ್ಷಕ್ಕೆ ವಿರಾಮ

Update: 2019-05-07 17:21 GMT

ಗಾಝಾ (ಫೆಲೆಸ್ತೀನ್), ಮೇ 7: ಪೂರ್ಣ ಪ್ರಮಾಣದ ಯುದ್ಧವಾಗಿ ಮಾರ್ಪಾಡಾಗುವ ಬೆದರಿಕೆ ಹುಟ್ಟಿಸಿದ್ದ ಎರಡು ದಿನಗಳ ಭೀಕರ ಸಂಘರ್ಷವನ್ನು ಕೊನೆಗೊಳಿಸುವ ಯುದ್ಧವಿರಾಮಕ್ಕೆ ಗಾಝಾದಲ್ಲಿರುವ ಫೆಲೆಸ್ತೀನ್ ನಾಯಕರು ಸೋಮವಾರ ಒಪ್ಪಿದ್ದಾರೆ.

ಈ ಬಗ್ಗೆ ಮಾಹಿತಿಯಿರುವ ಫೆಲೆಸ್ತೀನ್ ಅಧಿಕಾರಿಗಳು ಈ ವಿಷಯವನ್ನು ತಿಳಿಸಿದ್ದಾರೆ. ಆದರೆ, ಇದನ್ನು ಖಚಿತಪಡಿಸಲು ಇಸ್ರೇಲ್‌ನ ಸೇನಾ ವಕ್ತಾರೆಯೊಬ್ಬರು ನಿರಾಕರಿಸಿದ್ದಾರೆ.

ಆದಾಗ್ಯೂ, ಯುದ್ಧವಿರಾಮ ಜಾರಿಗೊಳ್ಳುವ ನಿಗದಿತ ಸಮಯದ ಬಳಿಕ ಫೆಲೆಸ್ತೀನ್ ಕಡೆಯಿಂದ ರಾಕೆಟ್‌ಗಳು ಹಾರಿಲ್ಲ ಹಾಗೂ ಇಸ್ರೇಲ್ ಕಡೆಯಿಂದ ವಾಯುದಾಳಿಗಳೂ ನಡೆದಿಲ್ಲ ಎಂದು ಗಾಝಾದಲ್ಲಿರುವ ಎಎಫ್‌ಪಿ ವರದಿಗಾರರೊಬ್ಬರು ತಿಳಿಸಿದರು.

ಸ್ಥಳೀಯ ಸಮಯ ಸೋಮವಾರ ಮುಂಜಾನೆ 4:30ಕ್ಕೆ ಜಾರಿಗೊಂಡ ಯುದ್ಧವಿರಾಮಕ್ಕಾಗಿ ಈಜಿಪ್ಟ್ ಮಧ್ಯಸ್ಥಿಕೆ ವಹಿಸಿತ್ತು.

ಈ ಘರ್ಷಣೆಯಲ್ಲಿ ಕನಿಷ್ಠ 9 ಹಮಾಸ್ ಬಂಡುಕೋರರು ಸೇರಿದಂತೆ ಕನಿಷ್ಠ 27 ಫೆಲೆಸ್ತೀನಿಯರು ಹಾಗೂ ನಾಲ್ವರು ಇಸ್ರೇಲಿಗರು ಪ್ರಾಣ ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News