ಮಲಗುಂಡಿಗೆ ಇಳಿದ ಇಬ್ಬರು ಸಾವು

Update: 2019-05-07 17:29 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಮೇ 7: ವಾಯುವ್ಯ ದಿಲ್ಲಿಯ ಮನೆಯೊಂದರ ಮಲಗುಂಡಿಗೆ ಇಳಿದು ಅಸ್ವಸ್ತರಾಗಿದ್ದ ಐವರು ಕಾರ್ಮಿಕರಲ್ಲಿ ಇಬ್ಬರು ಮೃತಪಟ್ಟಿದ್ದು, ಇನ್ನು ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರೋಹಿಣಿಯ ಪ್ರೇಮ್‌ನಗರ್ ಪ್ರದೇಶದಲ್ಲಿ ಮಂಗಳವಾರ ಅಪರಾಹ್ನ ಈ ಘಟನೆ ನಡೆದಿದೆ. ನವೀಕರಣಗೊಳ್ಳುತ್ತಿರುವ ಹಳೆಯ ಮನೆಯೊಂದರ ಮಲಗುಂಡಿ ಸ್ವಚ್ಛಗೊಳಿಸಲು ಈ ಐವರು ಕಾರ್ಮಿಕರು ಇಳಿದಿದ್ದರು ಎಂದು ಪೊಲೀಸ್ ಉಪ ಆಯುಕ್ತ ಎಸ್.ಡಿ. ಮಿಶ್ರಾ ಹೇಳಿದ್ದಾರೆ.

ಮಲಗಂಡಿಯಲ್ಲಿ ವಿಷಗಾಳಿ ಸೇವಿಸಿ ಅಸ್ವಸ್ಥಗೊಂಡ ಐವರನ್ನು ಕೂಡಲೇ ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಯಲ್ಲಿ ದಾಖಲಿಸ ಲಾಯಿತು. ಆದರೆ, ಇವರಲ್ಲಿ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಉಳಿದ ಮೂವರಿಗೆ ಚಿಕಿತ್ಸೆ ಮುಂದುವರಿಯುತ್ತಿದೆ ಎಂದು ಮಿಶ್ರಾ ತಿಳಿಸಿದ್ದಾರೆ.

ಮೃತಪಟ್ಟ ಕಾರ್ಮಿಕರನ್ನು ದೀಪಕ್ (30), ಹಾಗೂ ಗಣೇಶ್ (35) ಎಂದು ಗುರುತಿಸಲಾಗಿದೆ. ಇವರಿಬ್ಬರೂ ಪ್ರೇಮ್‌ನಗರದ ನಿವಾಸಿಗಳು ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ ಎಂದು ಮಿಶ್ರಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News