ಅಮೆರಿಕದ ಘೋಷಣೆ ಮಾನಸಿಕ ಯುದ್ಧ ಮಾತ್ರ: ಇರಾನ್

Update: 2019-05-07 17:24 GMT

ದುಬೈ, ಮೇ 7: ಇರಾನ್‌ಗೆ ಸ್ಪಷ್ಟ ಸಂದೇಶ ನೀಡುವುದಕ್ಕಾಗಿ ಮಧ್ಯಪ್ರಾಚ್ಯಕ್ಕೆ ತಾನು ವಿಮಾನವಾಹಕ ಯುದ್ಧ ನೌಕೆ ಹಾಗೂ ಬಾಂಬರ್ ವಿಮಾನಗಳನ್ನು ಕಳುಹಿಸುತ್ತಿರುವುದಾಗಿ ಅಮೆರಿಕ ಮಾಡಿರುವ ಘೋಷಣೆಯು, ‘ಮಾನಸಿಕ ಯುದ್ಧ’ವಾಗಿದೆ ಎಂದು ಇರಾನ್‌ನ ಅತ್ಯುನ್ನತ ಭದ್ರತಾ ಸಂಸ್ಥೆ ‘ಸುಪ್ರೀಮ್ ನ್ಯಾಶನಲ್ ಸೆಕ್ಯುರಿಟಿ ಕೌನ್ಸಿಲ್’ ಹೇಳಿದೆ ಎಂದು ‘ತಸ್ನಿಮ್’ ಸುದ್ದಿ ಸಂಸ್ಥೆ ಮಂಗಳವಾರ ವರದಿ ಮಾಡಿದೆ.

‘ಅಬ್ರಹಾಮ್ ಲಿಂಕನ್’ ವಿಮಾನವಾಹಕ ಯುದ್ಧನೌಕೆ ಮತ್ತು ಬಾಂಬರ್ ಟಾಸ್ಕ್‌ಫೋರ್ಸನ್ನು ಅಮೆರಿಕ ಮಧ್ಯಪ್ರಾಚ್ಯಕ್ಕೆ ನಿಯೋಜಿಸಿದೆ ಎಂಬುದಾಗಿ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ರವಿವಾರ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

‘‘ಬೋಲ್ಟನ್‌ರ ಹೇಳಿಕೆಯು ಮಾನಸಿಕ ಯುದ್ಧಕ್ಕಾಗಿ ನೀಡಿದ ಸವಕಳಿ ಮಾತುಗಳಾಗಿವೆ’’ ಎಂದು ಕೌನ್ಸಿಲ್‌ನ ವಕ್ತಾರ ಕೆಯ್ವಾನ್ ಖೋಸ್ರವಿ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News