ನಾನು ಎನ್‌ಸಿಪಿಗೆ ಹಾಕಿದ್ದ ಮತ ಬಿಜೆಪಿಗೆ ಹೋಗಿದ್ದನ್ನು ಕಂಡಿದ್ದೆ: ಶರದ್ ಪವಾರ್

Update: 2019-05-09 18:25 GMT

  ಹೊಸದಿಲ್ಲಿ,ಮೇ 8: ಚುನಾವಣೆಗಳಲ್ಲಿ ವಿದ್ಯುನ್ಮಾನ ಮತದಾನ ಯಂತ್ರ(ಇವಿಎಂ)ಗಳ ಬಳಕೆಯ ಬಗ್ಗೆ ಗುರುವಾರ ಕಳವಳವನ್ನು ವ್ಯಕ್ತಪಡಿಸಿದ ಎನ್‌ಸಿಪಿ ವರಿಷ್ಠ ಶರದ್ ಪವಾರ್ ಅವರು, ಹಿಂದೊಮ್ಮೆ ಪ್ರಾತ್ಯಕ್ಷಿಕೆಯ ಸಂದರ್ಭದಲ್ಲಿ ಇವಿಎಮ್‌ನಲ್ಲಿ ತಾನು ತನ್ನ ಪಕ್ಷಕ್ಕೆ ಚಲಾಯಿಸಿದ್ದ ಮತ ಬಿಜೆಪಿಗೆ ಹೋಗಿದ್ದನ್ನು ಕಂಡಿದ್ದೆ ಎಂದು ಹೇಳಿದರು.

ಆದರೆ ಎಲ್ಲ ಇವಿಎಮ್‌ಗಳೂ ಹೀಗೆಯೇ ಕಾರ್ಯ ನಿರ್ವಹಿಸುತ್ತವೆ ಎಂದು ತಾನು ಹೇಳುವುದಿಲ್ಲ ಎಂದರು.

‘‘ಇವಿಎಮ್‌ಗಳ ಬಗ್ಗೆ ನನಗೂ ಕಳವಳವಿದೆ. ಹೈದರಾಬಾದ್ ಮತ್ತು ಗುಜರಾತ್‌ನಲ್ಲಿ ಕೆಲವು ವ್ಯಕ್ತಿಗಳು ನನ್ನ ಮುಂದೆ ಇವಿಎಂ ಇರಿಸಿ ಬಟನ್ ಒತ್ತುವಂತೆ ಸೂಚಿಸಿದ್ದರು. ನಾನು ಪಕ್ಷದ ಚಿಹ್ನೆಯಾದ ವಾಚ್ ಒತ್ತಿದ್ದೆ,ಆದರೆ ಮತ ಕಮಲ(ಬಿಜೆಪಿ ಚಿಹ್ನೆ)ದ ಪರ ಚಲಾವಣೆಯಾಗಿತ್ತು. ಇದನ್ನು ನಾನೇ ಖುದ್ದಾಗಿ ನೋಡಿದ್ದೇನೆ’’ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಪವಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News