×
Ad

ರಜಾಕಾಲದ ಪೀಠಗಳಿಗೆ ಸುಪ್ರೀಂ ಕೋರ್ಟ್ ಸೂಚನೆ

Update: 2019-05-10 22:56 IST

ಹೊಸದಿಲ್ಲಿ, ಮೇ 10: ಸುಪ್ರೀಂ ಕೋರ್ಟ್‌ನ ಬೇಸಿಗೆ ರಜಾ ಕಾಲದಲ್ಲಿ ಪ್ರಕರಣಗಳ ವಿಚಾರಣೆಗೆ ನ್ಯಾಯಾಲಯ ಶುಕ್ರವಾರ ರಜಾಕಾಲದ ಪೀಠಕ್ಕೆ ಸೂಚನೆ ನೀಡಿದೆ. ಮೇ 25ರಿಂದ 30ರ ವರೆಗೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ರಜಾಕಾಲದ ಪೀಠದ ಭಾಗವಾಗಿರಲಿದ್ದಾರೆ ಎಂದು ಬಾರ್ ಆ್ಯಂಡ್ ಬೆಂಚ್ ವರದಿ ಮಾಡಿದೆ.

ಬೇಸಿಗೆ ರಜೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮೇ 13ರಂದು ಮುಚ್ಚಲಿದೆ. ಜುಲೈ 1ರಂದು ಮರು ಆರಂಭವಾಗಲಿದೆ. ಮೇ 13ರಿಂದ 20ರ ವರೆಗೆ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಹಾಗೂ ಸಂಜೀವ್ ಖನ್ನಾ ರಜಾಕಾಲದ ಪೀಠದ ಭಾಗವಾಗಿರಲಿದ್ದಾರೆ.

ಮೇ 21ರಿಂದ 24ರ ವರೆಗೆ ಅವರ ಸ್ಥಾನದಲ್ಲಿ ನ್ಯಾಯಮೂರ್ತಿ ಅರುಣ್ ಮಿಶ್ರಾ ಹಾಗೂ ಎಂ.ಆರ್. ಶಾ ಕಾರ್ಯ ನಿರ್ವಹಿಸಲಿದ್ದಾರೆ. ಮೇ 25ರಿಂದ 30ರ ವರೆಗೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಹಾಗೂ ನ್ಯಾಯಮೂರ್ತಿ ಎಂ.ಆರ್. ಶಾಹ್ ಕರ್ತವ್ಯ ನಿರ್ವಹಿಸಲಿದ್ದಾರೆ. ಮೇ 31ರಿಂದ ಜೂನ್ 2ರ ವರೆಗೆ ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಹಾಗೂ ಎಂ.ಆರ್. ಶಾ ರಜಾಕಾಲದ ಪೀಠದ ಭಾಗವಾಗಿರಲಿದ್ದಾರೆ. ಜೂನ್ 5ರ ವರೆಗೆ ಎಂ.ಆರ್. ಶಾ ಕರ್ತವ್ಯ ನಿರ್ವಹಿಸಲಿದ್ದಾರೆ ಜೂನ್ 2ರಿಂದ ಅವರೊಂದಿಗೆ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಸೇರಲಿದ್ದಾರೆ. ಜೂನ್ 6ರಿಂದ 13ರ ವರೆಗೆ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಹಾಗೂ ಅಜಯ್ ರಸ್ತೋಗಿ ಪ್ರಕರಣಗಳ ವಿಚಾರಣೆ ನಡೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News